ಬ್ರೇಕಿಂಗ್ ನ್ಯೂಸ್
ಮಂಗಳೂರು

Mangalore : ತೆರಿಗೆ ಕಟ್ಟದೇ ಸಾರ್ವಜನಿಕರಿಂದ ಆಕ್ಷೇಪ : ಇದು ನಮ್ಮ ವಿಶ್ವವಿದ್ಯಾನಿಲಯದ ಕಥೆ…!

Mangalore : ಮಂಗಳೂರು ವಿಶ್ವವಿದ್ಯಾನಿಲಯ ಕರ್ನಾಟಕದ ಪ್ರಮುಖ ರಾಜ್ಯ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದ್ದು, ಇದು 1979 ರಲ್ಲಿ ಸ್ಥಾಪನೆಯಾಗಿರುತ್ತದೆ. ಉನ್ನತ ಶಿಕ್ಷಣವನ್ನು ನೀಡುವ ನೆಲೆಯಲ್ಲಿ ಇದು ಅಭಿವೃದ್ಧಿಯಾಗುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪದಂತಿದೆ. ಮಂಗಳೂರು ನಗರದಿಂದ ಸುಮಾರು 20 ಕಿ.ಮೀ ದೂರದ ಕೋಣಾಜೆ ಪ್ರದೇಶದಲ್ಲಿ ಮುಖ್ಯ ಕ್ಯಾಂಪಸ್ ಹಾಗೂ ಇದು ಪ್ರಕೃತಿ ಸೌಂದರ್ಯದಿಂದ ಕೂಡಿದ ದೊಡ್ಡ ಕ್ಯಾಂಪಸ್ . ಎಕರೆಗಟ್ಟಲೆ ವಿಸ್ತೀರ್ಣವುಳ್ಳ ಕ್ಯಾಂಪಸ್ ನಲ್ಲಿ ಅನೇಕ ಸರ್ಕಾರಿ / ಖಾಸಗೀ ಕಾಲೇಜುಗಳು ಈ ವಿಶ್ವವಿದ್ಯಾಲಯದ ಅಂಗಸಂಸ್ಥೆಗಳಾಗಿವೆ.

ತೆರಿಗೆ ಕಟ್ಟಲು ಕಾಸಿಲ್ಲದ ಪರಿಸ್ಥಿತಿ ;

ಆದರೆ ಈ ಸಂಸ್ಥೆ ಶೈಕ್ಷಣಿಕವಾಗಿ ಮುಂದಿದ್ದರೂ, ಆರ್ಥಿಕವಾಗಿ ಕುಗ್ಗಿ ಹೋಗಿರುತ್ತದೆ. ವಿವಿ ಎಷ್ಟೊಂದು ಮಟ್ಟಿಗೆ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದೆ ಅಂದರೆ ಸ್ಥಳೀಯ ಪಂಚಾಯತ್ ತೆರಿಗೆ ಕಟ್ಟಲು ಕಾಸಿಲ್ಲದ ಪರಿಸ್ಥಿತಿಯಿದೆ. ಹೀಗಾಗಿ ಸುಮಾರು 70 ಲಕ್ಷ ತೆರಿಗೆ ಬಾಕಿ ಇಟ್ಟುಕೊಂಡು, ಛೀಮಾರಿ ಹಾಕಿಕೊಳ್ಳುವ ಪರಿಸ್ಥಿತಿ ಮಂಗಳೂರು ವಿವಿಯದಾಗಿದೆ. ಸ್ಥಳೀಯ ಸಂಸ್ಥೆಯ ತೆರಿಗೆಯನ್ನು ಕಟ್ಟುವುದು ಅವುಗಳ ಕರ್ತವ್ಯ. ಆದರೆ ಮಂಗಳೂರಿನ ಕೊಣಾಜೆ ಗ್ರಾಪಂ ವ್ಯಾಪ್ತಿಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯ ಕಳೆದ ಹಲವು ವರ್ಷಗಳಿಂದ ಗ್ರಾಮಪಂಚಾಯತ್‍ಗೆ ತೆರಿಗೆ ಕಟ್ಟದೆ 70 ಲಕ್ಷ ಬಾಕಿ ಇರಿಸಿದೆ.

ಗ್ರಾಮಪಂಚಾಯತ್‍ನ ಆಕ್ರೋಶಕ್ಕೆ ಕಾರಣವಾಗಿದೆ ;

2022-23 ನೇ ಸಾಲಿನಲ್ಲಿ ಬಾಕಿ ಇಟ್ಟಿರುವ ಲಕ್ಷಗಟ್ಟಲೆ ಸಾಲಗಳ ಜೊತೆಗೆ 2024-25ನೇ ಸಾಲಿನಲ್ಲಿ 22,62,870 ಲಕ್ಷ, 2025-26ನೇ ಸಾಲಿನಲ್ಲಿ 23,53,363 ಲಕ್ಷ ಬಾಕಿಯಿದೆ. ಪಂಚಾಯತ್‍ನಿಂದ ಎರಡು ಬಾರಿ ನೋಟೀಸ್ ನೀಡಿ, ಅಧಿಕಾರಿಗಳು ಖುದ್ದು ಚರ್ಚೆ ನಡೆಸಿದ್ದಾರೆ. ಆದ್ರೂ ತೆರಿಗೆ ಕಟ್ಟುತ್ತಿಲ್ಲ ಎಂದು ವರದಿಯಾಗಿದೆ. ಗ್ರಾಮಸಭೆಯಲ್ಲಿಯೂ ಸಾರ್ವಜನಿಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಂಗಳೂರು ವಿವಿ ತನ್ನ ಕಟ್ಟಡದಲ್ಲಿ ಕಮರ್ಷಿಯಲ್‍ಗೆ ಬಾಡಿಗೆ ನೀಡಿದ್ದು, ಇದರಿಂದ ಆದಾಯವನ್ನು ಪಡೆಯುತ್ತಿದೆ. ಆದರೆ ತೆರಿಗೆ ಕಟ್ಟಲು ಮಾತ್ರ ನಿರಾಕರಿಸುತ್ತಿದೆ. ಇದು ಗ್ರಾಮಪಂಚಾಯತ್‍ನ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ :2026 Holiday’s : 2026 ರ ರಜಾ ದಿನಗಳ ವೇಳಾಪಟ್ಟಿ ಇಲ್ಲಿವೆ ನೋಡಿ….!

………

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/QFVPc6vbTkc?si=ZwhPG1ZjmTJnAsCx

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 15

You cannot copy content of this page