Karkala : ಗ್ಯಾರೇಜ್ ನಲ್ಲಿ ಕೆಲಸ ಮಾಡುವ ಹುಡುಗರು ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಪ್ರತೀ ಕ್ಷಣ ಗಮನವಿಟ್ಟು ಕೆಲಸ ಮಾಡಬೇಕಾಗುತ್ತದೆ. ಆದರೆ, ಇಲ್ಲೊಬ್ಬ ಯುವಕ ಜೆಸಿಬಿ ರಿಪೇರಿ ಮಾಡುತ್ತಿದ್ದ ಸಂದರ್ಭ ಅದರ ಇಂಜಿನ್ ಹಾಗೂ ಬಕೆಟ್ ನಡುವೆ ಸಿಲುಕಿ ಮೃತಪಟ್ಟಿರುವ ಘಟನೆ ನಡೆದಿದೆ.
ದಿನಾಂಕ 13ರಂದು ಮಧ್ಯಾಹ್ನ 3.15 ಗಂಟೆ ಸುಮಾರಿಗೆ ಚಿಂಟು ಚೌಹಾಣ (26) ಇವರು ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಇಂಡಸ್ಟ್ರೀಯಾ ಏರಿಯಾದಲ್ಲಿ ಇರುವ ವಿಶ್ವಾಸ್ ಗ್ಯಾರೇಜ್‌ನಲ್ಲಿ KA-08-M-5750 ನೇ ನಂಬ್ರದ ಜೆಸಿಬಿ ವಾಹನವನ್ನು ರಿಪೇರಿ ಮಾಡುತ್ತಿರುವಾಗ ಗ್ಯಾರೇಜ್ ಮಾಲೀಕರಾದ ಲವೀನಾ ಪ್ರಮೀಳಾ ಡಿ’ಮೆಲ್ಲೊ ಇವರು ಯಾವುದೇ ಮುಂಜಾಗ್ರತೆ ಕ್ರಮ ವಹಿಸದೇ ಕೆಲಸ ಮಾಡಿಸುತ್ತಿದ್ದು, ಈ ಸಮಯ KA-08-M-5750 ನೇ ನಂಬ್ರದ JCB ಆಪರೇಟರ್ ಸಾಗರ್ ಈತನು ಜೆಸಿಬಿಯ ಮುಂದಿನ ಬಕೆಟ್‌ನ್ನು ಎತ್ತಿಹಿಡಿದದನ್ನು ಒಮ್ಮೆಲೇ ನಿರ್ಲಕ್ಷತನದಿಂದ ಕೆಳಗೆ ಇಳಿಸಿದ ಪರಿಣಾಮ JCB ರಿಪೇರಿ ಕೆಲಸ ಮಾಡುತ್ತಿದ್ದ ಚಿಂಟು ಚೌಹಾಣ JCBಯ ಮುಂದಿನ ಬಕೆಟ್ ಹಾಗೂ ಇಂಜಿನ್ ನಡುವೆ ಸಿಲುಕಿ ಗಂಭೀರ ಗಾಯಗೊಂಡಿರುತ್ತಾನೆ.
ನಂತರ ಕ್ರೇನ್ ಮೂಲಕ ಬೇರ್ಪಡಿಸಿ ಚಿಕಿತ್ಸೆಗಾಗಿ ಕಾರ್ಕಳದ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅಲ್ಲಿ ಆತನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತಗೊಳಿಸುತ್ತಾರೆ. ಈ ಬಗ್ಗೆ ಕಾರ್ಕಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :Belthangady: SIT ವಿರುದ್ಧವೇ ದೂರು ನೀಡಿದ ಜಯಂತ್ – ದೂರಿನಲ್ಲೇನಿದೆ?
…………
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/QFVPc6vbTkc?si=ZwhPG1ZjmTJnAsCx











