ಬ್ರೇಕಿಂಗ್ ನ್ಯೂಸ್
ಕರ್ನಾಟಕ

Bengaluru: ಸದ್ದಿಲ್ಲದೇ ಎಂಗೇಜ್‌ಮೆಂಟ್ ಮಾಡಿಕೊಂಡ ಲಕುಮಿ ಸೀರಿಯಲ್‌ ನಟಿ!

Bengaluru: ಇತ್ತೀಚೆಗೆ ಕನ್ನಡದ ಸೀರಿಯಲ್‌ ನಟಿಯರು ಮದುವೆಯ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರೋದು ಹೆಚ್ಚಾಗಿ ಕೇಳಿ ಬರುತ್ತಿದೆ. ಅದೇ ಸಾಲಿನಲ್ಲಿ ಈಗ ಲಕುಮಿ ಸೀರಿಯಲ್‌ ಮೂಲಕ ಮನೆ ಮಗಳಾಗಿದ್ದ ನಟಿ ಸುಷ್ಮಾ ಶೇಖರ್  ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳ ಹುಬ್ಬೇರಿಸಿದ್ದಾರೆ.

ಇದನ್ನೂ ಓದಿ: ಕೆಂಪು ಗುಲಾಬಿಯಂತಹ ತುಟಿ ನಿಮ್ಮದಾಗಲು ಸಿಂಪಲ್ ಟಿಪ್ಸ್ ಇಲ್ಲಿದೆ ನೋಡಿ..!

ತನ್ನ ಸೀರಿಯಲ್‌ ಲೋಕದಲ್ಲಿಯೇ ಜನಪ್ರೀಯತೆ ಗಳಿಸಿದ ಈ ನಟಿಗೆ ಲಕುಮಿ ಸೀರಿಯಲ್‌ ತಂದು ಕೊಟ್ಟ ಯಶಸ್ಸು ಅಪಾರ. ಸುಮಾರು ಐದಾರು ವರ್ಷಗಳ ಕಾಲ ಬೆಳ್ಳಿಯ ಪಾತ್ರದ ಮೂಲಕ ಜನಪ್ರಿಯತೆಯನ್ನು ಗಳಿಸಿದ್ದರು.ಈ ಸೀರಿಯಲ್‌ ಮೂಲಕವೇ ಈ ನಟಿ ತನ್ನ ಲೈಫ್‌ ಸ್ಟೈಲ್‌ ಚೇಂಜ್‌ ಮಾಡಿಕೊಂಡಿದ್ದರು. ಇನ್ನುಸುಷ್ಮಾ. ‘ಗಿಣಿರಾಮ’ ಧಾರಾವಾಹಿಯಲ್ಲಿ ನಾಯಕ ಶಿವರಾಮನ ಪ್ರೇಯಸಿ ನೇಹಾಳಾಗಿ ನಟಿಸಿದ್ದರು.  ನಟನೆಯಿಂದ  ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಸುಷ್ಮಾ, ಓದಿನ ಕಡೆಗೆ ಗಮನ ಹರಿಸಿ, ಬಿಬಿಎ ಪದವೀಧರೆಯಾಗಿದ್ದಾರೆ. ಇತ್ತೀಚೆಗೆ ಅಂತೂ ಸ್ಯಾಂಡಲ್‌ ವುಡ್‌ ನಲ್ಲಿ ಮದುವೆಯ ಪರ್ವ ಜೋರಾಗಿದೆ.  ಲಕುಮಿ, ಯಾರೇ ನೀ ಅಭಿಮಾನಿ ಧಾರಾವಾಹಿ ಖ್ಯಾತಿಯ ನಟಿ ಸುಷ್ಮಾ ಶೇಖರ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ, ಸಮಾರಂಭದ ಫೋಟೋಗಳನ್ನ ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಸುಷ್ಮಾ ಶೇರ್‌ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಬಿಗ್‌ ಬಾಸ್‌ ಮನೆ ಕ್ಯಾಪ್ಟನ್‌ ಆದ ರಘು..! ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಟ್ಟು ಜಬರ್ದಸ್‌ ಆಟ!

ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ..!

ನಟಿ ಸುಷ್ಮಾ ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು, ಲಕುಮಿ, ಯಾರೇ ನೀ ಅಭಿಮಾನಿ ಬಳಿಕ ಗಿಣಿರಾಮ ಸೀರಿಯಲ್‌ನಲ್ಲಿ  ನಟಿಸಿ, ಈಗ ಕೊಂಚ ಬ್ರೇಕ್ ಪಡೆದಿದ್ದರು. ಇದೀಗ ಮದುವೆಯಾಗುವ ಸುದ್ದಿ ಕೊಟ್ಟು ಫ್ಯಾನ್ಸ್‌ ಗೆ ಖುಷಿ ಕೊಟ್ಟಿದ್ದಾರೆ. ಹಾಗೆಯೇ ಸುಷ್ಮಾ ತನ್ನ ಹುಡುಗನ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.  He Asked, I Said Yes ಅಂತಷ್ಟೇ
ಬರೆದುಕೊಂಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ನಟಿ ರಜನಿ ಸೇರಿದಂತೆ ಅನೇಕರು ಮದುವೆಯಾಗಿದ್ದರು. ಇದೀಗ ತನ್ನ ಗೆಳೆಯನ ಜೊತೆ ನಟಿ ಸುಷ್ಮಾ ಸಪ್ತಪದಿ ತುಳಿಯಲು ಫುಲ್‌ ರೆಡಿಯಾಗಿದ್ದಾರೆ.

ಇದನ್ನೂ ಓದಿ: ರಾಘು ಶಿವಮೊಗ್ಗ ‌ನಿರ್ದೇಶನದ ದಿ‌ ಟಾಸ್ಕ್ ಟ್ರೈಲರ್ ಬಿಡುಗಡೆ ಮಾಡಿದ‌ ಶ್ರೀಮುರಳಿ

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 155

You cannot copy content of this page