ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಮಂಗಳೂರು

Roopesh Shetty: ಜೈ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್..ರೂಪೇಶ್‌ ಶೆಟ್ಟಿ ಟ್ಯಾಲೆಂಟ್‌ ಮೆಚ್ಚಿದ ಜನ!

Roopesh Shetty: ರೂಪೇಶ್​ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಜೈ’ ಸಿನಿಮಾ ಜನ ಮನ ಗೆದ್ದಿದ್ದು ಜೈ ಸಿನಿಮಾ ತುಳು ಮತ್ತು ಕನ್ನಡ ಎರಡು ಭಾಷೆಯಲ್ಲೂ ರಿಲೀಸ್ ಆಗಿ, ಭರ್ಜರಿ ರೆಸ್ಪಾನ್ಸ್‌ ಪಡೆಯುತ್ತಿದೆ.

ಇದನ್ನೂ ಓದಿ: ನಂಗೆ ಅವರು ಬೇಕಾದಾಗ ಸಿಗ್ತಿರಲಿಲ್ಲ..ವಿದೇಶಕ್ಕೆ ಹೋಗ್ತಿದ್ರು.. ಸಂತ್ರಸ್ಥೆ ನಟಿ ಕಣ್ಣೀರು!

ಬಿಗ್‌ಬಾಸ್ ಮೂಲಕ ಮನೆ ಮಾತಾಗಿದ್ದ ರೂಪೇಶ್ ಶೆಟ್ಟಿ ಇಷ್ಟೊಂದು ಚಂದವಾಗಿ ನಿರ್ದೇಶನವನ್ನು ಮಾಡ್ತಾರೆ ಅನ್ನೋದು ಮಾತ್ರ ಜೈ ಮೂಲಕ ಗೊತ್ತಾಗಿದಂತಿದೆ. ಇದೀಗ ಇವರು ಮತ್ತೆ ಜೈ ಸಿನಿಮಾ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ.  ಬಾಲಿವುಡ್ ಸುನೀಲ್ ಶೆಟ್ಟಿ ನಟಿಸಿರುವ ಜೈ ಸಿನಿಮಾ ಈ ವಾರವಷ್ಟೇ ತೆರೆಗೆ ಬಂದಿದೆ. ರಿಲೀಸ್ ಗೂ ಮುನ್ನ ಸಿನಿಮಾವನ್ನು ಒಂದಷ್ಟು ಜನರಿಗೆ ತೋರಿಸುವ ಪ್ರಯತ್ನವಾಗಿತ್ತು. ದುಬೈ, ಮಂಗಳೂರು, ಉಡುಪಿ ಭಾಗದಲ್ಲೂ ರಿಲೀಸ್ ಗೂ ಮುನ್ನವೇ ಸಿನಿಮಾದ ಪ್ರೀಮಿಯರ್ ಮಾಡಲಾಗಿತ್ತು.

ಇದನ್ನೂ ಓದಿ: ರಕ್ಷಿತಾ ಗಿಲ್ಲಿಗೆ ಕಿಚ್ಚನ ಕ್ಲಾಸ್‌ ಹೇಗಿತ್ತು..? ಗಾಬರಿಯಾದ ಗಿಲ್ಲಿ ನಟ!

ರೂಪೇಶ್ ಶೆಟ್ಟಿ ಸಿನಿಮಾಗೆ  ಕಿಚ್ಚ ಸುದೀಪ್, ಶ್ರೀಮುರುಳಿ, ಕನ್ನಡ ಇಂಡಸ್ಟ್ರಿಯ ಬಿಗ್ ಸ್ಟಾರ್ ಗಳೇ ಜೊತೆಯಾಗಿ ನಿಂತಿದ್ದಾರೆ. ಅದರಲ್ಲೂ ಕಿಚ್ಚ ಸುದೀಪ್ ಅವರು  501 ರೂಪಾಯಿ ಕೊಟ್ಟು ಸಿನಿಮಾ ನೋಡುವುದಾಗಿ ಹೇಳಿ, ಚಿತ್ರತಂಡಕ್ಕೂ ಆಲ್ ದಿ ಬೆಸ್ಟ್ ಹೇಳಿದ್ದಾರೆ.

ರೂಪೇಶ್ ಶೆಟ್ಟಿ ಅವರ ಜೈ ಸಿನಿಮಾ ಮಾಡಿದ ಸಾಧನೆ ಒಂದೆರಡಲ್ಲ. ರೂಪೇಶ್ ಶೆಟ್ಟಿ ಅವರ ಜೊತೆಗೆ ನಿಂತವರು ಹಲವರು. ಆದ್ರೆ ರೂಪೇಶ್ ಶೆಟ್ಟಿ ಸ್ನೇಹಿತರು ಸೋನಿಯಾ ರೊಡ್ರಿಗಸ್ ಶೆಟ್ಟಿ, ಸಚಿನ್, ಭವಿಶ್ನ ಶೆಟ್ಟಿ, ಕಿರಣ್ ಅಂಧ್ಯಂತಾಯ, ದಿಶಿತ್ ಶೆಟ್ಟಿ, ಅನಿಲ್ ದಾಸ್ ಹೀಗೆ ಹಲವು ಸ್ನೇಹಿತರೇ ಶೋಗಳನ್ನ ಆಯೋಜನೆ ಮಾಡಿದ್ದಾರೆ.  ಮಂಗಳೂರು ಉಡುಪಿ ಭಾಗದಲ್ಲಿ ಜೈ ಮೂವಿ PAID ಪ್ರೀಮಿಯರ್ಸ್ ನಲ್ಲಿ ಹೊಸ ದಾಖಲೆ ಬರೆದಿದ್ದು, 6,000 ಜನ 15 ಪ್ಲಸ್ ಶೋಸ್ ಜೈ ಮೂವಿ ರಿಲೀಸ್ ಮುನ್ನವೇ ಹೊಸ ರೆಕಾರ್ಡ್ ಬರೆದಿದೆ. ಸಿನಿಮಾ ನೋಡಿದವರೆಲ್ಲ ರೂಪೇಶ್ ಶೆಟ್ಟಿ ನಟನೆ, ನಿರ್ದೇಶನ, ಸುನೀಲ್ ಶೆಟ್ಟಿ ಅವರನ್ನು ತುಳು ಸಿನಿಮಾದಲ್ಲಿ ನೋಡಿ ಜನ ಖುಷಿ ಪಟ್ಟಿದ್ದಾರೆ. ರೂಪೇಶ್ ಶೆಟ್ಟಿ ಬಿಗ್ ಬಾಸ್ ನಲ್ಲಿ ಗೆದ್ದದ್ದಲ್ಲ, ಸಿನಿಮಾದಲ್ಲೂ ಗೆದ್ದಿದ್ದಾರೆ ಎಂಬ ಹೊಗಳಿಕೆಯ ಮಾತನ್ನ ಹೇಳ್ತಿದ್ದಾರೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 171

You cannot copy content of this page