2026 Holiday’s : ಕ್ಯಾಲೆಂಡರ್ನಲ್ಲಿ ರಜೆಗಳು ನೀಡುವ ಮುಖ್ಯ ಕಾರಣಗಳು ಸಾಮಾನ್ಯವಾಗಿ ಸಾಂಸ್ಕೃತಿಕ, ಸಾಮಾಜಿಕ, ಆರೋಗ್ಯ ಮತ್ತು ಆಡಳಿತಕ್ಕೆ ಸಂಬಂಧಿಸಿದವು. ಸರಳವಾಗಿ ಹೇಳುವುದಾದರೆ ರಜೆಗಳು ಜನರಿಗೆ ವಿಶ್ರಾಂತಿ, ಆಚರಣೆ ಮತ್ತು ಸಮತೋಲನ ಕೊಡಲು ಇರುತ್ತವೆ. ಇನ್ನೇನು 2025 ರ ಅವಧಿ ಮುಗಿಯಲಿದ್ದು, ಮುಂಬರುವ 2026 ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಕರ್ನಾಟಕ ಸರಕಾರವು ಪ್ರಕಟಿಸಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳಂದು ಇರುವ ಸರ್ಕಾರಿ ರಜೆಯನ್ನು ಈ ಪಟ್ಟಿಯಲ್ಲಿ ಸೇರಿಸಿಲ್ಲ. ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ರಜೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಗಣರಾಜ್ಯೋತ್ಸವ, ಯುಗಾದಿ ಹಬ್ಬ, ಮೊಹರಂ ಕಡೆ ದಿನ ಮತ್ತು ಮಹಾಲಯ ಅಮವಾಸ್ಯೆ ಹಾಗೂ ಎರಡನೇ ಶನಿವಾರದಂದು ಬರುವ ಕನಕದಾಸ ಜಯಂತಿಯನ್ನು ನಮೂದಿಸಿರುವುದಿಲ್ಲ.
2026 ಶುರು ಆದ ಕೂಡಲೇ ಎಲ್ಲರೂ ಕ್ಯಾಲೆಂಡರ್ ಗೋಸ್ಕರ ಕಾದು, ಅದರಲ್ಲಿನ ರಜಾದಿನಗಳನ್ನೊಮ್ಮೆ ನೋಡುವುದು ವಾಡಿಕೆ. 2026 ರಲ್ಲಿ ಬರುವ ಭಾನುವಾರದಂದು ಬರುವ ಹಬ್ಬಗಳು ಮಹಾ ಶಿವರಾತ್ರಿ (15.02.2026), ಮಹರ್ಷಿ ವಾಲ್ಮೀಕಿ ಜಯಂತಿ (25.10.2026), ಕನ್ನಡ ರಾಜ್ಯೋತ್ಸವ (01.11.2026) ಹಾಗೂ ನರಕ ಚತುರ್ದಶಿ (08.11.2026) ಮತ್ತು ಎರಡನೇ ಶನಿವಾರದಂದು ಬರುವ ಮಹಾಲಯ ಅಮವಾಸ್ಯೆ (10.10.2026) ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.
ಸಾರ್ವತ್ರಿಕ ರಜಾ ದಿನಗಳು ;
15.01.2026, ಗುರುವಾರ. ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
26.01.2026 , ಸೋಮವಾರ. ಗಣರಾಜ್ಯೋತ್ಸವ
19.03.2026, ಗುರುವಾರ. ಯುಗಾದಿ ಹಬ್ಬ
21.03.2026, ಶನಿವಾರ. ಖುತುಬ್-ಎ-ರಂಜಾನ್
31.03.2026, ಮಂಗಳವಾರ. ಮಹಾವೀರ ಜಯಂತಿ
03.04.2026, ಶುಕ್ರವಾರ. ಗುಡ್ ಪ್ರೈಡ್
14.04.2026, ಮಂಗಳವಾರ. ಡಾ|| ಬಿ. ಆರ್. ಅಂಬೇಡ್ಕರ್ ಜಯಂತಿ
20.04.2026, ಸೋಮವಾರ. ಬಸವ ಜಯಂತಿ, ಅಕ್ಷಯ ತೃತೀಯ
01.05.2026, ಶುಕ್ರವಾರ. ಕಾರ್ಮಿಕ ದಿನಾಚರಣೆ
28.05.2026, ಗುರುವಾರ, ಬಕ್ರೀದ್
26.06.2026, ಶುಕ್ರವಾರ. ಮೊಹರಂ ಕಡೆ ದಿನ
15.08.2026, ಶನಿವಾರ. ಸ್ವಾತಂತ್ರ್ಯ ದಿನಾಚರಣೆ
26.08.2026, ಬುಧವಾರ. ಈದ್-ಮಿಲಾದ್
14.09.2026, ಸೋಮವಾರ. ವರಸಿದ್ಧಿ ವಿನಾಯಕ ವ್ರತ
02.10.2026, ಶುಕ್ರವಾರ. ಗಾಂಧಿ ಜಯಂತಿ
20.10.2026, ಮಂಗಳವಾರ. ಮಹಾನವಮಿ, ಆಯುಧಪೂಜೆ
21.10.2026, ಬುಧವಾರ. ವಿಜಯದಶಮಿ
10.11.2026, ಮಂಗಳವಾರ. ಬಲಿಪಾಡ್ಯಮಿ, ದೀಪಾವಳಿ
27.11.2026, ಶುಕ್ರವಾರ. ಕನಕದಾಸ ಜಯಂತಿ
25.12.2026, ಶುಕ್ರವಾರ. ಕ್ರಿಸ್ ಮಸ್
ಇದನ್ನೂ ಓದಿ :Saalumarada Thimmakka: ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ (114) ಇನ್ನಿಲ್ಲ..!
………..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/X4fDzCnlyPE?si=njrx3Asr1H6-vHmo











