ಬ್ರೇಕಿಂಗ್ ನ್ಯೂಸ್
ಕರ್ನಾಟಕ

Saalumarada Timmakka : ಮಕ್ಕಳಿಲ್ಲದ ಸಾಲು ಮರದ ತಿಮ್ಮಕ್ಕರಿಗೆ ಆಲದ ಸಸಿಗಳೇ ಮಕ್ಕಳು

Saalumarada Timmakka : ವಿಶ್ವದ ಹಲವಾರು ಪರಿಸರ ವೇದಿಕೆಗಳಲ್ಲಿ ಗೌರವಿತರಾದರು, ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಇನ್ನಿಲ್ಲ ಎಂದು ಈಗಾಗಲೇ ವರದಿಯಾಗಿದ್ದು, ಇವರು ಕರ್ನಾಟಕದ ಪ್ರಸಿದ್ಧ ಪರಿಸರ ಹೋರಾಟಗಾರ್ತಿ ಮತ್ತು ಪ್ರಕೃತಿ ಪ್ರೇಮಿ. ಅವರು ಸಾಲು ಸಾಲು ಆಲದ ಮರಗಳ ಕಾರಣಕ್ಕೆ “ಸಾಲುಮರದ ತಿಮ್ಮಕ್ಕ” ಹೆಸರಿನಿಂದ ಪ್ರಸಿದ್ಧರಾದರು. ತಮ್ಮ ಪತಿ ಚಿಕ್ಕಯ್ಯ ಅವರ ಜೊತೆಗೆ 4 ಕಿ.ಮೀ. ರಸ್ತೆ ಬದಿಯಲ್ಲಿ ಸುಮಾರು 385 ಅಲದ ಮರಗಳನ್ನು ನೆಟ್ಟು ಬೆಳೆಸಿದರು. ನೀರು ಇಲ್ಲದ ಸಮಯದಲ್ಲಿ ಹತ್ತಾರು ಬಾರಿ ಮಡಿಕೆಗಳಲ್ಲಿ ನೀರು ಹೊತ್ತು ಹೋಗಿ ಮರಗಳಿಗೆ ಹಾಕುತ್ತಿದ್ದರು. ಜೊತೆಗೆ ಜನರಲ್ಲಿ ಅರಿವು ಮೂಡಿಸಲು, ಮರಗಳ ಮಹತ್ವವನ್ನು ವಿವರಿಸುತ್ತಾ ಗ್ರಾಮಗಳಿಂದ ಗ್ರಾಮಕ್ಕೆ ಹೋಗಿ ಪರಿಸರ, ಗಿಡ ಮರಗಳ ಬಗ್ಗೆ ವಿಶೇಷ ಅಭಿಮಾನ ಹೊಂದಿದವರು. ಅಲ್ಲದೇ, 2019 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡವರು ಸಾಲು ಮರದ ತಿಮ್ಮಕ್ಕ.

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ 1911ರ ಜೂನ್ 30ರಂದು ಜನಿಸಿದ್ದ ಸಾಲುಮರದ ತಿಮ್ಮಕ್ಕ, ಹುಲಿಕಲ್​​ ಗ್ರಾಮದ ಚಿಕ್ಕಯ್ಯರನ್ನು ವಿವಾಹವಾಗಿದ್ದರು. ಆದರೆ ದುರದೃಷ್ಟವಶಾತ್, ಇವರಿಗೆ ಮಕ್ಕಳಿರಲಿಲ್ಲ. ಹೀಗಾಗಿ ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ತಿಮ್ಮಕ್ಕ, ಇವರಿಗೆ ಜಯನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೆ ಅವರು ಇಂದು ಮೃತಟಪಟ್ಟಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ತಮ್ಮ 114 ವರ್ಷದಲ್ಲಿ ಮಧ್ಯಾಹ್ನ 12 ಗಂಟೆಗೆ ನಿಧನ ಹೊಂದಿದ್ದಾರೆ ಎಂದು ವರದಿಯಾಗಿದೆ. ಇವರು ಪ್ರತೀ ಸಲ ಮಾತನಾಡುವಾಗ ಮನುಷ್ಯ ಬದುಕಲು ಮರಗಳು ಬೇಕು. ಒಂದು ಮರ ನೆಟ್ಟರೆ ಅದು ನೂರಾರು ಜೀವಿಗಳಿಗೆ ಆಶ್ರಯವಾಗುತ್ತದೆ ಎಂದು ಹೇಳುತ್ತಿದ್ದರು.

ಇದನ್ನೂ ಓದಿ :Saalumarada Thimmakka: ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ (114) ಇನ್ನಿಲ್ಲ..!

……..

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/X4fDzCnlyPE?si=njrx3Asr1H6-vHmo

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page