ಬ್ರೇಕಿಂಗ್ ನ್ಯೂಸ್
ಕರ್ನಾಟಕರಾಜಕೀಯ

Shobha Karandlaje: ಪರಿಸರ ಮತ್ತು ಜನರ ಜೀವದ ಜೊತೆ ಚೆಲ್ಲಾಟ ಬೇಡ: ಶೋಭಾ ಕರಂದ್ಲಾಜೆ ಎಚ್ಚರಿಕೆ!

Shobha Karandlaje: ಬೆಂಗಳೂರಿಗೆ ಅಭಿವೃದ್ಧಿ ಬೇಕು; ಆದರೆ, ನಮ್ಮ ಪರಿಸರ ಮತ್ತು ಜನರ ಜೀವದ ಜೊತೆ ಚೆಲ್ಲಾಟ ಬೇಡ ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ಎಚ್ಚರಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಪ್ರಕೃತಿಯನ್ನು ನಾಶಪಡಿಸಿ, ಕೆರೆಗಳನ್ನು ಹಾಳುಮಾಡಿ, ಅವೈಜ್ಞಾನಿಕ ಮೇಲುಸೇತುವೆಗಳನ್ನು ನಿರ್ಮಿಸಿ, ಸ್ಯಾಂಕಿ ಕೆರೆಯ ನಾಶಕ್ಕೆ ಮುಂದಾಗಿದೆ. ಈ ಕೆರೆಯ ಸಂರಕ್ಷಣೆಗಾಗಿ ಸಹಿ ಸಂಗ್ರಹ, ವೀಕ್ಷಣೆ ಹಾಗೂ ಸರ್ಕಾರದ ಅಧಿಕಾರಿಗಳೊಂದಿಗೆ ಪರಿಶೀಲನೆಯನ್ನು ಇಂದು ಮಲ್ಲೇಶ್ವರದ 18ನೇ ಕ್ರಾಸ್ ಬಳಿ ಇರುವ ಸ್ಯಾಂಕಿ ಕೆರೆಯ ಮುಖ್ಯದ್ವಾರದ ಬಳಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸುರಂಗ ರಸ್ತೆಯ ಡಿಪಿಆರ್ ಅವೈಜ್ಞಾನಿಕ ಎಂದು ಟೀಕಿಸಿದರು.

ಬೆಂಗಳೂರಿಗೆ ಸರಿಹೊಂದುವ ಡಿಪಿಆರ್ ಮಾಡಬೇಕು. ಇಲ್ಲಿ ಪರಿಸರವೇ ನಮಗೆ ಮುಖ್ಯ. ಬೆಂಗಳೂರನ್ನು ಉದ್ಯಾನಗಳ ನಗರ, ಕೆರೆಗಳ ನಗರ ಎಂದು ಕರೆಯಲಾಗುತ್ತಿತ್ತು. ಇವತ್ತು ರಾಜ್ಯ ಸರಕಾರವು ಕಮಿಷನ್ ಹೊಡೆಯಲು, ದುಡ್ಡು ಮಾಡಲೆಂದು ಅವೈಜ್ಞಾನಿಕ ಡಿಪಿಆರ್ ತಯಾರಿಸಿದೆ. ಇದನ್ನು ವಿರೋಧಿಸುತ್ತೇವೆ ಎಂದು ಹೇಳಿದರು.

ಸ್ಯಾಂಕಿ ಟ್ಯಾಂಕ್, ಲಾಲ್‍ಬಾಗ್, ಕಬ್ಬನ್ ಪಾರ್ಕ್ ಹಾಳು ಮಾಡಲು, ಕೆರೆಗಳನ್ನು ಮುಳುಗಿಸಲು ನೀವು ಹೊರಟಿದ್ದೀರಿ. ಈಗಾಗಲೇ ಕೆರೆಗಳನ್ನು ರಿಯಲ್ ಎಸ್ಟೇಟ್ ದಂಧೆಗಳು ಪೂರ್ತಿ ನುಂಗಿ ಹಾಕಿವೆ. ತರಾತುರಿಯಲ್ಲಿ ಡಿಪಿಆರ್ ಮಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು. ಯಾವ ತಜ್ಞರು, ಯಾವ್ಯಾವ ತಂಡಗಳಿಂದ ಇದರ ಅಧ್ಯಯನ ಆಗಿದೆ ಎಂದು ಕೇಳಿದರು. ಪರಿಸರದ ಮೇಲಿನ ಹಾನಿಯ ಅಧ್ಯಯನ ಆಗಿದೆಯೇ? ಸಾಂಸ್ಕøತಿಕ, ಮಾಲಿನ್ಯದ ಮೇಲಿನ ಪ್ರಭಾವದ ಅಧ್ಯಯನ ನಡೆಸಿದ್ದೀರಾ? ಎಂದು ಪ್ರಶ್ನಿಸಿದರು. ಇದ್ಯಾವುದನ್ನೂ ಮಾಡದೇ ತರಾತುರಿಯಲ್ಲಿ ಟೆಂಡರ್ ಕರೆಯಲಾಗುತ್ತಿದೆ ಎಂದು ಆಕ್ಷೇಪಿಸಿದರು.

