KSRTC : ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿದ್ದು, ಹಲವಾರು ಪ್ರಯಾಣಿಕರಿದ್ದ ಈ ಬಸ್ ನಲ್ಲಿ 20 ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ ಎಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೇ ಅವರನ್ನು ಹೊನ್ನಾವರ ಆಸ್ಪತ್ರೆಗೆ ದಾಖಲಿಸಿದ್ದು, ಬಾದಾಮಿಯಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಎಂದು ತಿಳಿದುಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸೂಳೆಮೂರ್ಕಿ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಬಾದಾಮಿಯಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್ 40 ಕ್ಕೂ ಹೆಚ್ಚು ಜನರಿದ್ದು, ದೇವರ ದರ್ಶನಕ್ಕೆ ಎಂದು ಬೆಳಗ್ಗೆ ಬಸ್ ನಲ್ಲಿ ತೆರಳುತ್ತಿದ್ದರೆನ್ನಲಾಗಿದೆ.
ಚಾಲಕನ ಬೇಜಾವಾಬ್ದಾರಿಯಿಂದ ನಡೆದ ಘಟನೆ :
ಅಪಘಾತಕ್ಕೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬಸ್ ಚಾಲಕನ ಅಜಾಗರೂಕತೆ, ರಸ್ತೆಯ ಸ್ಥಿತಿ ಅಥವಾ ಇತರ ವಾಹನಗಳೊಂದಿಗೆ ಡಿಕ್ಕಿ ಆಗಿರಬಹುದು ಎಂದು ಅನುಮಾನಿಸಲಾಗಿದೆ. ಸೂಳೆಮೂರ್ಕಿ ಕ್ರಾಸ್ ಬಳಿ ರಸ್ತೆ ಸ್ವಲ್ಪ ತಿರುವುಗಳಾಗದ್ದು ಮತ್ತು ಕೆಲವೊಮ್ಮೆ ಜಾರುವ ಸಾಧ್ಯತೆ ಇರುತ್ತದೆ. ಬಸ್ ವೇಗವಾಗಿ ಬಂದು ಚಾಲಕ ನಿಯಂತ್ರಣ ತಪ್ಪಿಸಿಕೊಂಡು ಪಲ್ಟಿಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಬಸ್ ರಸ್ತೆ ಪಕ್ಕಕ್ಕೆ ಬಿದ್ದು ದೊಡ್ಡ ಶಬ್ದ ಕೇಳಿಬಂದಿದೆ. ಸುತ್ತಮುತ್ತಲಿನ ಜನರು ಧಾವಿಸಿ ಬಂದು ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದರು.
ಇದನ್ನೂ ಓದಿ :Roopesh Shetty: ಜೈ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್..ರೂಪೇಶ್ ಶೆಟ್ಟಿ ಟ್ಯಾಲೆಂಟ್ ಮೆಚ್ಚಿದ ಜನ!
……….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/lAkKmmGp2KI?si=tN1FfmnSl3fWdPST











