Bangalore : ಬೆಂಗಳೂರಿನಲ್ಲಿ ನಕಲಿ ನಂದಿನಿ ತುಪ್ಪ ಮಾರಾಟವಾಗುತ್ತಿದ್ದು, 1.26 ಕೋಟಿ ಮೌಲ್ಯದ ನಕಲಿ ನಂದಿನಿ ತುಪ್ಪ ವಶವಾಗಿರುವುದು ವರದಿಯಾಗಿದೆ. ನಕಲಿ ತುಪ್ಪ ಮಾರಾಟಗಾರರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿಯೇ ಈ ನಕಲಿ ತುಪ್ಪವು ಮಾರಾಟವಾಗುತ್ತಿತ್ತು. ಒಟ್ಟು ನಾಲ್ಕು ವಾಹನವನ್ನು ಸೀಜ್ ಮಾಡಿರುವ ಪೋಲಿಸರು, ಒಂದು ಮೆಷಿನ್ ಯೂನಿಟ್ ನ್ನು ತಮಿಳುನಾಡು ಜಿಲ್ಲೆಯಲ್ಲಿ ರೈಡ್ ಮಾಡಲಾಗಿದೆ.
ಜನರಿಗೆ ಅನುಮಾನಗಳು ಹುಟ್ಟುವಂತ ಸಂದಿಗ್ಧ ಪರಿಸ್ಥಿತಿ ;
ನಂದಿನಿ ಪ್ರೋಡಕ್ಟ್ ಬಹಳ ಪ್ರಸಿದ್ಧಿಯಾಗಿರುವ ಹಾಗೂ ನಂಬಿಕೆಗೆ ಅರ್ಹವಾಗಿರುವ ಒಂದು ಸಂಸ್ಥೆ. ದೇಶದ ನಾನಾ ಕಡೆ ನಂದಿನಿ ಬ್ರ್ಯಾಂಡ್ ನಲ್ಲಿಯೇ ಹಲವಾರು ಉತ್ಪನ್ನಗಳನ್ನು ನೀಡುತ್ತಿರುವ ಈ ನಂದಿನಿ ಕಂಪನಿಯ ಹೆಸರನ್ನು ಇಟ್ಟುಕೊಂಡು ಈ ದೊಡ್ಡ ಜಾಲವೇ ನಕಲಿ ತುಪ್ಪವನ್ನು ಮಾರಾಟ ಮಾಡುತ್ತಿದ್ದವು. ಯಾವುದೇ ಭಯವಿಲ್ಲದೆ ದೇಶ ವಿದೇಶಗಳಲ್ಲಿಯೂ ಕೂಡ ನಕಲಿ ತುಪ್ಪದ ಮಾರಾಟವಾಗುತ್ತದೆ. ಇದೀಗ ನಂದಿನಿ ತುಪ್ಪ ಅಥವಾ ಈ ನಂದಿನಿ ಬ್ರ್ಯಾಂಡ್ ನ್ನು ಖರೀದಿಸುವಾಗ ಜನರಿಗೆ ಅನುಮಾನಗಳು ಹುಟ್ಟುವಂತ ಸಂದಿಗ್ಧ ಪರಿಸ್ಥಿತಿ ಜೊತೆ ಆತಂಕ ಶುರುವಾಗಿದೆ.
ಒಂದು ಲೀಟರ್ ಒರಿಜಿನಲ್ ತುಪ್ಪಕ್ಕೆ ನಾಲ್ಕು ಲೀಟರ್ ಬೇರೆ ಎಣ್ಣೆ ;
ಇಲ್ಲಿ ಮಹೇಂದ್ರ ಎಂಬಾತ ನಿಜವಾದ ತುಪ್ಪವನ್ನು ಖರೀದಿ ಮಾಡುವವನಾಗಿದ್ದ. ಅದನ್ನು ಅವನು ತಮಿಳುನಾಡಿಗೆ ಕಳುಹಿಸುತ್ತಾ ಇದ್ದ ಎನ್ನಲಾಗಿದ್ದು, ಅಲ್ಲಿ ನಂದಿನಿ ತುಪ್ಪವನ್ನು ಮಾಡುವಂತಹ ಒಂದು ಜಾಗವನ್ನ ಸೆಟ್ ಮಾಡಿಕೊಂಡಿದ್ದು. ಅಂದ್ರೆ ಉದಾಹರಣೆಗೆ ಒಂದು ಲೀಟರ್ ಒರಿಜಿನಲ್ ತುಪ್ಪಕ್ಕೆ ನಾಲ್ಕು ಲೀಟರ್ ಬೇರೆ ಎಣ್ಣೆಯನ್ನು ಕಲಬೆರಕೆಯಾಗಿ ಹಾಕುತ್ತಿದ್ದರೆನ್ನಲಾಗಿದೆ. ಅದರಲ್ಲಿ ತೆಂಗಿನ ಕಾಯಿ ಎಣ್ಣೆ ಅಥವಾ ಡಾಲ್ಡ, ಈ ರೀತಿಯ ಎಣ್ಣೆ ಪದಾರ್ಥಗಳನ್ನು ಬಳಸಿ ಒಟ್ಟು 5 ಲೀ. ನಷ್ಟು ತುಪ್ಪವನ್ನು ಮಾಡಲಾಗುತ್ತಿತ್ತು. ಈ ರೀತಿ ಸಂಗ್ರಹಿಸಿದ ನಕಲಿ ತುಪ್ಪವನ್ನು ತಮಿಳುನಾಡಿನಿಂದ ಬೆಂಗಳೂರಿಗೆ ಬೊಲೇರೋ ವಾಹನದಲ್ಲಿ ಶಿಫ್ಟ್ ಮಾಡಲಾಗುತ್ತಿತ್ತು. ಬೆಂಗಳೂರಿನ ಚಾಮರಾಜನಗರದಲ್ಲಿ ಇರುವಂತಹ ಒಂದು ಗೋಡೌನ್ ನಲ್ಲಿ ಶೇಖರಿಸಿ, ಅಲ್ಲಿಂದ ಬೇರೆ ಬೇರೆ ಮಳಿಗೆಗೆ ಮಾರಾಟವನ್ನು ಮಾಡುತ್ತಿದ್ದರು. ಆದರೆ ಇದರ ಹಿಂದೆ ಕೆಎಂಎಫ್ ನಲ್ಲಿ ಕೆಲಸ ಮಾಡುತ್ತಿರುವ ಒಬ್ಬನ ಕೈವಾಡ ಇದೆ ಎಂದು ಕೂಡ ಹೇಳಲಾಗಿದೆ. ಇದರ ಬಗ್ಗೆ ಹೆಚ್ಚಿನ ತನಿಖೆಯು ಈಗಾಗಲೇ ನಡೆಯುತ್ತಿರುವುದು ವರದಿಯಾಗಿದೆ.
ಇದನ್ನೂ ಓದಿ :Surathkal: ಸಿಗ್ನಲ್ನಲ್ಲಿ ನಿಂತಿದ್ದ ರಿಕ್ಷಾಗೆ ಟ್ಯಾಂಕರ್ ಡಿಕ್ಕಿ – ಮೂವರು ಮೃತ್ಯು
….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/0Gm4qrLCI1k?si=1W0ERQYwLtKFi-tg











