Sullia : ಮಕ್ಕಳಿಗೆ ಚಿತ್ರಕಲೆಯಿಂದ ಪ್ರಯೋಜನಗಳು ತುಂಬಾ ಹೆಚ್ಚು. ಇದು ಕೇವಲ ಹವ್ಯಾಸವಲ್ಲ ಅವರ ಬುದ್ಧಿ, ಸೃಜನಶೀಲತೆ, ಭಾವನೆಗಳು, ಮತ್ತು ಕಲಿಕೆಯ ಮೇಲೆ ಮಹತ್ತರ ಪರಿಣಾಮ ಬೀರುತ್ತದೆ. ಭಾವನೆಗಳನ್ನು ಚಿತ್ರದ ಮೂಲಕ ಬಣ್ಣಗಳ ಮೂಲಕ ತೋರಿಸುವುದು ವಿಶೇಷ ಕೌಶಲ್ಯವೆಂದೇ ಹೇಳಬಹುದು. ಹೌದು…! ಪ್ರತೀ ವರ್ಷದಂತೆ ಈ ವರ್ಷವೂ ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್ ಸುಳ್ಯ, ರೋಟರಿ ಸುಳ್ಯ, ಇಂಟರ್ಯಾಕ್ಟ್ ಕ್ಲಬ್ ರೋಟರಿ ಶಾಲೆ ಮಿತ್ತಡ್ಕ, ಸುಳ್ಯ ಮತ್ತು ಸುದ್ದಿ ಬಿಡುಗಡೆ ಪತ್ರಿಕೆ, ಸುದ್ದಿ ವೆಬ್‌ಸೈಟ್, ಸುದ್ದಿ ಚಾನೆಲ್ ಹಾಗೂ ಸ್ವರ್ಣ೦ ಜ್ಯುವೆಲ್ಲರ್ಸ್ ಸುಳ್ಯ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆಯ ಪ್ರಯುಕ್ತ ಸುಳ್ಯ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ವರ್ಣ ಚಿತ್ತಾರ-2025 ಸ್ಪರ್ಧೆಯು ನ.16ರಂದು 9.30ಕ್ಕೆ ಸರಿಯಾಗಿ ರೋಟರಿ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.
ಚಿತ್ರಕಲಾ ಸ್ಪರ್ಧೆಗಳು: ವಿಭಾಗ-1: ಎಲ್.ಕೆ.ಜಿ, ಯು.ಕೆ.ಜಿ. ವಿಭಾಗ-2: 1, 2, 2-3: 3, 4ನೇ. (ವಿ.ಸೂ.: 1ನೇ ತರಗತಿಯಿಂದ 4ನೇ ತರಗತಿವರೆಗಿನ ಸ್ಪರ್ಧಿಗಳಿಗೆ ಪೂರ್ವಾಹ್ನ 10.30ಕ್ಕೆ ಸರಿಯಾಗಿ ಸ್ಪರ್ಧೆ ಪ್ರಾರಂಭಗೊಳ್ಳಲಿರುವುದು.) ವಿಭಾಗ-4: 5ನೇ, 6ನೇ, ವಿಭಾಗ-5: 7, 8, ವಿಭಾಗ 6: 9, 10ನೇ ತರಗತಿಯಲ್ಲಿ ಆರು ವಿಭಾಗಗಳಲ್ಲಿ ನಡೆಯಲಿವೆ. (ವಿ.ಸೂ.: 5ರಿಂದ 10ನೇ)
ಸ್ಪರ್ಧೆಯ ಫಲಿತಾಂಶವನ್ನು ನವೆಂಬರ್ 17ರ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು. ಹಾಗೂ ಸ್ಪರ್ಧಿಗಳು ಪೂರ್ವಾಹ್ನ 9.30ಕ್ಕೆ ಹಾಜರಿರಬೇಕು. ಡ್ರಾಯಿಂಗ್ ಹಾಳೆಯನ್ನು ಒದಗಿಸಲಾಗುವುದು. ಚಿತ್ರ ಬಿಡಿಸುವ ಪರಿಕರಗಳನ್ನು ವಿದ್ಯಾರ್ಥಿಗಳೇ ತರತಕ್ಕದ್ದು. ಪ್ರತೀ ವಿಭಾಗದಲ್ಲಿ ಉತ್ತಮ 5 ಕಲಾಕೃತಿಗಳನ್ನು ಆಯ್ಕೆ ಮಾಡಲಾಗುವುದು. ಸುಳ್ಯ ತಾಲೂಕಿನ ಆಸಕ್ತ ಎಲ್ಲಾ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದೆ.
ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರದೊಂದಿಗೆ ಗಿಫ್ಟ್ ಹ್ಯಾಂಪರ್ ನೀಡಲಾಗುವುದು ಎಂದು ಸಂಘಟಕರಾದ ಶ್ರೀಹರಿ ಪೈಂದೋಡಿ ಹಾಗೂ ಪ್ರಸನ್ನ ಐವರ್ನಾಡು ತಿಳಿಸಿದ್ದಾರೆ.
ಇದನ್ನೂ ಓದಿ :Madikeri Protest: ಅನುಮತಿ ನಿರಾಕರಣೆ ನಡುವೆಯೂ ಮಡಿಕೇರಿಯಲ್ಲಿ ಹಿಂ.ಜಾ.ವೇ ಪ್ರತಿಭಟನೆ..!
…………
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/lAkKmmGp2KI?si=3e2QrJZhIs6NS-QG











