ಬ್ರೇಕಿಂಗ್ ನ್ಯೂಸ್
ಕರ್ನಾಟಕ

Arvind Reddy Case: ನಂಗೆ ಅವರು ಬೇಕಾದಾಗ ಸಿಗ್ತಿರಲಿಲ್ಲ..ವಿದೇಶಕ್ಕೆ ಹೋಗ್ತಿದ್ರು.. ಸಂತ್ರಸ್ಥೆ ನಟಿ ಕಣ್ಣೀರು!

Arvind Reddy Case: ನಟಿಯೊಬ್ಬರಿಗೆ ನಿರ್ಮಾಪಕ ಕಿರುಕುಳ ಕೊಟ್ಟಿರೋ ಆರೋಪ ಕೇಳಿಬಂದಿದ್ದು, ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ನಟಿ ತನಗಾದ ನೋವನ್ನು ಮಾಧ್ಯಗಳಿಗೆ ತಿಳಿಸಿದ್ದಾರೆ. ಪ್ರೀತಿಯೋ? ವ್ಯವಹಾರದ ನಂಟೋ? ನಟಿ-ನಿರ್ಮಾಪಕನ ನಡುವೆ ಶುರುವಾಗಿದ್ದ ಸ್ನೇಹ ಇದೀಗ ಕಿರುಕುಳ ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಚಿತ್ತರಂಗದಲ್ಲಿ ಸುದ್ದಿಯಾಗುತ್ತಿದೆ.

ಸಂತ್ರಸ್ಥ ನಟಿ ಹೇಳಿದ್ದೇನು..?

ಬಿಗ್‌ ಬಾಸ್‌ ಮನೆಗೆ ಹೋಗಿದ್ದ ನಟಿ ಈಗ ಕಿರುಕುಳದ ಆರೋಪ ಮಾಡಿದ್ದು, ನಿರ್ಮಾಪಕನೊಬ್ಬರಿಂದ ಈ ರೀತಿಯಾದ ತೊಂದರೆಯಾಗಿದೆ ಎಂದು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.ಈ ಬಗ್ಗೆ ಕಣ್ಣೀರು ಹಾಕಿದ ನಟಿ,  ನಾನು ಬಯಸಿದಾಗ ನನ್ನೊಟ್ಟಿಗಿರಲಿಲ್ಲ, ದೂರ ಹೋಗ್ಬೇಕು ಅಂದಾಗ ಹತ್ತಿರ ಬರ್ತಿದ್ರು,  ಎರಡೂವರೆ ವರ್ಷಗಳ ಹಿಂದಷ್ಟೇ ಪರಿಚಯವಾಗಿತ್ತು. ಒಂದು ವರ್ಷ ಅಷ್ಟೇ ಜೊತೆಗೆ ಇದ್ದಿದ್ದು. ನಾನು ಬಯಸಿದಾಗ ಅವರು ನನ್ನೊಟ್ಟಿಗೆ ಇರುತ್ತಿರಲಿಲ್ಲ. ಹೇಳದೇ ಕೇಳದೇ ವಿದೇಶ ಹೋಗಿಬಿಡ್ತಿದ್ರು. ಒಂದೊಂದು ತಿಂಗಳು ಸಂಪರ್ಕಕ್ಕೇ ಸಿಗುತ್ತಿರಲಿಲ್ಲ. ಇದರಿಂದ ನಾನು ಮಾನಸಿಕ ಹಿಂಸೆ ಅನುಭವಿಸುತ್ತಿದ್ದೆ. ಎಂದು ಸಂತ್ರಸ್ತ ನಟಿ ಹೇಳಿಕೊಂಡಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ಪರಿಚಯ ಆಗಿ, ಕೆಲ ತಿಂಗಳು ರಿಲೇಷನ್‌ಶಿಪ್‌ನಲ್ಲಿದ್ವಿ, ನಂತರದ ದಿನಗಳಲ್ಲಿ  ನನ್ನ ಲೈಫ್‌ಸ್ಟೈಲ್‌, ಅವರ ಲೈಫ್‌ಸ್ಟೈಲ್‌ ಆಗಲಿ, ಇಬ್ಬರ ಬಿಹೇವಿಯರ್‌  ಚೆನ್ನಾಗಿರಲಿಲ್ಲ. ಇದರಿಂದ ನೆಮ್ಮದಿ ಇರಲಿಲ್ಲ. ಮಾನಸಿಕವಾಗಿ ತುಂಬಾ ನೊಂದಿರುವೆ ಎಂದು ನಟಿ ಭಾವುಕರಾಗಿದ್ದಾರೆ.

ಲಿವ್‌ ಇನ್‌ ರಿಲೇಶನ್‌ ಶಿಪ್‌ ನಲ್ಲಿ ಇದ್ವಿ!

ಮೀಟ್‌ ಮಾಡಬೇಕಾದಾಗ ನಾನೇ ಅವರ ಮನೆಗೆ ಹೋಗ್ತಿದೆ. ಏಕೆಂದರೆ, ನಾನು ಇದ್ದದ್ದು ಬಾಡಿಗೆ ಮನೆಯಲ್ಲಿ. ದಿನಗಳು ಹೋದಂತೆ ಇಬ್ಬರಿಗೂ ಹೊಂದಾಣಿಕೆ ಆಗುತ್ತಿರಲಿಲ್ಲ. ಕಳೆದ ಒಂದು ವರ್ಷದಿಂದ ಟಚ್‌ನಲ್ಲೇ ಇರಲಿಲ್ಲ, ಬರೀ ಜಗಳದಲ್ಲೇ ನಡೆಯುತ್ತಿತ್ತು. ಇದರಿಂದ ನನಗೆ ಮಾನಸಿಕವಾಗಿ ತೊಂದರೆ ಆಗ್ತಿತ್ತು. ಇಬ್ಬರೂ ಚೆನ್ನಾಗಿದ್ದದ್ದು 6 ತಿಂಗಳು ಅಷ್ಟೇ, ಇನ್ನಾರು ತಿಂಗಳು ಆಚೆ ಬರುವ ಮನಸ್ಥಿತಿಯಲ್ಲಿದೆ. ಜೊತೆಯಲ್ಲಿದ್ದು ಸಫರ್‌ ಪಡೋದಕ್ಕಿಂತ ದೂರವಾಗೋದೆ ಒಳ್ಳೆಯದು ಅಂತ ನಿರ್ಧಾರ ಮಾಡಿದೆವು ಅಂತ ಹೇಳಿಕೊಂಡಿದ್ದಾರೆ. ನಿರ್ಮಾಪಕ, ಉದ್ಯಮಿ ಅರವಿಂದ್‌ ರೆಡ್ಡಿ, ಅವಳಿಗಾಗಿ ʻ3 ಕೋಟಿ ರೂ. ಖರ್ಚು ಮಾಡಿ, ಸೈಟ್, ದುಬಾರಿ ಕಾರು ಕೊಡಿಸಿದ್ದೆ. ಆದರೆ ಅವಳು ಬೇರೆಯವನ ಜೊತೆ ಕಾಣಿಸಿಕೊಳ್ಳುತ್ತಿದ್ದಳು ಅಂತ ಹೇಳಿಕೊಂಡಿದ್ದರು.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page