ಬ್ರೇಕಿಂಗ್ ನ್ಯೂಸ್
ಕರ್ನಾಟಕ

Sandalwood: ಜನ ಥಿಯೇಟರ್‌ ಗೆ ಬರ್ತಿಲ್ಲ ಅಂತ ಕಣ್ಣೀರಿಟ್ಟ ನಟ ಅನೀಶ್!

Sandalwood: ಸಿನಿಮಾ ಕ್ಷೇತ್ರದಲ್ಲಿ ಸಿನಿಮಾ  ಗೆಲ್ಲೋದು ಬಿಡೋದು ಎಲ್ಲ ವೀಕ್ಷಕರಿಗೆ ಬಿಟ್ಟಿದ್ದು, ಕೆಲವೊಮ್ಮೆ ಸಿನಿಮಾಗಳು ಗೆದ್ದು ಬೀಗಿದ್ರೆ, ಇನ್ನೂ ಕೆಲವೊಮ್ಮೆ ಸೋತು ಸುಣ್ಣವಾಗುತ್ತದೆ. ಎಲ್ಲದಕ್ಕೂ ಲಕ್‌ ಅನ್ನೋದು ಬೇಕು. ಇದೀಗ ಕನ್ನಡದ ಲವ್‌  OTP ಎಂಬ ಸಿನಿಮಾ ನಿರೀಕ್ಷೆಯ ಮಟ್ಟ ಗೆಲುವು ಸಿಕ್ಕಿಲ್ಲ ಎಂದು ನಟ ನಿರ್ದೇಶಕ ಅನೀಶ್‌ ಇನ್ಸ್ಟಾಗ್ರಾಂನಲ್ಲಿ ಲೈವ್‌ ಬಂದು ಕಣ್ಣೀರು ಹಾಕಿರುವ ವೀಡಿಯೋ ವೈರಲ್‌ ಆಗಿದೆ.

ಲವ್‌ OTP ಎಂಬ ಸಿನಿಮಾ ನಿನ್ನೆ ತೆರೆಕಂಡಿದೆ. ಹೀಗಾಗಿ ಜನ ಥಿಯೇಟರ್‌ ಗೆ ಬಂದಿಲ್ಲ ಎಂದು ಅನೀಶ್‌ ಕುಮಾರ್‌ ಬೇಸರಗೊಂಡಿದ್ದಾರೆ.  ನೋವು ಹತಾಶೆಯಲ್ಲಿ ನಟ, ನಿರ್ದೇಶಕ ಅನೀಶ್ ಬೇಸರ ವ್ಯಕ್ತಪಡಿಸಿದ್ದಾರೆ.  ಲವ್ OTP ಚಿತ್ರಕ್ಕೆ ಅತ್ಯುತ್ತಮ ವಿಮರ್ಶೆಗಳು‌ ಸಿಕ್ಕರು, ಚಿತ್ರಮಂದಿರದತ್ತ  ಪ್ರೇಕ್ಷಕ ಸುಳಿಯುತ್ತಿಲ್ಲ, ನವೆಂಬರ್ 14ರಂದು ರಾಜ್ಯದಾದ್ಯಂತ ಲವ್ OTP ಸಿನಿಮಾ ಬಿಡುಗಡೆಯಾಗಿದೆ. ಬುಕ್ ಮೈ ಶೋನಲ್ಲೂ ಪ್ರಶಂಸೆಗಳ‌ ಸುರಿಮಳೆ ಬರುತ್ತಿದೆ,  ವಿಮರ್ಶಕರಿಂದ 3.5/5  ರೇಟಿಂಗ್ ಪಡೆದಿದೆ, 14ವರ್ಷಗಳ ಸತತ ಪ್ರಯತ್ನಕ್ಕೆ‌ ಮತ್ತೆ ನಿರಾಸೆ ಆಯ್ತು ಅಂತ ಹತಾಶರಾಗಿ ವೀಡಿಯೋ ಮಾಡಿದ್ದಾರೆ.  ಇದಕ್ಕಿಂತ ಇನ್ನೇನು ಮಾಡ್ಬೇಕೆಂದು ಅಂತ ಪ್ರಶ್ನೆ ಕೇಳಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ವಿಡಿಯೋ ಬಿಟ್ಟು, ನೋವು ತೋಡುಕೊಂಡಿದ್ದಾರೆ.

