ಬ್ರೇಕಿಂಗ್ ನ್ಯೂಸ್
ಕರ್ನಾಟಕ

FDI : ಜಪಾನ್ ನೈಡೆಕ್ ಕಂಪೆನಿಯ ಬಂಡವಾಳ ಹೂಡಿಕೆಯಿಂದ ನಮ್ಮಲ್ಲಿ ಉದ್ಯೋಗ ಸೃಷ್ಟಿ…!

FDI : ವಿದೇಶಿ ಬಂಡವಾಳ ಹೂಡಿಕೆ (FDI) ಎಂದರೆ ವಿದೇಶದ ಕಂಪನಿಗಳು ಅಥವಾ ವ್ಯಕ್ತಿಗಳು ನಮ್ಮ ದೇಶದಲ್ಲಿ ಅಥವಾ ನಮ್ಮ ರಾಜ್ಯದಲ್ಲಿ ಹಣ ಹೂಡಿಕೆ ಮಾಡುವುದಾಗಿದೆ. ಅವರ ಹಣವನ್ನು ಇಲ್ಲಿ ಕಾರ್ಖಾನೆಗಳಿಗೆ, ತಂತ್ರಜ್ಞಾನ ಕಂಪನಿಗಳಿಗೆ, ಉದ್ಯಮಗಳು, ಉದ್ಯೋಗ ಕೇಂದ್ರಗಳು ಇತ್ಯಾದಿಗಳನ್ನು ಆರಂಭಿಸುವುದು ಅಥವಾ ವಿಸ್ತರಿಸುವುದು ಅದರ ಉದ್ದೇಶವಾಗಿದೆ. ಇದರಿಂದ, ಹೊಸ ಉದ್ಯೋಗಗಳು ಬರುತ್ತವೆ, ಆರ್ಥಿಕತೆ ಬೆಳೆಯುತ್ತದೆ, ತಂತ್ರಜ್ಞಾನ ಅಭಿವೃದ್ಧಿ, ಜಾಗತಿಕ ಮಟ್ಟದ ಕಂಪನಿಗಳು ನಮ್ಮರಾಜ್ಯಕ್ಕೆ ಬರುತ್ತವೆ.

ಆರ್ಚರ್ಡ್ ಹಬ್’ ಕಾರ್ಯಾಚರಣೆ ಆರಂಭಿಸಿದೆ ;

ಕರ್ನಾಟಕದಲ್ಲಿ ಅದರಲ್ಲೂ ಉತ್ತರ ಕರ್ನಾಟಕಕ್ಕೆ ಒಂದಷ್ಟು ಬಂಡವಾಳ ಹೂಡಿಕೆ ಹರಿದು ಬರುತ್ತಿದೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ವಿಜಯಪುರದಲ್ಲಿ ವಿದೇಶಿ ಕಂಪನಿಗಳು ಹೂಡಿಕೆಗೆ ಮುಂದಾಗಿವೆ. ಈ ಪೈಕಿ ಜಪಾನ್ ಮೂಲದ ನೈಡೆಕ್ ಕಂಪನಿಯು ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪಿಸಿರುವ ‘ಆರ್ಚರ್ಡ್ ಹಬ್’ ಕಾರ್ಯಾಚರಣೆ ಆರಂಭಿಸಿದೆ. ಶನಿವಾರ ಈ ‘ಆರ್ಚರ್ಡ್ ಹಬ್’ಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌.ಬಿ. ಪಾಟೀಲ ಅವರು ಚಾಲನೆ ನೀಡಿದರು.

ಸಾಕಷ್ಟು ಉದ್ಯೋಗ ಸೃಷ್ಟಿ ;

ನೈಡೆಕ್ ಕಂಪನಿಯ ಆರ್ಚರ್ಡ್ ಹಬ್ ನಾವೀನ್ಯತೆ ಮತ್ತು ತಂತ್ರಜ್ಞಾನ ಆಧಾರಿತ ಉದ್ಯಮ ಕೇಂದ್ರವಾಗಿದೆ. ಇಲ್ಲಿ ಹೊಸ ಹೊಸ ಔದ್ಯಮಿಕ ಕಲ್ಪನೆಗಳು ಮತ್ತು ಸಂಶೋಧನೆ ಜೊತೆಗೂಡಲಿವೆ. ಅಂತಿಮವಾಗಿ ಇದು ಕೈಗಾರಿಕಾ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಿಸಲಿದೆ. ಜಪಾನಿನ ಕಂಪನಿಯೊಂದು ಕರ್ನಾಟಕ ಉತ್ತರ ಭಾಗದಲ್ಲಿ ಬೃಹತ್ ಹೂಡಿಕೆ ಮಾಡುವುದು ಉತ್ತಮ ವಿಚಾರ. ಇದರಿಂದ ಈ ಭಾಗಗಳಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿ ಕೂಡ ಆಗಲಿದೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸ್ಥಳೀಯರಿಗೆ ಲಾಭವಾಗಲಿದೆ. ರಾಜ್ಯ ಸರ್ಕಾರ ಸಹ ತನ್ನ ಹೊಸ ಕೈಗಾರಿಕಾ ನೀತಿಯಲ್ಲಿ ಬೆಂಗಳೂರನ್ನು ಹೊರತುಪಡಿಸಿ ಬೇರೆ ಬೇರೆ ಭಾಗಗಳಲ್ಲಿ ಉದ್ಯಮ ಸ್ಥಾಪಿಸುವಂತೆ ಹಲವು ರಚನಾತ್ಮಕ ಕ್ರಮಗಳನ್ನು ಅಳವಡಿಸಿದೆ. ಈ ಮೂಲಕ ಸರ್ಕಾರ ಬೇರೆ ಜಿಲ್ಲೆಗಳಿಗೂ ಆದ್ಯತೆ ನೀಡುವಂತಾಗಿದೆ.

ಇದನ್ನೂ ಓದಿ :Belagavi : ಕೃಷ್ಣ ಮೃಗಗಳ ನಿಗೂಢ ಸಾವು : ಮುಂಜಾಗ್ರತಾ ಕ್ರಮ ಕೈಗೊಳ್ಳಲು ವಿಫಲ

………

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/lAkKmmGp2KI?si=3e2QrJZhIs6NS-QG

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page