Birds Vastu Tips: ನಿಮ್ಮ ಮನೆಯ ಸುತ್ತ ಅಥವಾ ಮನೆಯ ಒಳಗಡೆ ಹಕ್ಕಿಗಳು ಗೂಡು ಕಟ್ಟುತ್ತಿವೆಯೇ ಹಾಗಾದರೆ ಇದು ನಿಮ್ಮ ಜೀವನದಲ್ಲಿ ಯಾವ ರೀತಿಯಾದಂತಹ ಪರಿಣಾಮ ಬೀರುತ್ತದೆ ಇದು ಒಳ್ಳೆಯದು ಅಥವಾ ಕೆಟ್ಟದ್ದು ಎನ್ನುವುದನ್ನು ಈ ಸ್ಟೋರಿಯಲ್ಲಿ ಓದೋಣ..
ಇದನ್ನೂ ಓದಿ: ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ಸ್ ಮಕ್ಕಳ ಜೊತೆ ಫಾರಿನ್ ಟ್ರಿಪ್ !
ನಿಮ್ಮ ಮನೆಯನ್ನು ಪಕ್ಷಿಗಳು ಬಿಟ್ಟು ಹೋಗೋದಿಲ್ವಾ..?
ಸಾಮಾನ್ಯವಾಗಿ ಹಕ್ಕಿಗಳು ಮನೆಯ ಸುತ್ತಮುತ್ತ ಓಡಾಡುತ್ತವೆ. ಅದರಲ್ಲೂ ಕಾಡು, ಮರ ಗಿಡಗಳು ಹತ್ತಿರ ಇದ್ದರೆ ಅಂತೂ ಹಕ್ಕಿಗಳು ಹೆಚ್ಚಾಗಿ ಮನೆಯ ಆವರಣದಲ್ಲಿ ಕಾಣಿಸಿಕೊಳ್ಳುತ್ತವೆ. ಜೊತೆಗೆ ತಮಗೆ ಇಷ್ಟವಾದಂತಹ ಜಾಗದಲ್ಲಿ ಗೂಡನ್ನು ಕಟ್ಟುತ್ತವೆ. ಮನೆಯ ಒಳಗಡೆ ಸಂಧಿ ಗೊಂದಿಯಲ್ಲಿ ಹಕ್ಕಿಗಳು ಹಾರಾಡಿಕೊಂಡು ಬಂದು ಅಲ್ಲಿಯೇ ಮನೆಯನ್ನು ಮಾಡಿ ಜೀವನ ನಡೆಸುತ್ತವೆ. ಇದು ಕೆಲವೊಮ್ಮೆ ಒಳ್ಳೆಯದು.. ಇನ್ನೂ ಕೆಲವೊಮ್ಮೆ ಕೆಟ್ಟದು ಅಂತ ಭಾವಿಸೋ ಮಂದಿ ಬಹಳಷ್ಟಿದ್ದಾರೆ. ಖಂಡಿತವಾಗಿಯೂ ಈ ತರ ಗೂಡು ಕಟ್ಟುವುದು ಕೆಟ್ಟದು ಅಲ್ಲ ಅಂತ ಹೇಳಲಾಗುತ್ತದೆ. ಅದರಲ್ಲೂ ವಾಸ್ತು ಹಕ್ಕಿಗಳು ಮನೆಯ ಒಳಗೆ ಬಂದು ಗೂಡು ಕಟ್ಟಿದರೆ ಇನ್ನೂ ಒಳ್ಳೆಯದು ಅಂತಾರೆ.
ಇದನ್ನೂ ಓದಿ: ಕೊಡಗಿನ ಕಾಫಿ ತೋಟದಲ್ಲಿ ನಡೆದ ರೋಮಾಂಚಕಾರಿ ರೋಬಸ್ಟಾ ರ್ಯಾಲಿ ವೇಳೆ ಜಿಪ್ಸಿ ಪಲ್ಟಿ!
ಗಂಡ ಹೆಂಡತಿ ಸಂಬಂಧ ಸುಂದರವಾಗಿರುತ್ತದೆ..!
ಗೀಜಗ, ಗುಬ್ಬಚ್ಚಿ ಗೂಡುಗಳು ಸಮೃದ್ಧಿ, ಸಂತೋಷ ಮತ್ತು ಶಾಂತಿಯ ಸಂಕೇತ ಎನ್ನಲಾಗಿದ್ದು, ಇದು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸುತ್ತದೆ. ಶನಿ, ರಾಹು, ಕೇತು ದೋಷಗಳಿಂದ ಪರಿಹಾರ ನೀಡುತ್ತದೆ ಎನ್ನಲಾಗುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ದಾಂಪತ್ಯ ಜೀವನದಲ್ಲಿ ಸಂಬಂಧಗಳು ಚೆನ್ನಾಗಿರುತ್ತದೆ. ಶನಿ ದೋಷದಿಂದ ಬಳಲುತ್ತಿರುವ ಮನೆಯಲ್ಲಿ ಗೀಜಗ ಗೂಡು ಕಟ್ಟುವುದು ಶುಭ ಎಂದು ಹೇಳಲಾಗುತ್ತದೆ. ಜಾತಕದಲ್ಲಿ ರಾಹು ಅಥವಾ ಕೇತುವಿನ ಪ್ರಭಾವ ನಕಾರಾತ್ಮಕವಾಗಿದ್ದರೆ, ಇದರಿಂದ ರಕ್ಷಣೆ ಪಡೆಯಲು ಗೀಜುಗನ ಗೂಡುಗಳು ಒಳ್ಳೆಯದು ಅಂತ ಹೇಳಲಾಗುತ್ತದೆ. ನಿಮ್ಮ ಮನೆಯ ಮುಖ್ಯ ದ್ವಾರ ಅಥವಾ ಬಾಲ್ಕನಿಯಲ್ಲಿ ಹಕ್ಕಿಗಳು ಗೂಡು ಕಟ್ಟಿದ್ದರೆ, ನಿಮ್ಮನ್ನು ದುಷ್ಟ ಕಣ್ಣಿನಿಂದ ರಕ್ಷಿಸುತ್ತದೆ. ಶತ್ರುಗಳ ಪ್ರಭಾವ ಮತ್ತು ನಕಾರಾತ್ಮಕ ಶಕ್ತಿಗಳು ಕಡಿಮೆಯಾಗುತ್ತವೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











