Bangalore : ಹೇಳೋದಿಕ್ಕೆ ಮಾತ್ರ ಸರಕಾರಿ ವ್ಯವಸ್ಥೆ ಹೊಂದಿರುವ ಎಲ್ಲಾ ವ್ಯವಸ್ಥೆಗಳಿರುವ ಹಾಸ್ಟೆಲ್ ಗಳು. ಆದರೆ, ಮಕ್ಕಳಿಗೆ ಮಾತ್ರ ಸಿಗೋದು ಅದೇ ಕಳಪೆ ವ್ಯವಸ್ಥೆ. ಉಚಿತವಾಗಿ ಸಿಗೋದನ್ನ ಯಾಕಿಲ್ಲಿ ಮಕ್ಕಳಿಗೆ ಕೊಡೋದಿಕ್ಕೆ ವ್ಯವಸ್ಥೆಗಳು ಹಿಂದೇಟು ಹಾಕುತ್ತವೆಯೋ ಗೊತ್ತಿಲ್ಲ. ಮಾಧ್ಯಮಗಳಿಗೆ ತಿಳಿಯುವ ಒಂದೆರಡು ಇಂತಹಾ ಕೇಸ್ ಗಳು ಒಂದೆಡೆಯಾದ್ರೆ, ತೆರೆಯ ಹಿಂದೆ ಅನ್ಯಾಯ ನಡೆಸುತ್ತಿರುವ ಅದೆಷ್ಟೋ ಹಾಸ್ಟೆಲ್ ಗಳ ಪಾಡು ಅಲ್ಲಿ ವಾಸಿಸುವ ಮುಗ್ಧ ಮಕ್ಕಳಿಗೆ ಮಾತ್ರ ಗೊತ್ತು. ಹೌದು…! ಬೆಂಗಳೂರು ನಗರದ ಎಂಜಿ ರಸ್ತೆಯಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜು ಬಾಲಕರ ಹಾಸ್ಟೆಲ್ಗೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು ಅನಿರೀಕ್ಷಿತ ಭೇಟಿ ನೀಡಿದರು. ಈ ವೇಳೆ ವಿದ್ಯಾರ್ಥಿಗಳ ಶೋಚನೀಯ ಸ್ಥಿತಿ ಲೋಕಾಯುಕ್ತರ ಗಮನಕ್ಕೆ ಬಂದಿತು. ಸರ್ಕಾರ ಪ್ರತೀ ಕೋಣೆಗೆ 4 ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ್ದರೂ, ಹಾಸ್ಟೆಲ್ ನಲ್ಲಿ 6-7 ವಿದ್ಯಾರ್ಥಿಗಳಿಗೆ ಅವಕಾಶ.. ಹೀಗಾಗಿ ನಾಲ್ಕು ವಿದ್ಯಾರ್ಥಿಗಳು ಮಂಚಗಳ ಮೇಲೆ ಮಲಗುತ್ತಿದ್ದರೆ, ಉಳಿವರು ನೆಲದಲ್ಲಿ ಮಲಗುತ್ತಿರುವುದು ಕಂಡು ಬಂದಿದೆ.
ಇಲ್ಲಿ ಪ್ರತೀ ತಿಂಗಳು ಸಮಾಜ ಕಲ್ಯಾಣ ಇಲಾಖೆಯಿಂದ 25,000 ರೂ. ಮಂಜೂರು ಮಾಡಲಾಗುತ್ತಿದೆ, ಆದರೂ ಹಾಸ್ಟೆಲ್ ಅನ್ನು ಕ್ರಮಬದ್ಧವಾಗಿ ಇಡಲಾಗಿಲ್ಲ. 373 ವಿದ್ಯಾರ್ಥಿಗಳಿಗೆ ಕೇವಲ 38 ಶೌಚಾಲಯಗಳಿದ್ದು, ಅವು ಅನೈರ್ಮಲ್ಯದಿಂದ ಕೂಡಿವೆ ಎಂಬುದನ್ನು ಉಪ ಲೋಕಾಯುಕ್ತರು ಗಮನಿಸಿದರು. ಪರಿಶೀಲನೆ ವೇಳೆ ಲೋಕಾಯುಕ್ತರು, ವಿದ್ಯಾರ್ಥಿಗಳು ಕಿಕ್ಕಿರಿದು ತುಂಬಿರುವುದು ಕಂಡುಬಂದಿದ್ದು, ತಕ್ಷಣವೇ ಎಲ್ಲಾ ವಿದ್ಯಾರ್ಥಿಗಳನ್ನು ಕರೆಸಿ ಮಾಹಿತಿ ಪಡೆದು ಕೊಂಡಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ತಮಗೆ ನೀಡುವ ಬೆಳೆಗಿನ ಉಪಾಹಾರವು ಗುಣಮಟ್ಟದಿಂದ ಕೂಡಿರುವುದಿಲ್ಲ. ಮಧ್ಯಾಹ್ನ ಮತ್ತು ರಾತ್ರಿ ನೀಡುವ ಅನ್ನ ಬೆಂದಿರುವುದಿಲ್ಲ ಹಾಗೂ ಸಾರಿನಲ್ಲಿ ತರಕಾರಿಯಾಗಲೀ, ಬೇಳೆಯಾಗಲೀ ಇರುವುದಿಲ್ಲ ಎಂದು ದೂರಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ, ವರದಿ ನೀಡಿ ಎಂದು ಲೋಕಾಯುಕ್ತರು, ಪೊಲೀಸರಿಗೆ ಸೂಚಿಸಿದರು.
ಇದನ್ನೂ ಓದಿ :Agriculture : ಬಾಳೆಕೃಷಿಗೂ ಪೆಟ್ಟಾಯಿತು ಕುಸಿದ ಬಾಳೆ ದರ…!
……….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/QFVPc6vbTkc?si=ZwhPG1ZjmTJnAsCx











