ಬ್ರೇಕಿಂಗ್ ನ್ಯೂಸ್
ಕರ್ನಾಟಕ

Lip Care: ಕೆಂಪು ಗುಲಾಬಿಯಂತಹ ತುಟಿ ನಿಮ್ಮದಾಗಲು ಸಿಂಪಲ್ ಟಿಪ್ಸ್ ಇಲ್ಲಿದೆ ನೋಡಿ..!

Lip Care: ಚಳಿಗಾಲ ಬಂತೆಂದರೆ ಸಾಕು ಚಳಿಗೆ ನಮ್ಮ ಚರ್ಮ ಡಲ್ ಆಗುತ್ತದೆ. ಇನ್ನು ನಮ್ಮ ತುಟಿಗಳು ಕೂಡ ಒಡೆಯಲು ಆರಂಭವಾಗುತ್ತದೆ. ಹಾಗಾದ್ರೆ ಚಳಿಗಾಲದಲ್ಲಿ ನಮ್ಮ ತುಟಿಗಳ ರಕ್ಷಣೆ ಹೇಗಿರಬೇಕು ನೋಡೋಣ ಈ ಸ್ಟೋರಿಯಲ್ಲಿ…

ಇನ್ನು ಚಳಿಗಾಲ ಶುರುವಾಯಿತು. ಕೆಲವು ತಿಂಗಳುಗಳು ಚಳಿಯಲ್ಲಿ ಮನೆಯಲ್ಲಿ ಸುರಕ್ಷಿತವಾಗಿರಲು ಸಾಧ್ಯವಾಗುವುದಿಲ್ಲ. ನಮ್ಮ ಚರ್ಮ ಹಾಗೂ ದೇಹ ಚಳಿಯಿಂದ ನಡುಗುತ್ತಾದೆ. ಹೀಗಾಗಿ ನಮ್ಮ ಕಾಲು ಹಾಗೂ ತುಟಿಯ ಭಾಗ ಒಡೆಯುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ತುಟಿಯ ಕಾಳಜಿ ವಹಿಸುವುದು ಮುಖ್ಯ. ಹಲವಾರು ಜನ ತುಟಿಯ ಆರೈಕೆ ಮಾಡುವಲ್ಲಿ ಎಡವಿರುತ್ತಾರೆ. ಸರಿಯಾಗಿ ತಿಂಡಿ ತಿನ್ನಲು ಆಗದೆ ಅಥವಾ ಖಾರದ ತಿನಿಸುಗಳನ್ನು ತಿನ್ನಲು ಒದ್ದಾಡುತ್ತಾರೆ, ಅಂತವರು ಮುಖ್ಯವಾಗಿ ಕೆಲವೊಂದು ಟಿಪ್ಸ್‌ ಗಳನ್ನು ಫಾಲೋ ಮಾಡಲೇಬೇಕು.

ಚಳಿಗಾಲದಲ್ಲಿ ಚರ್ಮ ಒಣಗಿದಾಗ ಮಾಯಿಶ್ಚರೈಸರ್ ಬಳಸುವುದು ಉತ್ತಮ. ನಿಮ್ಮ ಚರ್ಮಕ್ಕೆ ಸೂಕ್ತವಾಗುವಂತಹ ಮಾಯಿಶ್ಚರೈಸರ್ ಬಳಸಿ ಇದರಿಂದ ನಿಮ್ಮ ಚರ್ಮವು ಹೈಡ್ರೇಟ್ ಆಗಿರುತ್ತದೆ. ಚರ್ಮ ಬಿರುಕು ಬೀಳುವುದು, ಒಣಗುವುದು ತಪ್ಪುತ್ತದೆ. ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುವುದು ಹೆಚ್ಚು. ಚರ್ಮ ಬಿರುಕು ಬಿಟ್ಟಾಗ ಕಡಿತ ಮತ್ತು ಕಿರಿಕಿರಿ ಅನುಭವ ಆಗುತ್ತದೆ.

ನಿಮ್ಮ ತುಟಿ ಒಣಗಲು ಕಾರಣ ಏನು..?

