Eshwar Khandre : ಪ್ರಕೃತಿಯನ್ನು ಪ್ರೀತಿಸಿದರೆ ಅದು ನಮ್ಮನ್ನು ಕಾಪಾಡುತ್ತದೆ, ಬೆಳೆಸುತ್ತದೆ ಎಂಬುದಕ್ಕೆ ಸಾಲು ಮರದ ತಿಮ್ಮಕ್ಕ ಸಾಕ್ಷಿ. ಅವರು ಮರ ಗಿಡಗಳನ್ನು ಪ್ರೀತಿಸಿದ ರೀತಿಯನ್ನು ನೋಡಿಯೇ ತಿಳಿಯಬಹುದು. ನಿಜ…! ಆದ್ರೆ ನಾವುಗಳು ಇವುಗಳನ್ನ ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೆ ? ಅವುಗಳನ್ನು ಎಷ್ಟು ಪ್ರೀತಿಸುತ್ತೇವೆ ಅನ್ನೋದು ಪ್ರಶ್ನೆ…?
ಆದರೆ, ಇದೀಗ ನಮ್ಮ ಸಚಿವರು ಹೊಸ ಹೇಳಿಕೆಯನ್ಮು ನೀಡಿದ್ದು, ಎಲ್ಲರಿಗೂ ಸಂಭ್ರಮದೊಂದಿಗೆ ಸಮಾಧಾನವನ್ನು ನೀಡಿದೆ. 114ವರ್ಷ ಜೀವಿಸಿದ್ದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಗೌರವಾರ್ಥ ರಾಜ್ಯದ 114 ಸ್ಥಳಗಳಲ್ಲಿ 114 ಸಸಿ ನೆಟ್ಟು ಪೋಷಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ನಿನ್ನೆ ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದ ಮಹಾನ್ ಪರಿಸರ ಪ್ರೇಮಿಗೆ ಅಂತಿಮ ನಮನ ಸಲ್ಲಿಸಿದ ನಂತರ ಮಾತನಾಡಿದ ಅವರು, ಮರಗಳನ್ನೇ ಮಕ್ಕಳಂತೆ ಮಮಕಾರದಿಂದ ಬೆಳೆಸಿ ವಿಶ್ವಕ್ಕೇ ವೃಕ್ಷಗಳ ಮಹತ್ವ ಸಾರಿದ ಸಾಲುಮರದ ತಿಮ್ಮಕ್ಕ ಅವರ ಹೆಸರಲ್ಲಿ ಸಸಿನೆಡುವ ಮೂಲಕ ಅರಣ್ಯ ಇಲಾಖೆ ಗೌರವ ಸಲ್ಲಿಸಲಿದೆ ಎಂದರು.
ಲಕ್ಷಾಂತರ ಜನರ ಪರಿಸರ ಪ್ರೇಮಕ್ಕೆ ಕಾರಣಕರ್ತರಾಗಿರುವ ಈ ಅಜ್ಜಿಯ ನಿರುವು ನಿಜವಾಗಿಯೂ ಮೆಚ್ಚುವಂಥದ್ದು. ಇಲಾಖೆಯು ಅವರನ್ನ ಪರಿಸರ ರಾಯಭಾರಿಯಾಗಿಯೂ ಪುರಸ್ಕರಿಸಿತ್ತು. ತಮ್ಮ ಕೈಲಾದಷ್ಟು ಸಸಿ ನೆಡುವುದರ ಮೂಲಕ ಜನರಿಗೂ ಕೂಡ ಮರ ಗಿಡಗಳ ಬಗ್ಗೆ ಅರಿವು ಮೂಡಿಸಿರುವ ಮಹಾನ್ ವ್ಯಕ್ತಿ ಇವರು. ಸಾಲುಮರದ ತಿಮ್ಮಕ್ಕ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ಕೂಡ ನೀಡಲಾಗುವುದು ಎಂದು ಈ ಮೂಲಕ ಸಚಿವರು ಮಾಧ್ಯಮದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುತ್ತಾರೆ.
ಇದನ್ನೂ ಓದಿ :Belagavi : ಕೃಷ್ಣ ಮೃಗಗಳ ನಿಗೂಢ ಸಾವು : ಮುಂಜಾಗ್ರತಾ ಕ್ರಮ ಕೈಗೊಳ್ಳಲು ವಿಫಲ
………
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/lAkKmmGp2KI?si=3e2QrJZhIs6NS-QG











