ಬ್ರೇಕಿಂಗ್ ನ್ಯೂಸ್
ಕರ್ನಾಟಕರಾಜಕೀಯ

Vote Chori: ಮೋದಿ ಬಂದರೂ ನಮ್ಮ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ! ಕಾಂಗ್ರೆಸ್‌ ಸವಾಲು

Vote Chori: ಯುವ ಕಾಂಗ್ರೆಸ್ ವತಿಯಿಂದ ಮತ ಕಳ್ಳತನ ವಿರುದ್ಧ ಪ್ರತಿಭಟನೆ ನಡೆದಿದೆ. ಈ ವೇಳೆ ಕಾಂಗ್ರೆಸ್‌ ನ ಹಲವಾರು ನಾಯಕರು ಭಾಗಿಯಾಗಿದ್ದರು.

ಇದನ್ನೂ ಓದಿ: ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿಯಾದ ಸಿಎಂ ಸಿದ್ದರಾಮಯ್ಯ..!

ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ. ಚಂದ್ರಶೇಖರ್ ಮಾತನಾಡಿ, ಎರಡು ತಿಂಗಳ ಹಿಂದೆ ಇದೇ ಜಾಗದಲ್ಲಿ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಮತಕಳ್ಳತನ ವಿರುದ್ಧ ಪ್ರತಿಭಟನೆ ಮಾಡಿದೆವು. ಆ ಪ್ರತಿಭಟನೆಯಲ್ಲಿ 1 ಲಕ್ಷ ಜನ ಭಾಗವಹಿಸಿದ್ದರು. ಅಂದು ಹಚ್ಚಿದ ಪ್ರತಿಭಟನಾ ಕಿಚ್ಚು ದೇಶದಾದ್ಯಂತ ಹಬ್ಬಿದೆ. ಬಿಹಾರ ಚುನಾವಣಾ ಫಲಿತಾಂಶ ಬೇರೆ ರಾಜ್ಯಗಳ ಮೇಲೆ ಪರಿಣಾಮ ಬೀರಲಿದೆಯೇ ಎಂದು ಮಾಧ್ಯಮಗಳು ಚರ್ಚೆ ಮಾಡುತ್ತಿವೆ. ಈ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರುವುದಿಲ್ಲ. ಕಾರಣ, ನಮ್ಮ ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಎಂಬ ಎರಡು ದೊಡ್ಡ ಬ್ರಹ್ಮಾಸ್ತ್ರಗಳು ಇವೆ. ಯಾವ ಬಿಜೆಪಿಯಲ್ಲ, ಅಮಿತ್ ಶಾ ಹಾಗೂ ಮೋದಿ ಅವರು ಬಂದರೂ ನಮ್ಮ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದರು.

ದೊಡ್ಡ ನಾಯಕರಾಗಿ ಬೆಳೆಯಲು ಯುವ ಕಾಂಗ್ರೆಸ್ ಹಾಗೂ ಎನ್ಎಸ್ ಯುಐ ಉತ್ತಮ ವೇದಿಕೆ. ಅದಕ್ಕೆ ನೀವು ನಿಮ್ಮ ಶಕ್ತಿ ಪ್ರದರ್ಶನ ಮಾಡಬೇಕು. ನ್ಯಾಯುತವಾಗಿ ಹೋರಾಟ ಮಾಡಿಕೊಂಡು ಮುಂದೆ ಬರಲು ಇದು ಉತ್ತಮ ವೇದಿಕೆ. ಯುವ ಕಾಂಗ್ರೆಸ್ ಮೂಲಕ ಬೆಳೆದ ಅನೇಕ ನಾಯಕರು ನಮ್ಮ ಮುಂದೆ ಇದ್ದಾರೆ. ಯಾವುದೇ ವಿಚಾರ ಇದ್ದರೂ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕು. ಯುವ ಕಾಂಗ್ರೆಸ್ ಕಾರ್ಯಕ್ರಮ ಎಂದರೆ ಇಡೀ ಬೆಂಗಳೂರು ತಿರುಗಿ ನೋಡುವಂತೆ ಇರಬೇಕು ಎಂದರು.

