Belagavi : ಬೆಳಗಾವಿ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಕಳೆದ 2 ದಿನಗಳಿಂದ 28 ಕೃಷ್ಣಮೃಗಗಳು ಸಾವನ್ನಪ್ಪಿರುವುದು ವರದಿಯಾಗಿದೆ. ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯ ಝೂ ಇದಾಗಿದ್ದು ಇವತ್ತು ಒಂದೇ ದಿನ 20 ಕೃಷ್ಣ ಮೃಗ ನಿಗೂಢವಾಗಿ ಸಾವಿಗೀಡಾಗಿದ್ದು ಏಕಾಏಕಿ ಕೃಷ್ಣಮೃಗಗಳ ಸಾವಿನ ಸಂಖ್ಯೆಯಿಂದಾಗಿ ಬೆಚ್ಚಿ ಬೀಳುವಂತಾಗಿದೆ.
ಸತ್ತ ಕೃಷ್ಣ ಮೃಗಗಳನ್ನ ಲ್ಯಾಬ್ ಗೆ ಕಳುಹಿಸಿ ಸೈಲೆಂಟ್ ಆಗಿ ಕುಳಿತರೇ ?
ನವೆಂಬರ್ 13ರಂದು 8 ಕೃಷ್ಣ ಮೃಗಗಳು ಸಾವನಪ್ಪಿದ್ದು, ಇಂದು ಕ್ರಮೇಣ ಸಂಖ್ಯೆ 20 ಕ್ಕೆ ಏರಿದೆ. ಇಲ್ಲಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ಈ ರೀತಿಯ ಸಾವಿನ ಸಂಖ್ಯೆ ಏರುವುದಕ್ಕೆ ಕಾರಣವೆಂದು ಹೇಳಲಾಗಿದ್ದು, ಇಲ್ಲಿನ ವೈದ್ಯ ಸಿಬ್ಬಂದಿಗಳು ಎಚ್ಚೆತ್ತುಕೊಳ್ಳದೆ, ಈ ನಿರ್ಲಕ್ಷಕ್ಕೆ ಕಾರಣವಾಗಿದೆ. ಇನ್ನುಳಿದ ಕೃಷ್ಣಮೃಗಗಳಿಗೆ ಚಿಕಿತ್ಸೆ ನೀಡದೆ ಎಡವಿದ ಸಿಬ್ಬಂದಿಗಳು ಸತ್ತ ಕೃಷ್ಣ ಮೃಗಗಳನ್ನ ಲ್ಯಾಬ್ ಗೆ ಕಳುಹಿಸಿ ಸೈಲೆಂಟ್ ಆಗಿ ಕುಳಿತರೇ ಎನ್ನುವ ಪ್ರಶ್ನೆಗಳು ಎದುರಾಗಿವೆ. ವರದಿಗಾಗಿ ಕಾಯುತ್ತಾ ಕಾಲಹರಣ ಮಾಡಿ ಮತ್ತಷ್ಟು ಸಾವು ಸಂಭವಿಸಿತೇ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಲ್ಲಿನ ಸಿಬ್ಬಂದಿಗಳು ಕೂಡಾ ಮೊದಲ ಬಾರಿಗೆ ಈ ರೀತಿ ಘಟನೆ ನಡೆದಿರೋದು ಆದ್ದರಿಂದ ಗೊಂದಲದಲ್ಲಿದ್ದೇವೆ ಎಂದು ಹೇಳಿರುತ್ತಾರೆ.
4ರಿಂದ 6 ವರ್ಷ ವಯಸ್ಸಿನ ಪ್ರಾಣಿಗಳು ಯಾವುದೋ ಸೋಂಕಿನಿಂದ ಮೃತಪಟ್ಟಿರುವ ಅನುಮಾನ ಇದೆ. ಆದರೂ ತನಿಖೆ ನಡೆಸಿ ಸಾವಿಗೆ ಕಾರಣವನ್ನು ಪತ್ತೆ ಹಚ್ಚುವುದಾಗಿ ತಿಳಿಸಿದರು. ಈ ಮಧ್ಯೆ ಪ್ರಕರಣ ಕುರಿತು ಮಾತನಾಡಿರುವ ಸಚಿವರು ಈಶ್ವರ್ ಖಂಡ್ರೆ, ಕೃಷ್ಣಮೃಗಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ :Sandalwood: ಜನ ಥಿಯೇಟರ್ ಗೆ ಬರ್ತಿಲ್ಲ ಅಂತ ಕಣ್ಣೀರಿಟ್ಟ ನಟ ಅನೀಶ್!
……….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/lAkKmmGp2KI?si=3e2QrJZhIs6NS-QG