 

ಕಟ್ ಆಂಡ್ ಪೇಸ್ಟ್ ವಿಧಾನದಲ್ಲಿ ಡಿಪಿಆರ್: ಡಾ.ಸಿ.ಎನ್.ಅಶ್ವತ್ಥನಾರಾಯಣ್ ಟೀಕೆ

ಸುರಂಗ ರಸ್ತೆ ಯೋಜನೆಗೆ ಕಟ್ ಆಂಡ್ ಪೇಸ್ಟ್ ವಿಧಾನದಲ್ಲಿ ಡಿಪಿಆರ್ ತಯಾರಿಸಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ್ ಅವರು ಆರೋಪಿಸಿದ್ದಾರೆ. ಸ್ಯಾಂಕಿ ಕೆರೆಯ ಕೆರೆಯ ಸಂರಕ್ಷಣೆಗಾಗಿ ಸಹಿ ಸಂಗ್ರಹ, ವೀಕ್ಷಣೆ ಹಾಗೂ ಸರ್ಕಾರದ ಅಧಿಕಾರಿಗಳೊಂದಿಗೆ ಪರಿಶೀಲನೆಯನ್ನು ಇಂದು ಮಲ್ಲೇಶ್ವರದ 18ನೇ ಕ್ರಾಸ್ ಬಳಿ ಇರುವ ಸ್ಯಾಂಕಿ ಕೆರೆಯ ಮುಖ್ಯದ್ವಾರದ ಬಳಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರಿಯಾದ ಪರಿಣತಿ, ಪ್ಯಾನೆಲ್ ಕನ್ಸಲ್ಟೆಂಟ್ ಇಲ್ಲದೇ ಸಾರ್ವಜನಿಕರ ಜೊತೆ ಚೆಲ್ಲಾಟ ಮಾಡುತ್ತಿದ್ದಾರೆ ಎಂದು ದೂರಿದರು. ಸ್ಯಾಂಕಿ ಕೆರೆ ನಿರ್ನಾಮ ಮಾಡಲು ಬಂದಿದ್ದಾರೆ. ಬೇಜವಾಬ್ದಾರಿತನದಿಂದ ಸಾರ್ವಜನಿಕ ಸ್ಥಳಗಳನ್ನು ನಾಶ ಮಾಡದಿರಿ ಎಂದು ಎಚ್ಚರಿಸಿದರು.

ನಾವು ಗೆದ್ದಾಗ ಮತಗಳ್ಳತನವೇ?- ಶೋಭಾ ಕರಂದ್ಲಾಜೆ!

ಕಾಂಗ್ರೆಸ್ ಗೆದ್ದಾಗ ಮತಗಳ್ಳತನದ ಪ್ರಶ್ನೆ ಇಲ್ಲ; ತೆಲಂಗಾಣ ಗೆದ್ದಾಗ ಮತಗಳ್ಳತನ ಇಲ್ಲ. ನಾವು ಗೆದ್ದಾಗ ಮತಗಳ್ಳತನ. ಏನು ರಾಜಕಾರಣ ಇದು ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ಪ್ರಶ್ನಿಸಿದ್ದಾರೆ.
ಮಾಧ್ಯಮಗಳ ಪ್ರಶ್ನೆಗೆ ಇಂದು ಉತ್ತರಿಸಿದ ಅವರು, ಸಿದ್ದರಾಮಯ್ಯನವರೇ ನೀವು 135 ಸೀಟು ಹೇಗೆ ಗೆದ್ದಿರಿ ಎಂದು ಪ್ರಶ್ನಿಸಿದರು. ರಾಜಕಾರಣವನ್ನು ರಾಜಕಾರಣವಾಗಿ ಎದುರಿಸಿ. ಓಡಿ ಹೋಗಬೇಡಿ. ರಾಹುಲ್ ಗಾಂಧಿ ಮತ್ತು ನಿಮ್ಮ ಪಕ್ಷದ್ದು ಹಿಟ್ ಆಂಡ್ ರನ್ ಕೇಸ್ ಎಂದು ಟೀಕಿಸಿದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಮಾತನಾಡಿ, ಬಿಹಾರದ ಜನತೆ ಕಾಂಗ್ರೆಸ್ಸನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಪಾಕಿಸ್ತಾನದಿಂದ, ಬಾಂಗ್ಲಾದಿಂದ ಬಂದವರು, ಸತ್ತು ಹೋದವರು, ಎರಡು ಹೆಸರು ಇದ್ದ ಮತಗಳನ್ನು ರದ್ದು ಮಾಡಿದ್ದಾರೆ ಎಂದು ಅವರು ನುಡಿದರು. ಇದರಲ್ಲಿ ತಪ್ಪೇನು? ಸಮಸ್ಯೆ ಇದ್ದಲ್ಲಿ ಅವತ್ತೇ ನಿಮ್ಮ ಏಜೆಂಟ್ ಅದನ್ನು ಪ್ರಶ್ನಿಸಬೇಕಿತ್ತಲ್ಲವೇ ಎಂದು ಕೇಳಿದರು. ಈಗ ಎಸ್‍ಐಆರ್ ಸರಿ ಇಲ್ಲ; ಮತಗಳ್ಳತನ ನಡೆದಿದೆ; ಇವಿಎಂ ಸರಿ ಇಲ್ಲ ಎಂದು ಹೇಳಿದರೆ ಹೇಗೆ? ಸೋತ ಮೇಲೆ ಈ ಹೇಳಿಕೆ ಕೊಟ್ಟರೆ ನಿಮ್ಮನ್ನು ಯಾರೂ ನಂಬುವುದಿಲ್ಲ ಎಂದು ತಿಳಿಸಿದರು.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 154

You cannot copy content of this page