ಬ್ರೇಕಿಂಗ್ ನ್ಯೂಸ್
ಕರ್ನಾಟಕ

BBK12: ರಕ್ಷಿತಾ ಗಿಲ್ಲಿಗೆ ಕಿಚ್ಚನ ಕ್ಲಾಸ್‌ ಹೇಗಿತ್ತು..? ಗಾಬರಿಯಾದ ಗಿಲ್ಲಿ ನಟ!

BBK12: ಬಿಗ್ ಬಾಸ್ ಮನೆಯಲ್ಲಿ ಈ ವಾರ ಕಿಚ್ಚ ಮನೆ ಮಂದಿಗೆ ಎಲ್ಲಾ ಸಕತ್ತಾಗಿ ಕ್ಲಾಸ್ ಕೊಟ್ಟಿದ್ದಾರೆ ಅದರಲ್ಲೂ ಗಿಲ್ಲಿ ಹಾಗೂ ರಕ್ಷಿತಾ ಶೆಟ್ಟಿಗೆ ಕಿಚ್ಚ ಒಂದಿಷ್ಟು ಹೆಚ್ಚಾಗಿಯೇ ಹೇಳಿದ್ದಾರೆ ಇದರ ಬಗ್ಗೆ ಇವತ್ತು ಈ ಸ್ಟೋರಿಯಲ್ಲಿ..

ಇದನ್ನೂ ಓದಿ: ನಿಮ್ಮ ಮನೆಯಲ್ಲಿ ಹಕ್ಕಿ ಗೂಡುಕಟ್ಟಿದ್ಯಾ..? ಹಾಗಾದ್ರೆ ಲಕ್‌ ಖುಲಾಯಿಸ್ತು ಅನ್ಕೊಳ್ಳಿ!

ಪ್ರತಿ ವಾರ ವೀಕೆಂಡ್ ಬಂದಾಗ ಕಿಚ್ಚ ಸುದೀಪ್ ಅವರು ಯಾರಿಗೆ ಕ್ಲಾಸ್ ತೊಗೊಳ್ತಾರೆ ಅಂತ ಪ್ರೇಕ್ಷಕರು ಕಾಯ್ತಾ ಇರುತ್ತಾರೆ ಈ ವಾರದಲ್ಲಿ ಕಿಚ್ಚ ಮನೆ ಮಂದಿಗೆ ಎಲ್ಲರಿಗೂ ಕೂಡ ಸಿಕ್ಕಾಪಟ್ಟೆ ಕ್ಲಾಸ್ ತಗೊಂಡಿದ್ದಾರೆ. ಗಿಲ್ಲಿ ಹಾಗೂ ರಕ್ಷಿತಾ ಶೆಟ್ಟಿಗೆ ಬೈದಿದ್ದಾರೆ. ಇದರಿಂದ ಗಿಲ್ಲಿ ಕೊಂಚ ಡಲ್ ಆಗಿದ್ದಾರೆ. ರಕ್ಷಿತಾ ಶೆಟ್ಟಿ ಅವರಿಗೂ ಕೂಡ ಕಿಚ್ಚ ಸುದೀಪ್ ಅವರು ಖಡಕ್ಕಾಗಿ ವಾರ್ನಿಂಗ್ ಕೊಡುತ್ತಾರ ಮಾತನಾಡಿದ್ದಾರೆ. ತಮ್ಮ ಮಾತುಗಳಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸುದ್ದಿಯಲ್ಲಿರುವ ಗಿಲ್ಲಿ ಈ ಬಾರಿ ಕಿಚ್ಚನ ಜೊತೆ ಮಾತನಾಡುವಾಗ ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ: ತಾಲೂಕು ಮಟ್ಟದ ‘ವರ್ಣ ಚಿತ್ತಾರ – 2025’ : ಚಿತ್ರಕಲಾ‌ ಸ್ಪರ್ಧೆ

ಈ ಹಿಂದೆಯಿಂದಲೂ ಗಿಲ್ಲಿ ನಟ ಮಾಡುವ ತಮಾಷೆ ಬೇರೆಯವರಿಗೆ ನೋವುಂಟು ಮಾಡುತ್ತಿದೆ ಎಂದು ಮನೆಯ ಮಂದಿ ಹೇಳುತ್ತಿದ್ದರು.  ಜೊತೆಗೆ ಗಿಲ್ಲಿ ನಟ ಮತ್ತು ರಿಷಾ ಗೌಡ ನಡುವೆ ನಡೆದ ಜಗಳ ಈ ಹಿಂದಿನ ವೀಕೆಂಡ್ ಸಂಚಿಕೆಯಲ್ಲಿ ಸದ್ದು ಮಾಡಿತ್ತು. ಗಿಲ್ಲಿ ಮೇಲೆ ಹಲ್ಲೆ ನಡೆಸಿದರೂ ಮನೆಯಲ್ಲಿರುವ ಸ್ಪರ್ಧಿಗಳಿಂದಾಗಿ ರಿಷಾ ಉಳಿದುಕೊಂಡಿದ್ದಾರೆ. ಇದನ್ನೂ ಕೂಡ ಕಿಚ್ಚ ಮಾತನಾಡಿದ್ದು, ಅದೇ ಸ್ಥಾನದಲ್ಲಿ ಹುಡುಗರು ಇರ್ತಿದ್ರೆ ಮನೆಯಲ್ಲಿ ಉಳಿದುಕೊಳ್ಳಲು ಅವಕಾಶವೇ ಇರುತ್ತಿರಲಿಲಗಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಡಿಸೆಂಬರ್ 16 ರಂದು ನಡೆಯಲಿದೆ ಮುಂದಿನ ಸೀಸನ್ ನ‌ ಮಿನಿ ಹರಾಜು

ಇನ್ನು ಈ ವಾರದಲ್ಲಿ ಗಿಲ್ಲಿ ಟಾಸ್ಕ್‌ ಗಳನ್ನು ಹಾಳು ಮಾಡಿದ್ದೇ ಹೆಚ್ಚು.ಇದರಿಂದ ಇಡೀ ಟೀಂ ಬೇಸರಗೊಂಡಿತ್ತು, ಆಟವನ್ನು ನೀಟ್‌ ಆಗಿ ಆಡದೇ ಪ್ರತೀ ಬಾರಿ ತಮಾಷೆನ್ನೇ ಮಾಡಿಕೊಂಡು ಇದ್ದದ್ದು ಹೆಚ್ಚು. ಇದರಿಂದ ಮನೆಯವರೆಲ್ಲರೂ ಗಿಲ್ಲಿಯನ್ನು ವಿರೋಧಿಸಿದ್ದೂ ಇದೆ.  ಅಶ್ವಿನಿ ಗೌಡ ಹಾಗೂ ಗಿಲ್ಲಿ ಪರಸ್ಪರ ಜಗಳ ಮಾಡಿಕೊಂಡಿದ್ದರು, ಅದನ್ನೂ ಕೂಡ ಕಿಚ್ಚ ತೋರಿಸಿದ್ದಾರೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ:  https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page