ಬ್ರೇಕಿಂಗ್ ನ್ಯೂಸ್
ಕರ್ನಾಟಕದೇಶರಾಜಕೀಯ

Maithili Thakur: ರೀಲ್ಸ್‌ ಮಾಡುತ್ತಿದ್ದ ಮೈಥಿಲಿ ಠಾಕೂರ್‌ 25 ವರ್ಷಕ್ಕೆ ಶಾಸಕಿ ಆಗಿದ್ದೇಗೆ…?

Maithili Thakur: ಬಿಹಾರದಲ್ಲಿ ಐತಿಹಾಸಿಕ ಜಯ ಕಂಡಿರುವ ಬಿಜೆಪಿ ಬಿಹಾರದ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಪಿಯುಸಿ ಪಾಸ್ ಆಗಿರುವ ಮೈಥಿಲಿ ಠಾಕೂರ್ ಈಗ ಭಾರತದ ಅತಿ ಕಿರಿಯ ಶಾಸಕಿಯಾಗಿದ್ದಾರೆ.  ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಭರ್ಜರಿ ಗೆಲುವು ಕಂಡಿದೆ.

ಶಾಸಕಿ ಮೈಥಿಲಿ ಠಾಕೂರ್ ಓದಿದ್ದೇನು..?

ಪಿಯುಸಿ ಪಾಸ್ ಆಗಿರುವ ಮೈಥಿಲಿ ಠಾಕೂರ್ ಈಗ ಭಾರತದ ಅತಿ ಕಿರಿಯ ಶಾಸಕಿಯಾಗಿದ್ದಾರೆ. ಈ ಬಾರಿ ಬಿಜೆಪಿ ಬೇರೆಲ್ಲ ರಾಜ್ಯಗಳಲ್ಲಿ ಮಾಡಿದ ರೀತಿ ಬಿಹಾರದಲ್ಲೂ ಟಿಕೆಟ್ ಘೋಷಣೆ ವೇಳೆ ಹಲವಾರು ಪ್ರಯೋಗಗಳನ್ನು ಮಾಡಿತ್ತು.  ಜಾನಪದ ಗಾಯಕಿ ಮೈಥಿಲಿ ಠಾಕೂರ್ ಎಂಬ 25 ವರ್ಷದ ಯುವತಿಯನ್ನು ಕಣಕ್ಕೆ ಇಳಿಸಲಾಗಿತ್ತು. ಇನ್ನು ಮೈಥಿಲಿ ಠಾಕೂರ್  ಈಗಾಗಲೇ  ರಿಯಾಲಿಟಿ ಶೋ ಒಂದರ ರನ್ನರ್ ಅಪ್ ಆಗಿದ್ದಾರೆ.  ಈಕೆಯ ಕಂಠಕ್ಕೆ ತಲೆದೂಗದೇ ಇರುವವರು ಯಾರೂ ಇಲ್ಲ. ಇವರ ಧ್ವನಿಗೆ
ಬಹಳ ಅಭಿಮಾನಿಗಳಿದ್ಧಾರೆ. ಆದರೆ, ಆ ಅಭಿಮಾನ ಮತವಾಗಿ ಬದಲಾಗುತ್ತಾ? ಎಂಬ ಪ್ರಶ್ನೆ ಇದ್ಧೇ ಇತ್ತು. ಇದೀಗ ಮೈಥಿಲಿ ಠಾಕೂರ್ ಚುನಾವಣಾ ಕಣಕ್ಕೆ ಇಳಿದು ಮೊದಲ ಪ್ರಯತ್ನದಲ್ಲೇ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.

ಹೀಗಾಗಿ ಭಾರತದ ಅತ್ಯಂತ ಕಿರಿಯ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದರ್ಭಂಗಾದ ಅಲಿನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಮೈಥಿಲಿ ಅವರನ್ನು ಇಳಿಸಲಾಗಿತ್ತು. ಜಾನಪದ ಗಾಯಕಿ ಮೈಥಿಲಿ ಠಾಕೂರ್ ಗೆ  ಕೇವಲ 25 ವರ್ಷ. ಈಕೆಯನ್ನು ಇದೀಗ ಮೈಥಿಲಿ  12 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಈಕೆ  2000ನೇ ಇಸವಿಯ ಜುಲೈ 25ರಂದು ಮಧುಬನಿಯಲ್ಲಿ ಜನಿಸಿದರು.  ಮೈಥಿಲಿ ಠಾಕೂರ್ ಅವರ ಕುಟುಂಬದ ತಂದೆ ಕೆಲಸ ಕಳೆದುಕೊಂಡ ಕಾರಣ  ಆರ್ಥಿಕ ಸಮಸ್ಯೆಗಳನ್ನು ಎದುರಿಸಿದ್ದರು. ನಂತರ ತಮ್ಮ ಕುಟುಂಬವನ್ನು ಪೋಷಿಸಲು ಸಂಗೀತದತ್ತ ಮುಖ ಮಾಡಿ, ಮೈಥಿಲಿಯ ಮಾರ್ಗದರ್ಶಕ ಮತ್ತು ಶಿಕ್ಷಕರೂ ಆದರು.

ಮೈಥಿಲಿ ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಮತ್ತು ಇಂಡಿಯನ್ ಐಡಲ್ ಜೂನಿಯರ್‌ನಂತಹ  ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಗಳಿಸಿದ್ದಾರೆ. ಬಳಿಕ, ತನ್ನ ಹಾಡಿನ ರೀಲ್ಸ್ ಕೂಡ ಮಾಡುತ್ತಿದ್ದರು. 2021ರಲ್ಲಿ ಮೈಥಿಲಿಗೆ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪ್ರಶಸ್ತಿ ದೊರಕಿದೆ.  ಇನ್ನು ಪ್ರಧಾನಿ ಮೋದಿ ಅವರ ಜೊತೆ ವೇದಿಕೆಯೊಂದರಲ್ಲಿ ಮಾತನಾಡಿದ್ದಾರೆ.   ಸೆಲ್ಪೀ ಕೂಡ ತೆಗೆದುಕೊಂಡಿದ್ದಾರೆ.  ಹೀಗಾಗಿ ಮೋದಿಗೆ ಈ ಹುಡುಗಿಯ ಪರಿಚಯವಿದ್ದ ಕಾರಣ, ಈಕೆಯನ್ನು ಬಿಜೆಪಿ ಕಣಕ್ಕಿಳಿ, ಈಗ ವಿಜಯ ಪತಾಕೆ ಹಾರಿಸಿದೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 174

You cannot copy content of this page