Dakshina Kannada: ಪಶ್ಚಿಮ ವಲಯದಲ್ಲಿ ಕಳೆದ ಕೆಲವು ಸಮಯಗಳಿಂದ ಕರ್ತವ್ಯದಲ್ಲಿದ್ದ ಮೂರು ಪೊಲೀಸ್ ಉಪ ನಿರೀಕ್ಷಕರನ್ನು ವರ್ಗಾವಣೆಗೊಳಿಸಿ ಮಂಗಳೂರು ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ಅಮಿತ್ ಸಿಂಗ್ ಅವರು ನ.14 ರಂದು ಆದೇಶ ಹೊರಡಿಸಿದ್ದಾರೆ.
ಬಂಟ್ವಾಳ ನಗರ ಠಾಣೆ ಪಿ.ಎಸ್.ಐ ಗುಣಪಾಲ ಜೆ (ತನಿಖೆ-1) ಅವರನ್ನು ಪುತ್ತೂರು ಗ್ರಾಮಾಂತರ ಠಾಣೆಗೆ ವರ್ಗಾವಣೆ
ಪುತ್ತೂರು ಗ್ರಾಮಾಂತರ ಠಾಣಾ ಎಸ್.ಐ ಜಂಬೂರಾಜ್ ಮಹಾಜನ್ ಅವರನ್ನು ಕಡಬ ಠಾಣೆಗೆ ವರ್ಗಾವಣೆ
ಪಶ್ಚಿಮ ವಲಯ ಕಚೇರಿಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿದ್ದ ಮಹಾಂತೇಶ್ ಜಾಬ ಗೌಡ ಅವರನ್ನು ಉಡುಪಿಯ ಕೋಟ ಠಾಣೆ (ತನಿಖೆ)ಗೆ ವರ್ಗಾವಣೆ

ಕಡಬ ಠಾಣೆಯಿಂದ ವರ್ಗಾವಣೆಗೊಂಡಿರುವ ಅಭಿನಂದನ್ ಎಂ.ಎಸ್ ಅವರಿಗೆ ಯಾವುದೇ ಸ್ಥಳವನ್ನು ಸೂಚಿಸಿಲ್ಲ. ಅಂತೆಯೇ ಕೋಟ ಠಾಣೆಯ ಶ್ರೀಮತಿ ಸುಧಾ ಪ್ರಭು ಅವರಿಗೆ ಯಾವುದೇ ವರ್ಗಾವಣೆ ಸ್ಥಳ ಸೂಚಿಸಿಲ್ಲ.
ಈ ಬದಲಾವಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಾರ್ವಜನಿಕ ಹಿತದೃಷ್ಟಿ ಮತ್ತು ಆಡಳಿತಾತ್ಮಕ ಕಾರಣಗಳಿಗಾಗಿ ಮುಂದಿನ ಆದೇಶದವರೆಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.
ಇದನ್ನೂ ಓದಿ: BC Road: ಸರ್ಕಲ್‌ಗೆ ಕಾರು ಢಿಕ್ಕಿ – ಇಬ್ಬರು ಮೃತ್ಯು
==================
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ : https://www.youtube.com/@tulutimess











