ಬ್ರೇಕಿಂಗ್ ನ್ಯೂಸ್
ಕರ್ನಾಟಕ

Food : ಬಾಳೆ ಹೂವಿನ ಸೂಪ್ ನಿಂದ ಹಲವಾರು ಆರೋಗ್ಯ ಪ್ರಯೋಜನಗಳು…!

Food : ಬಾಳೆ ಹೂವಿನ ಸೂಪ್ ಸರಳ ಮತ್ತು ರುಚಿಯಾದ ಆಹಾರ ಪದ್ಧತಿಯಲ್ಲಿ ಒಂದಾಗಿದೆ. ಹಳ್ಳಿಯಲ್ಲಿ ಬಹಳಷ್ಟು ಜನ ಇದನ್ನು ಇಷ್ಟ ಪಡುತ್ತಾರೆ. ಜೊತೆಗೆ, ಬಾಳೆಹೂವಿನಲ್ಲಿರುವ ಐರನ್, ಕಾಪರ್ ಮತ್ತು ವಿಟಮಿನ್ C ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇನ್ನು ಮಹಿಳೆಯರ ಹಾರ್ಮೋನ್ ಬದಲಾವಣೆಗೂ ಇದು ತುಂಬಾ ಒಳ್ಳೆಯ ಆಹಾರ. ಹಾಗೇ, ಫೈಬರ್ ಹೆಚ್ಚು ಇರುವುದರಿಂದ ಮಲಬದ್ಧತೆ ಕಡಿಮೆ ಮಾಡಿ, ಅಜೀರ್ಣತೆ, ಹೊಟ್ಟೆ ಉಬ್ಬರವನ್ನು ಹೋಗಲಾಡಿಸುತ್ತದೆ. ಕ್ಯಾಲೊರೀಸ್ ಕಡಿಮೆ, ಫೈಬರ್ ಹೆಚ್ಚು ಹೇಗೆಂದರೆ ಹೊಟ್ಟೆ ಹಸಿವನ್ನು ತಡೆಯುತ್ತದೆ ಮತ್ತು ತೂಕ ಕಡಿಮೆ ಮಾಡಲು ನೆರವಾಗುತ್ತದೆ. ಪೊಟ್ಯಾಷಿಯಂ ಮತ್ತು ಮೆಗ್ನೀಷಿಯಂ ಇರುವುದರಿಂದ ರಕ್ತದ ಒತ್ತಡ (BP) ನಿಯಂತ್ರಣಕ್ಕೆ ಸಹಕಾರಿ. ಬಾಳೆಹೂವು ದೇಹದ ಉರಿಯೂತ ಕಡಿಮೆ ಮಾಡುತ್ತದೆ,

ಬಾಳೆ ಹೂವಿನ ಸೂಪ್ ಮಾಡಲು ಬೇಕಾಗುವ ಸಾಮಾಗ್ರಿ ;
ಬಾಳೆಹೂವು – 1 ಕಪ್ (ಚೂರು ಮಾಡಿ, ಬಟರ್‌ಮಿಲ್ಕ್ + ಅರಿಶಿನ ನೀರಲ್ಲಿ ನೆನೆಸಿದುದು), ಒಣಹುಳಿ– 1, ಬೆಳ್ಳುಳ್ಳಿ, ಶುಂಠಿ – ½ ಇಂಚು, ಹಸಿಮೆಣಸಿನಕಾಯಿ – 1, ಟೊಮಟೊ – ½,

ಅರಿಶಿಣ – 1 ಚಿಟಿಕೆ, ಮೆಣಸಿನ ಹುಡಿ – ½ ಟೀ ಸ್ಪೂನ್, ಜೀರಿಗೆ – ½ ಟೀ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ ಅಥವಾ ತುಪ್ಪ – 1 ಟೀ ಸ್ಪೂನ್, ನೀರು – 2–2½ ಕಪ್,

ಕೊತ್ತಂಬರಿ ಸೊಪ್ಪು – ಅಲಂಕಾರಕ್ಕೆ, ಬಾಳೆ ಹೂವಿನ ಮೇಲಿನ ದಪ್ಪ ಪದರಗಳನ್ನು ತೆಗೆದು ಸಣ್ಣದಾಗಿ ಹಚ್ಚಿಕೊಳ್ಳಬೇಕು. ಅದು ಕಪ್ಪಾಗದಂತೆ ಮಜ್ಜಿಗೆ + ಅರಿಶಿನ ನೀರಲ್ಲಿ 10–15 ನಿಮಿಷ ನೆನೆಸಿಡಿ.

ಮಾಡುವ ವಿಧಾನ : ಪಾತ್ರೆಯಲ್ಲಿ ಎಣ್ಣೆ/ತುಪ್ಪ ಬಿಸಿ ಮಾಡಿ. ಜೀರಿಗೆ ಹಾಕಿ ಹುರಿಯಿರಿ ಆಮೇಲೆ ಅದಕ್ಕೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. ಟೊಮಟೊ ಹಾಕಿ 2 ನಿಮಿಷ ಬೇಯಿಸಿ. ತದ ನಂತರ ಚೂರು ಮಾಡಿದ ಬಾಳೆಹೂವು ಹಾಕಿ ಚೆನ್ನಾಗಿ ಕಲಸಿ. ಅದಕ್ಕೆ ಅರಿಶಿನ, ಉಪ್ಪು ಹಾಕಿ. 2-2½ ಕಪ್ ನೀರು ಸೇರಿಸಿ 10–12 ನಿಮಿಷ ಬೇಯಿಸಿ. ಬೇಯಿಸಿದ ಮಿಶ್ರಣವನ್ನು ಬ್ಲೆಂಡರ್ ಬಳಸಿ ಸ್ಮೂತ್ ಮಾಡಿ,‌ಮತ್ತೆ ಪಾತ್ರೆಗೆ ಹಾಕಿ ಸ್ವಲ್ಪ ಮೆಣಸಿನ ಹುಡಿ (ಬೇಕಾದಲ್ಲಿ) ಸೇರಿಸಿ 1–2 ನಿಮಿಷ ಕುದಿಸಿರಿ. ಕೊತ್ತಂಬರಿ ಸೊಪ್ಪು ಹರಡಿ ಬಿಸಿ–ಬಿಸಿ ಕುಡಿಯಿರಿ. ಇದನ್ನು ರಾತ್ರಿ ಹೊತ್ತು ಅಥವಾ ಉಪವಾಸದ ದಿನಗಳಲ್ಲಿ ತಿನ್ನಲು ಬಹಳ ಸೂಕ್ತ.

ಇದನ್ನೂ ಓದಿ :Eshwar Khandre : ಪರಿಸರ ಪ್ರೇಮಿಗೆ ಸಸಿಗಳನ್ನು ನೆಟ್ಟು ಗೌರವ ಸಲ್ಲಿಕೆ…!

……

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/lAkKmmGp2KI?si=3e2QrJZhIs6NS-QG

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page