Food : ಸಿಹಿ ಗೆಣಸು ಚಳಿಗಾಲದಲ್ಲಿ ದೇಹಕ್ಕೆ ಉಷ್ಣತೆ ನೀಡುತ್ತದೆ ಹಾಗೂ ಹೊಟ್ಟೆಗೆ ತುಂಬಾ ಹೊತ್ತು ತೃಪ್ತಿ ನೀಡುತ್ತದೆ. ಇದರಲ್ಲಿ ವಿಟಮಿನ್ A, C ಬಹಳವಾಗಿದ್ದು, ಜೀರ್ಣಕ್ಕೆ ಸಹಾಯಕ. ಇದು ಡಯಾಬಿಟಿಕ್‌ಗಳಿಗೆ ಮಿತವಾಗಿ ತಿಂದರೆ ಒಳ್ಳೆಯದು.
ಸಿಹಿ ಗೆಣಸಿನ ಕಟ್ಲೇಟ್ ಮಾಡುವ ವಿಧಾನ ;
ಬೇಕಾಗುವ ಸಾಮಾಗ್ರಿ ;
ಸಿಹಿಗೆಣಸು – 2 ದೊಡ್ಡದು
ಈರುಳ್ಳಿ – 1 (ಸಣ್ಣದು, ಸಣ್ಣವಾಗಿ ಚೂರು)
ಹಸಿಮೆಣಸು – 2
ಶುಂಠಿ – ½ tsp
ಕೊತ್ತಂಬರಿ ಸೊಪ್ಪು – 2 tbsp
ಜೀರಿಗೆ – ½ tsp
ಮೆಣಸಿನಪುಡಿ – ½ tsp
ಗರಂ ಮಸಾಲಾ – ½ tsp (ಐಚ್ಛಿಕ)
ಬ್ರೆಡ್‌ಕ್ರಂಬ್ಸ್ – ½–1 ಕಪ್
ಉಪ್ಪು – ರುಚಿಗೆ ತಕ್ಕಂತೆ
ನಿಂಬೆರಸ – ½ tsp
ಎಣ್ಣೆ
ಮಾಡುವ ವಿಧಾನ : ಬೇಯಿಸಿದ ಸಿಹಿ ಗೆಣಸಿನ ಸಿಪ್ಪೆ ತೆಗೆದು, ಚೆನ್ನಾಗಿ ಕಿವುಚಿದ ಗೆಣಸಿಗೆ ಈರುಳ್ಳಿ, ಹಸಿಮೆಣಸು, ಶುಂಠಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಮೆಣಸಿನಪುಡಿ, ಗರಂ ಮಸಾಲಾ, ಉಪ್ಪು, ನಿಂಬೆರಸ, 2–3 tbsp, ಬ್ರೆಡ್‌ಕ್ರಂಬ್ಸ್ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಹದ ಮಾಡಿಕೊಳ್ಳಿ. ಹದ ತಿಕ್ಕಾಗಿದ್ದರೆ ಇನ್ನಷ್ಟು ಬ್ರೆಡ್‌ಕ್ರಂಬ್ಸ್ ಸೇರಿಸಬಹುದು. ನಂತರ ಅದಕ್ಕೆ ಕಟ್ಲೆಟ್ ರೂಪ ಕೊಟ್ಟು, ಒಂದು ತವಾದಲ್ಲಿ ಕಡಿಮೆ ಉರಿಯಲ್ಲಿ, ಕಡಿಮೆ ಎಣ್ಣೆಯಲ್ಲಿ ನಿಧಾನಕ್ಕೆ ಒಂದೊಂದೇ ಆಕಾರವನ್ನು ಎರಡೂ ಬದಿ ಕ್ರಿಸ್ಪಿ ಆಗುವ ಹಾಗೆ ಕಾಯಿಸಿಕೊಳ್ಳಬೇಕು. ಇದನ್ನು ಟೊಮ್ಯಾಟೊ ಕೆಚಪ್ ನೊಂದಿಗೂ ತಿನ್ನಬಹುದು (ಅತಿಯಾಗಿ ಕೆಚಪ್ ಸೇವನೆ ಒಳ್ಳೆಯದಲ್ಲ).
ಇದನ್ನೂ ಓದಿ :Bangalore : ಹೇಳೋದಿಕ್ಕೆ ಸರ್ಕಾರಿ ಹಾಸ್ಟೆಲ್ ಆದ್ರೆ ಮಕ್ಕಳಿಗೆ ನೀಡೋದು ಕಳಪೆ ವ್ಯವಸ್ಥೆ…!
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/QFVPc6vbTkc?si=ZwhPG1ZjmTJnAsCx


