ಬ್ರೇಕಿಂಗ್ ನ್ಯೂಸ್
ಕರ್ನಾಟಕ

Mandya: ಸತತ ಐದು ತಿಂಗಳಿನಿಂದ ಕೆಆರ್ ಎಸ್ ಜಲಾಶಯ ಸಂಪೂರ್ಣ ಭರ್ತಿ!

Mandya: ಹಳೆ ಮೈಸೂರು ಭಾಗದ ಜೀವನಾಡಿಯಾದ ಕೆಆರ್ ಎಸ್ ಜಲಾಶಯ ಇದೀಗ ಮತ್ತೊಂದು ದಾಖಲೆಗೆ ಸಾಕ್ಷಿಯಾಗಿದ್ದು, ಸತತ ಐದು ತಿಂಗಳಿನಿಂದ ಕೆಆರ್ ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.

ಇದನ್ನೂ ಓದಿ: ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಹಿನ್ನೆಲೆ ಬಿಜೆಪಿ ಸಂಭ್ರಮಾಚರಣೆ!

ಜೂನ್ ಅಂತ್ಯದಿಂದಲೂ ಗರಿಷ್ಠ ನೀರಿನ ಮಟ್ಟ ಕಾಯ್ದುಕೊಂಡ ಜಲಾಶಯ ಇದಾಗಿದ್ದು,  ಆ ಮೂಲಕ ಕೆಆರ್ ಎಸ್. ಮತ್ತೊಂದು ದಾಖಲೆ ಬರೆದಿದೆ.  ಈ ಬಾರಿ ಜೂನ್ ನಲ್ಲೇ ಕೆಆರ್ ಎಸ್ ಭರ್ತಿಯಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಜೂನ್ ನಲ್ಲಿ ಭರ್ತಿಯಾಗಿದೆ.  ಕಳೆದ ಜೂನ್ ನಲ್ಲೇ  ಸಿಎಂ ಸಿದ್ದರಾಮಯ್ಯ ಬಾಗಿನ ಸಮರ್ಪಿಸಿದ್ದರು. ಸಿಎಂ ಸಿದ್ದರಾಮಯ್ಯ ಜೂನ್ ತಿಂಗಳಲ್ಲಿ ‌ಕಾವೇರಿ‌ ಮಾತೆಗೆ ಬಾಗಿನ ಸಮರ್ಪಿಸಿದ ಮೊದಲ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.

ಇದನ್ನೂ ಓದಿ: ತೆರಿಗೆ ಕಟ್ಟದೇ ಸಾರ್ವಜನಿಕರಿಂದ ಆಕ್ಷೇಪ : ಇದು ನಮ್ಮ ವಿಶ್ವವಿದ್ಯಾನಿಲಯದ ಕಥೆ…!
ಜೂನ್ ನಿಂದ ಇಲ್ಲಿಯವರೆಗೂ ಕೆಆರ್ ಎಸ್ ಸಂಪೂರ್ಣ ತುಂಬಿದೆ, ಜೊತೆಗೆ ತಮಿಳುನಾಡಿಗೂ ಹೆಚ್ಚುವರಿ ನೀರು ಹರಿದಿದೆ.  ನಿಗದಿತ ಕೋಟಾಗಿಂತ ಸುಮಾರು 130 ಟಿಎಂಸಿ ಹೆಚ್ಚುವರಿ ನೀರು‌ ತಮಿಳುನಾಡಿಗೆ ಬಿಡಲಾಗಿದೆ.  ಕಾವೇರಿ ವಿಚಾರದಲ್ಲಿ ಈ ಬಾರಿ ಇರಲ್ಲ ಎಂದು ತಮಿಳುನಾಡು ಕ್ಯಾತೆ ತೆಗೆದಿತ್ತು, ಮಳೆರಾಯನ ಕೃಪೆಯಿಂದ‌ ಈ‌ ವರ್ಷ ಕಾವೇರಿ ಕೊಳ್ಳ ಸಮೃದ್ಧವಾಗಿದೆ.  ಬೇಸಿಗೆ ಬೆಳೆಗೂ ಕಾವೇರಿ ನೀರು ಸಿಗುವುದು ಫಿಕ್ಸ್ ಆಗಿದೆ.  ಮತ್ತೊಂದೆಡೆ ಬೇಸಿಗೆಯಲ್ಲಿ ಬೆಂಗಳೂರಿಗೆ ಕಾವೇರಿ ನೀರಿನ ಸಮಸ್ಯೆ ಕಾಡುವುದಿಲ್ಲ.

ಇದನ್ನೂ ಓದಿ: ರೀಲ್ಸ್‌ ಮಾಡುತ್ತಿದ್ದ ಮೈಥಿಲಿ ಠಾಕೂರ್‌ 25 ವರ್ಷಕ್ಕೆ ಶಾಸಕಿ ಆಗಿದ್ದೇಗೆ…?

ಮೊದಲ ಬಾರಿಗೆ ಸಿಎಂ ಆದಾಗ 2013 ಹಾಗೂ 2014 ರಲ್ಲಿ ಬಾಗಿನ ಅರ್ಪಿಸಿದ್ದರು. ಆನಂತರ ಬರಗಾಲ ಹಿನ್ನೆಲೆ ಜಲಾಶಯ ಭರ್ತಿಯಾಗಿರಲಿಲ್ಲ. ಎರಡನೇ ಅವಧಿಗೂ ಸಿಎಂ ಆದಗಲೂ ಕೂಡ ಕನ್ನಂಬಾಡಿ ಅಣೆಕಟ್ಟು ಭರ್ತಿಯಾಗಿರಲ್ಲ. ಮತ್ತೆ ಸಿಎಂ ಆಗಿರುವಾಗಲೇ ಭರ್ತಿಯಾಗಿತ್ತು. ಹೀಗಾಗಿ ಜಿಲ್ಲಾಡಳಿತ ಎಲ್ಲ ಸಿದ್ದತೆ ಮಾಡಿಕೊಂಡಿತ್ತು. ಸಿಎಂ ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ಮೂರನೇ ಬಾರಿಗೆ ಕೆಆರ್​ಎಸ್​ಗೆ ಬಾಗಿನ ಅರ್ಪಿಸಿದ್ದಾರೆ.

ಇದನ್ನೂ ಓದಿ: ಮೂರು ಠಾಣೆಯ ಪೊಲೀಸ್‌ ಸಿಬ್ಬಂದಿಗಳ ವರ್ಗಾವಣೆ

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 123

You cannot copy content of this page