ಮತ ಕಳ್ಳತನ ವಿರುದ್ಧ ನಡೆಸಲಾದ ಸಹಿ ಸಂಗ್ರಹ ಅಭಿಯಾನದಲ್ಲಿ ರಾಜ್ಯದಲ್ಲಿ 1.30 ಕೋಟಿ ಸಹಿ ಸಂಗ್ರಹ ಮಾಡಿದ್ದು, ನಮ್ಮ ರಾಜ್ಯ ಮೊದಲ ಸ್ಥಾನದಲ್ಲಿದೆ. ಈ ಪೈಕಿ ನಮ್ಮ ರಾಜ್ಯದ ಯುವ ಕಾಂಗ್ರೆಸ್ 10 ಲಕ್ಷ ಸಹಿ ಸಂಗ್ರಹಿಸಿದ್ದು, ಇನ್ನೂ 5 ಲಕ್ಷ ಸಹಿ ಸಂಗ್ರಹಿಸುವುದಾಗಿ ಹೇಳಿದ್ದಾರೆ. ಬಿಜೆಪಿ ಬಿಹಾರ ಗೆದ್ದಿರಬಹುದು. ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರದಲ್ಲಿ ಮಾಧ್ಯಮ ಸೇರಿದಂತೆ ಎಲ್ಲರ ಊಹೆಗೂ ಮೀರಿ ಫಲಿತಾಂಶ ಬಂದಿದೆ. ಇದು ಹೇಗೆ ಸಾಧ್ಯ? ಆಡಳಿತ ಪಕ್ಷ ಚುನಾವಣೆ ಸಮಯದಲ್ಲಿ 1.20 ಕೋಟಿ ಮಹಿಳೆಯರಿಗೆ ತಲಾ 10 ಸಾವಿರ ರೂಪಾಯಿ ನೀಡಿದರೆ ಅವರು ಯಾರಿಗೆ ಮತ ಹಾಕುತ್ತಾರೆ. ಈ ಬಾರಿ ಚುನಾವಮೆಯಲ್ಲಿ 71% ಮಹಿಳೆಯರು ಮತದಾನ ಮಾಡಿದ್ದು, ಪುರುಷರು 62% ಮತದಾನ ಮಾಡಿದ್ದಾರೆ ಎಂದರು.

ಸಚಿವ ಸಂತೋಷ್ ಲಾಡ್ ಮಾತನಾಡಿ,  ಮಹಾರಾಷ್ಟ್ರದಲ್ಲಿ ಕೇವಲ 6 ತಿಂಗಳಲ್ಲಿ 45 ಲಕ್ಷ ಮತಗಳನ್ನು ಹೆಚ್ಚಿಸುತ್ತಾರೆ. ಬಿಹಾರದಲ್ಲಿ ಬೇರೆ ರೀತಿ ಮಾಡಿ, 65 ಲಕ್ಷ ಮತ ತೆಗೆದುಹಾಕುತ್ತಾರೆ. ನಂತರ 20 ಲಕ್ಷ ಮತ ಸೇರಿಸುತ್ತಾರೆ. ಆಮೂಲಕ ಬಿಹಾರ ಚುನಾವಣೆಯಲ್ಲಿ ಸುಮಾರು 80 ಲಕ್ಷ ಮತಗಳ ಬದಲಾವಣೆ ಮಾಡಲಾಗಿದೆ. ಬಿಜೆಪಿ 101 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು 91% ಸ್ಟ್ರೀಕ್ ರೇಟ್ ಹೊಂದಿದೆ. ಜೆಡಿಯು 101 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 89% ಸ್ಟ್ರೀಕ್ ರೇಟ್ ಹೊಂದಿದೆ. ಭಾರತದ ತಿಹಾಸದಲ್ಲಿ 25 ವರ್ಷಗಳ ಆಡಳಿತ ಮಾಡಿರುವ ಸರ್ಕಾರಕ್ಕೆ ಇಷ್ಟು ದೊಡ್ಡ ಮಟ್ಟದ ಫಲಿತಾಂಶ ಬರಲು ಹೇಗೆ ಸಾಧ್ಯ ಎಂದರು.

ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಉದಯ್ ಭಾನು ಚಿಬ್ ಮಾತನಾಡಿ,  ನಮ್ಮ ಹೋರಾಟ ಸಂವಿಧಾನ ಉಳಿಸಲು ಎಂದು ಸ್ಪಷವಾಗಿದೆ. ಸಂವಿಧಾನ ದೇಶದ ಪ್ರತಿ ನಾಗರೀಕರಿಗೆ ಮತದಾನ ಮಾಡುವ ಅಧಿಕಾರ ನೀಡಿದೆ. ಆದರೆ ದು ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಹಳ ಚಿಂತಾಜನಕ ಸ್ಥಿತಿಗೆ ತಲುಪಿದೆ. ಬಿಜೆಪಿ ಮತ ಕಳ್ಳತನದ ಆಟ ಆರಂಭಿಸಿದೆ. ಇವಿಎಂ, ಮತಪಟ್ಟಿಯಲ್ಲಿ ಅಕ್ರಮ ಮಾಡುವ ಮೂಲಕ ಬಿಜೆಪಿ ಮತ ಕಳ್ಳತನ ಮಾಡುತ್ತಿದೆ ಎಂದರು.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page