Madikeri: ಕೊಡಗು ಜಿಲ್ಲೆಯ ಕಡಿದಾದ ಬೆಟ್ಟ ಗುಡ್ಡಗಳ ನಡುವಿನ ಕಾಫಿ ತೋಟದಲ್ಲಿ ಎರಡು ದಿನಗಳ ಕಾಲ ನಡೆದ ರಾಷ್ಟ್ರೀಯ ರೋಬಸ್ಟಾ ರ್ಯಾಲಿ ಹಲವು ರೋಮಾಂಚಕಾರಿ ಕ್ಷಣಗಳಿಗೆ ಸಾಕ್ಷಿಯಾಗಿದೆ.
ರಾಷ್ಟ್ರಮಟ್ಟದ ಮೋಟಾರ್ ಯಾಲಿ ಇಂಡಿಯನ್ ರ್ಯಾಲಿ ಚಾಂಪಿಯನ್‌ಶಿಪ್‌ನ ಮೂರನೇ ಸುತ್ತಿನ ಎರಡು ದಿನಗಳ ರ್ಯಾಲಿಗೆ ಕೂರ್ಗ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಆವರಣದಲ್ಲಿ ಚಾಲನೆ ನೀಡಲಾಗಿತ್ತು. ಚೆನ್ನೈ, ಕೊಯತ್ತೂರಿನಲ್ಲಿ ಪ್ರಥಮ ಹಾಗೂ ದ್ವಿತೀಯ ಸುತ್ತಿನ ರಾಲಿ ಮುಕ್ತಾಯಗೊಂಡ ಬಳಿಕ ಇದೀಗ ಕೊಡಗಿನ ಕಾಫಿ ತೋಟದಲ್ಲಿ ರಾಷ್ಟ್ರಮಟ್ಟದ ರ್ಯಾಲಿ ಆಯೋಜಿಸಲ್ಪಟ್ಟಿದೆ. ಫೆಡರೇಷನ್ ಆಫ್ ಮೋಟಾರ್ ಸ್ಪೋರ್ಟ್ಸ್ ಆಫ್ ಇಂಡಿಯಾ ಆಯೋಜಿತ ರ್ಯಾಲಿಯ ಜವಾಬ್ದಾರಿಯನ್ನು ಕೊಡಗಿನಲ್ಲಿ ಅಮ್ಮತ್ತಿಯ ರೋಬಸ್ಟಾ ಎಡ್ವಂಚರ್ ಅಂಡ್ ಸ್ಪೋರ್ಟ್ಸ್ ಅಕಾಡೆಮಿ ಮುಂದಾಳತ್ವ ವಹಿಸಿಕೊಂಡಿದೆ. ಬ್ಲೂ ಬ್ಯಾಂಡ್ ಪ್ರಾಯೋಜಕತ್ವದಲ್ಲಿ ಯಾಲಿ ನಡೆಯುತ್ತಿದೆ. ಎಂಆರ್” ಎಫ್ ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳು ರ್ಯಾಲಿಗೆ ಸಹ ಯೋಗ ನೀಡಿದೆ. ದೇಶದ ವಿವಿಧೆಡೆಯಿಂದ 58 ವಾಹನಗಳು ಆಗಮಿಸಿವೆ. ಈ ಪೈಕಿ 7 ಮಹಿಳಾ ಸ್ಪರ್ಧಿಗಳಿದ್ದಾರೆ.
ರೋಮಾಂಚಕಾರಿ ರ್ಯಾಲಿ ವೇಳೆ ಜಿಪ್ಸಿ ಪಲ್ಟಿ..!
ರೋಬಸ್ಟಾ ಅಡ್ವೆಂಚರ್‌ನ ಬ್ಲೂ ಬ್ಯಾಂಡ್ ನ್ಯಾಷನಲ್ ರೇಸ್‌ನ ವೇಳೆ ಜಿಪ್ಸಿ ಪಲ್ಟಿಯಾದ ಘಟನ ನಡೆದಿದೆ. ಎಮ್ಮೆ ಗುಂಡಿ ಕಾಫಿ
ತೋಟದಲ್ಲಿ ವೇಗವಾಗಿ ಕಾಫಿ ಚಲಿಸುವ ವೇಳೆ ಜಿಪ್ಸಿ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಜಿಪ್ಸಿ ಡ್ರೈವರ್ ಮತ್ತು ನ್ಯಾವಿಗೇಟರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಿಪ್ಸಿ ಪಲ್ಟಿಯಾಗುವ ಬೆಚ್ಚಿ ಬೀಳಿಸುವ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಕಡಿದಾದ ಕಾಫಿ ತೋಟದಲ್ಲಿ ರ್ಯಾಲಿ!
ಎರಡು ದಿನಗಳ ಕಾಲ ಪಾಲಿಬೆಟ್ಟ ಸುತ್ತ ಮುತ್ತಲಿನ ಪ್ರದೇಶದಲ್ಲಿರುವ ಟಾಟಾ ಕಾಫಿ ಸಂಸ್ಥೆಗೆ ಸೇರಿದ ಕಾಫಿ ತೋಟದೊಳಗಿನ ಮಾರ್ಗದಲ್ಲಿ ಯಾಲಿ ಪಟುಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಮೊದಲ ದಿನ ಬೆಳಗ್ಗೆ ಮಠಪರಂಬು ಎಸ್ಟೇಟ್‌ನಲ್ಲಿ ರ್ಯಾಲಿ ಪ್ರಾರಂಭವಾಗಿ 12.5 ಕಿಲೋಮೀಟರ್ ಮಾರ್ಗದಲ್ಲಿ ರ್ಯಾಲಿ ಸಂಚರಿಸಿದೆ. ಮಧ್ಯಾಹ್ನ ಬಳಿಕ 10 ಕಿಲೋಮೀಟರ್ ಕ್ಯಾಲಿ ಎಮ್ಮೆಗುಂಡಿ ಎಸ್ಟೇಟ್‌ನಲ್ಲಿ ನಡೆದಿದೆ. ಎರಡನೆಯ ದಿನ ಮಾರ್ಗೋಲ್ಲಿ ಎಸ್ಟೇಟ್‌ನಲ್ಲಿ 8 ಕಿಲೋಮೀಟರ್ ಮಾರ್ಗ ಹಾಗೂ ಹೊಸಳ್ಳಿ ಎಸ್ಟೇಟ್‌ನ 8.5 ಕಿಲೋಮೀಟರ್ ಮಾರ್ಗದಲ್ಲಿ ರ್ಯಾಲಿಪಟುಗಳು ಮೂರು ಸುತ್ತು ಸಂಚರಿಸಲಿದ್ದಾರೆ. ಕಾಫಿ ತೋಟದಲ್ಲಿ ರ್ಯಾಲಿ ಮುಕ್ತಾಯಗೊಂಡ ಬಳಿಕ ಅತ್ತೂರಿನ ಖಾಸಗಿ ರೆಸಾರ್ಟ್ನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











