ಬ್ರೇಕಿಂಗ್ ನ್ಯೂಸ್
ದೇಶ

IPL Cricket : ಡಿಸೆಂಬರ್ 16 ರಂದು ನಡೆಯಲಿದೆ ಮುಂದಿನ ಸೀಸನ್ ನ‌ ಮಿನಿ ಹರಾಜು

IPL Cricket : ಐಪಿಎಲ್ ಭಾರತದಲ್ಲಿ ನಡೆಯುವ ವಿಶ್ವಪ್ರಸಿದ್ದ ಟಿ20 ಕ್ರಿಕೆಟ್ ಲೀಗ್. ಇದು 2008ರಲ್ಲಿ ಪ್ರಾರಂಭಗೊಂಡಿದ್ದು, ಇಂದು ವಿಶ್ವದ ಅತಿ ಜನಪ್ರಿಯ ಕ್ರಿಕೆಟ್ ಟೂರ್ನಿಗಳಲ್ಲಿ ಒಂದಾಗಿದೆ. ಇದರಲ್ಲಿ ಪ್ರತೀ ತಂಡಕ್ಕೆ 20 ಓವರ್‌ ಹಾಗೂ ಪ್ರೇಕ್ಷಕರನ್ನು ಹೆಚ್ಚು ಕಾಯಿಸದ ವೇಗದ ಆಟ, ಹೆಚ್ಚು ರನ್‌ಗಳು ಅಲ್ಲದೇ ರೋಚಕ ಕ್ಷಣಗಳನ್ನು ಒಳಗೊಂಡಿರುವುದು ವಿಶೇಷ. ಹಾಗೇ ಪ್ರತಿ ಸೀಸನ್‌ಗೂ ಮುನ್ನ ಆಟಗಾರರನ್ನು ಹರಾಜಿನಲ್ಲಿ ತಂಡಗಳು ಖರೀದಿಸುತ್ತವೆ. ಇದು ಐಪಿಎಲ್‌ನ ದೊಡ್ಡ ಆಕರ್ಷಣೆ. ಹಾಗೇ ಈ ಬಾರಿ ಅಂದರೆ 2026 ರಲ್ಲಿ ನಡೆಯುವ ಐಪಿಲ್ ಕ್ರಿಕಿಟ್ ಲೀಗ್ ನ ತಂಡಕ್ಕೆ ಡಿಸೆಂಬರ್ ಮಿನಿ ಹರಾಜು ನಡೆಯಲಿದ್ದು,

ಕಳೆದ ಸೀಸನ್​ನಲ್ಲಿ ಕಳಪೆ ಪ್ರದರ್ಶನ ನೀಡಿದ ಆಟಗಾರರನ್ನು ಎಲ್ಲಾ ಫ್ರಾಂಚೈಸಿಗಳು ಬಿಡುಗಡೆ ಮಾಡಿದ್ದು, ಅದರಂತೆ ತಂಡದಿಂದ ಹೊರಬಿದ್ದ ಆಟಗಾರರ ಪಟ್ಟಿ ಹೀಗಿವೆ ;

ಸನ್​ರೈಸರ್ಸ್ ಹೈದರಾಬಾದ್ ಬಿಡುಗಡೆ ಮಾಡಿದ ಆಟಗಾರರು: ಅಭಿನವ್ ಮನೋಹರ್, ಅಥರ್ವ ಟೈಡೆ, ಸಚಿನ್ ಬೇಬಿ, ವಿಯಾನ್ ಮುಲ್ಡರ್, ಸಿಮರ್ಜೀತ್ ಸಿಂಗ್, ರಾಹುಲ್ ಚಹರ್, ಆ್ಯಡಂ ಝಂಪಾ, ಮೊಹಮ್ಮದ್ ಶಮಿ (ಮಾರಾಟ).

ಡೆಲ್ಲಿ ಕ್ಯಾಪಿಟಲ್ಸ್​ ಬಿಡುಗಡೆ ಮಾಡಿದ ಆಟಗಾರರು: ಫಾಫ್ ಡು ಪ್ಲೆಸಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಸೆದಿಕುಲ್ಲಾ ಅಟಲ್, ಮನ್ವಂತ್ ಕುಮಾರ್, ಮೋಹಿತ್ ಶರ್ಮಾ, ದರ್ಶನ್ ನಲ್ಕಂಡೆ, ಡೊನೊವನ್ ಫೆರೇರಾ (ಮಾರಾಟ)

ಚೆನ್ನೈ ಸೂಪರ್ ಕಿಂಗ್ಸ್ ಬಿಡುಗಡೆ ಮಾಡಿದ ಆಟಗಾರರು: ರಾಹುಲ್ ತ್ರಿಪಾಠಿ, ವಂಶ್ ಬೇಡಿ, ಆಂಡ್ರೆ ಸಿದ್ದಾರ್ಥ್, ರಚಿನ್ ರವೀಂದ್ರ, ಡೆವೊನ್ ಕಾನ್ವೇ, ದೀಪಕ್ ಹೂಡಾ, ವಿಜಯ್ ಶಂಕರ್, ಶೇಕ್ ರಶೀದ್, ಕಮಲೇಶ್ ನಾಗರಕೋಟಿ, ಮತೀಶ ಪತಿರಾಣ, ರವೀಂದ್ರ ಜಡೇಜಾ (ಮಾರಾಟ), ಸ್ಯಾಮ್ ಕರನ್ (ಮಾರಾಟ).