ಅನೀಶ್‌ ಇನ್ಸ್ಟಾಗ್ರಾಂ ಪೋಸ್ಟ್‌ ನಲ್ಲಿ ಏನಿದೆ..?

ನಮಸ್ಕಾರ… ತುಂಬಾ ನೋವಿನಿಂದ ಹತಾಶೆಯಿಂದ ಈ ಮಾತುಗಳನ್ನ ಹೇಳ್ತೀನಿದ್ದೀನಿ…, 14ವರ್ಷದ ನಿರಂತರ ಶ್ರಮ.. ,  ಸೋಲುಗಳಿಗೆ ಕಂಗೆಡದೇ.. ಸಿನಿಮಾದಿಂದ ಸಿನಿಮಾಗೆ ಆಶಾದಾಯಕವಾಗೇ ಇಲ್ಲಿವರೆಗೂ ಬಂದೆ… ನನ್ನ ವೃತ್ತಿ ಬದುಕಿನಲ್ಲೇ The Best Reviews ಲವ್ OTPಗೆ ಸಿಕ್ಕಿದೆ… ಸಿಕ್ತಿದೆ.., ಆದ್ರೆ, ಥಿಯೇಟರಿಗೆ ಯಾಕ್ ಯಾರೂ ಬರ್ತಿಲ್ಲ…? ನಾನೂ ಇನ್ನೇನ್ ಮಾಡ್ಬೇಕು..? ಗೊತ್ತಾಗ್ತಿಲ್ಲ…!! ಮೊನ್ನೆ ಪ್ರಿಮಿಯರ್ ನೋಡಿ ಪತ್ರಕರ್ತರು ಅತ್ಯುತ್ತಮ ವಿಮರ್ಶೆಗಳನ್ನ ಕೊಟ್ಟಿದ್ದಾರೆ.. ನಿನ್ನೆ ಯಾರೆಲ್ಲಾ ನೋಡಿದ್ದಾರೋ ಬುಕ್ ಮೈಶೋನಲ್ಲಿ ನಿರೀಕ್ಷೆಗೂ ಮೀರಿ ನಮ್ಮ‌ ಕೆಲಸವನ್ನ ಕೊಂಡಾಡ್ತಿದ್ದಾರೆ..
ಆದ್ರೂ ಯಾಕ್ ಈರೀತಿ..? ಅರ್ಥ ಆಗ್ತಿಲ್ಲ..? ಇವತ್ತು ನಾಳೆಯೊಳಗೆ ಪ್ರೇಕ್ಷಕರು ಬಂದ್ರೆ ಕೈ ಹಿಡಿದ್ರೆ ಮುಂದಿನ ದಾರಿ…. ಇಲ್ಲಾಂದ್ರೆ ಇಲ್ಲಿಗೆ ನನ್ನ ಸಿನಿಮಾ ಪ್ರಯತ್ನವನ್ನ ನಿಲ್ಲಿಸ್ತೀನಿ. ತುಂಬಾ ದುಃಖದಿಂದ ಈ ವಿಚಾರ ಹೇಳ್ತಿದ್ದೀನಿ.. ಈ ಕಣ್ಣೀರು ಸಿಂಪತಿಗಲ್ಲ… ಗಿಮಿಕ್ಕು ಅಲ್ಲ.. ನನ್ನ ಅಂತರಾಳದ ನೋವಿದು ಎಂದು ಬರೆದುಕೊಂಡಿದ್ದಾರೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page