Yash Radhika Pandit: ಸ್ಯಾಂಡಲ್ ವುಡ್ ನ ಅತ್ಯಂತ ಕ್ಯೂಟ್ ಕಪಲ್ಸ್ ಅಂದ್ರೆ ಅದು ರಾಧಿಕಾ ಪಂಡಿತ್ ಹಾಗೂ ಯಶ್ ಜೋಡಿ. ಇದೀಗ ಇವರಿಬ್ಬರು ತಮ್ಮ ಮುದ್ದಾದ ಮಕ್ಕಳ ಜೊತೆ ಮಕ್ಕಳ ದಿನಾಚರಣೆಯ ಫೋಟೋ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಬಾಳೆ ಹೂವಿನ ಸೂಪ್ ನಿಂದ ಹಲವಾರು ಆರೋಗ್ಯ ಪ್ರಯೋಜನಗಳು…!
ಏನೇ ಹಬ್ಬ ಹರಿದಿನ ಬಂದರೂ ರಾಧಿಕಾ ಹಾಗೂ ಯಶ್ ಕುಟುಂಬ ಸಮೇತ ಫೋಟೊಗಳನ್ನು ಅಪ್ಲೋಡ್ ಮಾಡಿ ಫ್ಯಾನ್ಸ್ ಗೆ ತಮ್ಮ ಇರುವಿಕೆಯನ್ನು ತೋರಿಸುತ್ತಾ ಇರುತ್ತಾರೆ. ಯಶ್ ಅಂತೂ ಪ್ಯಾನ್ ಇಂಡಿಯಾ ಸ್ಟಾರ್. ತನ್ನ ಸಿನಿಮಾ ಕೆಲಸಗಳಲ್ಲಿ ಫುಲ್ ಬಿಝಿ ಇರುವ ಯಶ್ ಕುಟುಂಬದ ಕಡೆಯೂ ಗಮನ ಕೊಡುತ್ತಾರೆ ಅಂತಹ ನಟ ತನ್ನ ಪತ್ನಿ ರಾಧಿಕಾ ಪಂಡಿತ್ ಅವರನ್ನು ಮನಸಾರೆ ಪ್ರೀತಿಸುತ್ತಾರೆ. ತನ್ನ ಮುದ್ದಾಡ ಮಡದಿಯೆಂದರೆ ಯಶ್ ಗೆ ಬಹಳ ಇಷ್ಟ.
ಇದನ್ನೂ ಓದಿ: ಸಣ್ಣದೆನಿಸುವ ಉತ್ತಮ ಹವ್ಯಾಸಗಳು ನಿಮ್ಮ ಜೀವನ ಬದಲಿಸಬಹುದು…!
ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಮಕ್ಕಳ ಜೊತೆ ಪೋಸ್..!
ಕಳೆದ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಮಕ್ಕಳ ಜೊತೆ ಇಬ್ಬರು ಕ್ಯೂಟ್ ಕಪಲ್ಸ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ಧಾರೆ. ಮಕ್ಕಳ ಪರಿಶುದ್ಧ ಸಂತೋಷ ನಮ್ಮೆಲ್ಲರಿಗೂ ಸ್ಫೂರ್ತಿಯಾಗಲಿ ಎಂದು ನಟಿ ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಹಳ ಸಕ್ರೀಯವಾಗಿರುವ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಆಗಾಗ ವಿಶೇಷ ಪೋಸ್ಟ್ ಹಾಕುತ್ತಿರುತ್ತಾರೆ. ವಿಶೇಷ ಸಂದೇಶವನ್ನು ಒಳಗೊಂಡ ಫ್ಯಾಮಿಲಿ ಫೋಟೋವನ್ನು ಮಕ್ಕಳ ದಿನಾಚರಣೆಯ ಪ್ರಯುಕ್ತ ಪೋಸ್ಟ್ ಮಾಡುತ್ತಾರೆ. ಈ ಫೋಟೋದಲ್ಲಿ ಯಶ್, ರಾಧಿಕಾ ಹಾಗೂ ಐರಾ, ಯಥರ್ವ್ ಮುದ್ದಾದ ಪೋಸ್ ಕೊಟ್ಟಿದ್ದಾರೆ.
ಇದು ವಿದೇಶ ಪ್ರವಾಸದಲ್ಲಿ ತೆಗೆದ ಫೋಟೋವಾಗಿದ್ದು ಯಶ್ ಲುಕ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಇನ್ನು ರಾಧಿಕಾ ಪಂಡಿತ್ ತನ್ನ ಕುಟುಂಬದ ನಿರ್ವಹಣೆಯಲ್ಲಿಯೇ ಹೆಚ್ಚಾಗಿ ಕಾಲ ಕಳೆಯುತ್ತಿದ್ದು, ತನ್ನ ಕುಟುಂಬದ ಜವಾಬ್ದಾರಿ ಹೊತ್ತಿದ್ದಾರೆ. ಸಿನಿಮಾಗಳಿಂದ ಕೊಂಚ ದೂರ ಇರುವ ರಾಧಿಕಾ ಪಂಡಿತ್ ಮತ್ತೆ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಯಾಗಲಿ ಅನ್ನೋದು ಇವರ ಫ್ಯಾನ್ಸ್ ಆಶಯವಾಗಿದೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