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಿಡುಗಡೆ ಮಾಡಿದ ಆಟಗಾರರು: ಸ್ವಸ್ತಿಕ್ ಚಿಕಾರ, ಮಯಾಂಕ್ ಅಗರ್ವಾಲ್, ಟಿಮ್ ಸೈಫರ್ಟ್​, ಲಿಯಾಮ್ ಲಿವಿಂಗ್‌ಸ್ಟೋನ್, ಮನೋಜ್ ಭಾಂಡಗೆ, ಲುಂಗಿ ಎನ್‌ಗಿಡಿ, ಬ್ಲೆಸ್ಸಿಂಗ್ ಮುಝರಬಾನಿ, ಮೋಹಿತ್ ರಾಠಿ.

ರಾಜಸ್ಥಾನ್ ರಾಯಲ್ಸ್ ಬಿಡುಗಡೆ ಮಾಡಿದ ಆಟಗಾರರು: ವನಿಂದು ಹಸರಂಗ, ಮಹೇಶ್ ತೀಕ್ಷಣ, ಸಂಜು ಸ್ಯಾಮ್ಸನ್ (ಮಾರಾಟ), ನಿತೀಶ್ ರಾಣಾ (ಮಾರಾಟ)

ಗುಜರಾತ್ ಟೈಟಾನ್ಸ್​ ಬಿಡುಗಡೆ ಮಾಡಿದ ಆಟಗಾರರು: ಕರೀಮ್ ಜನತ್, ಮಹಿಪಾಲ್ ಲೊಮ್ರೋರ್, ದಸುನ್ ಶಾನಕ, ಜೆರಾಲ್ಡ್ ಕೋಟ್ಝಿ, ಕುಲ್ವಂತ್ ಖೆಜ್ರೋಲಿಯಾ, ಶೆರ್ಫೆನ್ ರದರ್‌ಫೋರ್ಡ್ (ಮಾರಾಟ).

ಕೊಲ್ಕತ್ತಾ ನೈಟ್ ರೈಡರ್ಸ್​ ಬಿಡುಗಡೆ ಮಾಡಿದ ಆಟಗಾರರು: ಆ್ಯಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್, ಅನ್ರಿಕ್ ನೋಕಿಯಾ, ಮೊಯಿನ್ ಅಲಿ, ಕ್ವಿಂಟನ್ ಡಿ ಕಾಕ್.

ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಿದ ಆಟಗಾರರು: ಸತ್ಯನಾರಾಯಣ ರಾಜು, ರೀಸ್ ಟೋಪ್ಲಿ, ಕೆಎಲ್ ಶ್ರೀಜಿತ್, ಕರ್ಣ್ ಶರ್ಮಾ, ಬೆವನ್ ಜೇಕಬ್ಸ್, ಮುಜೀಬ್ ಉರ್ ರೆಹಮಾನ್, ಲಿಝಾದ್ ವಿಲಿಯಮ್ಸ್, ವಿಘ್ನೇಶ್ ಪುತ್ತೂರು, ಅರ್ಜುನ್ ತೆಂಡೂಲ್ಕರ್ (ಮಾರಾಟ).

ಪಂಜಾಬ್ ಕಿಂಗ್ಸ್ ಬಿಡುಗಡೆ ಮಾಡಿದ ಆಟಗಾರರು: ಗ್ಲೆನ್ ಮ್ಯಾಕ್ಸ್‌ವೆಲ್, ಆರೋನ್ ಹಾರ್ಡಿ, ಕುಲ್ದೀಪ್ ಸೇನ್, ಪ್ರವೀಣ್ ದುಬೆ, ಜೋಶ್ ಇಂಗ್ಲಿಸ್.

ಲಕ್ನೋ ಸೂಪರ್ ಜೈಂಟ್ಸ್​ ಬಿಡುಗಡೆ ಮಾಡಿದ ಆಟಗಾರರು: ಆರ್ಯನ್ ಜುಯಲ್, ಡೇವಿಡ್ ಮಿಲ್ಲರ್, ಯುವರಾಜ್ ಚೌಧರಿ, ರಾಜವರ್ಧನ್ ಹಂಗರ್ಗೇಕರ್, ಆಕಾಶ್ ದೀಪ್, ರವಿ ಬಿಷ್ಣೋಯ್, ಶಮರ್ ಜೋಸೆಫ್, ಶಾರ್ದೂಲ್ ಠಾಕೂರ್ (ಮಾರಾಟ).

ಇದನ್ನೂ ಓದಿ :Bengaluru: ಮಣ್ಣಲ್ಲಿ ಮಣ್ಣಾದ ವೃಕ್ಷಮಾತೆ: ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

………

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/lAkKmmGp2KI?si=3e2QrJZhIs6NS-QG

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 19

You cannot copy content of this page