Agriculture : ಬಾಳೆ ಕೃಷಿ ಕರ್ನಾಟಕ ಸೇರಿದಂತೆ ಭಾರತದೆಲ್ಲೆಡೆ ವ್ಯಾಪಕವಾಗಿ ನಡೆಯುವ ಲಾಭದಾಯಕ ಹಣ್ಣಾಗಿವೆ. ಪೂಜೆ, ಸಮಾರಂಭ, ಸನ್ಮಾನ ಏನೇ ಇರಲಿ, ಅಲ್ಲಿ ಬಾಳೆಹಣ್ಣು ಬೇಕೇ ಬೇಕು. ದೇವಾಲಯಗಳಲ್ಲಂತೂ ಬಾಳೆಹಣ್ಣನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಆದರೆ, ಬಾಳೆಕೃಷಿ ಮಾಡುತ್ತಿರುವ ರೈತರಿಗೆ ಕುಸಿದ ಬಾಳೆ ದರ ಭಾರೀ ನೋವನ್ನುಂಟುಮಾಡಿದೆ. ಹೌದು…! ಜಿಲ್ಲೆಗಳಲ್ಲಿ ಪಚ್ಚ ಬಾಳೆ ಬೆಲೆ ಪಾತಾಳಕ್ಕೆ ಕುಸಿದಿದ್ದು, ರೈತರು ಆತಂಕಕ್ಕೊಳಗಾಗಿದ್ದಾರೆ.
ಇತ್ತೀಚಿನ ವಾರಗಳಲ್ಲಿ ಮಾರುಕಟ್ಟೆಯಲ್ಲಿ ಪಚ್ಚ ಬಾಳೆಗೆ ಬೇಡಿಕೆ ತೀವ್ರವಾಗಿ ಕಡಿಮೆಯಾಗಿರುವುದರಿಂದ ವ್ಯಾಪಾರಿಗಳು ಖರೀದಿಯನ್ನು ಇಳಿಸಿದ್ದಾರೆ. ಪ್ರಸ್ತುತ ಪಚ್ಚ ಬಾಳೆಗೆ ಕೇವಲ ಕೆಜಿಗೆ 6 ರೂ. ದರ ಸಿಗುತ್ತಿದ್ದು, ಕಳೆದ ತಿಂಗಳು ನೀಡುತ್ತಿದ್ದ ರೂ.12–ರೂ.15 ದರದ ಹೋಲಿಕೆಯಲ್ಲಿ ಇದು ಅರ್ಧಕ್ಕಿಂತಲೂ ಕಡಿಮೆಯಾಗಿದೆ. ಮೈಸೂರು, ಚಾಮರಾಜನಗರ ಈ ಉಭಯ ಜಿಲ್ಲೆಗಳೂ ಕೂಡ ಬಾಳೆ ಕೃಷಿಗೆ ಹೆಸರುವಾಸಿ. ನಂಜನಗೂಡು ಅದರಲ್ಲಿ ಒಂದು ಹೆಜ್ಜೆ ಹೆಚ್ಚೆಂದೇ ಹೇಳಬಹುದು. ಆದರೆ ಈ ಬಾರಿ ರೈತರ ಲೆಕ್ಕಾಚಾರ ಉಲ್ಟಾ ಹೊಡೆದಿದ್ದು, ಬಾಳೆಯ ಬೆಳೆ ಕುಸಿದಿದೆ ಕಾರಣ ರೈತ ಆತಂಕದಲ್ಲಿದ್ದಾನೆ.
ಕೇವಲ ಬಾಳೆಹಣ್ಣು ಸಾಗಿಸುವ ಸಾರಿಗೆ ಮತ್ತು ಕಟಾವು ವೆಚ್ಚಕ್ಕೂ ಹಣ ಸಿಗುತ್ತಿಲ್ಲ. ಬೆಲೆ ಏರದಿದ್ದರೆ ಮುಂದಿನ ಹಂಗಾಮಿಗೆ ಬೆಳೆ ಬೆಳೆಸುವುದೇ ಕಷ್ಟ, ಎಂದು ಬಾಳೆ ಬೆಳೆಗಾರ ರೈತರು ಆಕ್ರೋಶ ವ್ಯಕ್ತಪಡಿಸಿದರು. ಚಾಮರಾಜನಗರದ ಕೃಷಿ ಅಧಿಕಾರಿಗಳು ಮಾತನಾಡಿ, ಬಾಳೆ ಬೆಲೆ ಇಳಿಕೆಗೆ ಪ್ರಮುಖ ಕಾರಣವಾಗಿ ಹವಾಮಾನ ಅನಿಶ್ಚಿತತೆ, ಅತಿಯಾದ ಉತ್ಪಾದನೆ ಹಾಗೂ ಹತ್ತಿರದ ರಾಜ್ಯಗಳಿಂದಲೂ ಪೂರೈಕೆ ಹೆಚ್ಚಾದುದನ್ನು ಹೇಳಿದರು.
ಇದನ್ನೂ ಓದಿ :Saalumarada Timmakka : ಮಕ್ಕಳಿಲ್ಲದ ಸಾಲು ಮರದ ತಿಮ್ಮಕ್ಕರಿಗೆ ಆಲದ ಸಸಿಗಳೇ ಮಕ್ಕಳು
……..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/X4fDzCnlyPE?si=njrx3Asr1H6-vHmo