ಕೆಲವೊಮ್ಮೆ ತುಟಿಗಳ ಚರ್ಮದಲ್ಲಿ ರಕ್ತಸ್ರಾವ ಆಗುತ್ತದೆ. ಇದರಿಂದ ಆಹಾರ ಸೇವಿಸಿದಾಗ ಕೂಡ ಖಾರವಾದಂತಹ ಅನುಭವ ಆಗುತ್ತದೆ. ನಿಮ್ಮ ಚರ್ಮಕ್ಕೆ ಸೂಕ್ತ ವಾಗುವಂತಹ ಲಿಪ್ಸ್ಟಿಕ್ ಅಥವಾ ಲಿಪ್ ಬಾಮ್ ಬಳಕೆ ಮಾಡುವುದು ಉತ್ತಮ. ಇನ್ನು ಹೆಚ್ಚಿನವರು ಧೂಮಪಾನ ಮಾಡುತ್ತಾರೆ. ಅಂತವರ ತುಟಿ ಕೂಡ ಚಳಿಗಾಲದಲ್ಲಿ ಒಡೆಯುತ್ತದೆ, ಮದ್ಯಪಾನ ಸೇವನೆ ಮಾಡುವಂತಹವರು ಕೂಡ ಚಳಿಗಾಲದ ಸಮಯದಲ್ಲಿ ತುಟಿಯ ಬಿರುಕು ಅನುಭವಿಸುತ್ತಾರೆ. ಇದು ಅಲರ್ಜಿಗೂ ಕೂಡ ಕಾರಣ ಆಗಬಹುದು.

ನಿಮ್ಮ ತುಟಿಗೆ ಆಲೋವೆರಾ ಹಚ್ಚಿ!

ನಮ್ಮಲ್ಲಿ ಹಲವಾರು ಜನ ಆಲೋವೆರಾ ಜೆಲ್ ಬಳಸುತ್ತಾರೆ, ಇದು ಕೆಲವರಿಗೆ ಆಗಲ್ಲ. ಇನ್ನೂ ಕೆಲವರಿಗೆ ಆಲೋವೆರಾ ಜೆಲ್ ಆರೋಗ್ಯದ ಸಮಸ್ಯೆಗೆ ಒಳ್ಳೆಯ ಚಿಕಿತ್ಸೆಯಾಗುತ್ತದೆ. ಆಲೋವೆರ ಜೆಲ್ ಅನ್ನು ಕೆಲವೊಬ್ಬರು ಸೇವಿಸುತ್ತಾರೆ. ಇನ್ನೂ ಕೆಲವೊಬ್ಬರು ತಮ್ಮ ಚರ್ಮಕ್ಕೆ ಹಚ್ಚಿಕೊಳ್ಳುತ್ತಾರೆ. ಇದು ನಿಮ್ಮ ಒಣಗಿದ ಚರ್ಮವನ್ನು ತೇವಾಂಶ ಗೊಳಿಸುತ್ತದೆ.  ಇದರಿಂದ ನಿಮ್ಮ ತುಟಿಗಳು ಮೃದುವಾಗಿ ಹೊಳೆಯುತ್ತದೆ. ಆಯುರ್ವೇದದಲ್ಲಿ ಅಲೋವೆರಾ ಜೆಲ್ ದೇಹದ ನಾನಾ ಸಮಸ್ಯೆಗಳಿಗೆ ಪರಿಹಾರವಾಗಿ ಕೆಲಸ ಮಾಡುತ್ತದೆ.

ನಿಮ್ಮ ತುಟಿಗೆ ತೆಂಗಿನ ಎಣ್ಣೆ ಹಚ್ಚಿ!

ನಾವು ಪ್ರತಿನಿತ್ಯ ತೆಂಗಿನ ಎಣ್ಣೆಯನ್ನು ನಮ್ಮ ಆಹಾರದಲ್ಲಿ ಬಳಸುತ್ತೇವೆ. ಅದೇ ರೀತಿಯಾಗಿ ನಿಮ್ಮ ತುಟಿಗಳಿಗೆ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಇದು ಚರ್ಮದ ಅಲರ್ಜಿಯನ್ನು ಕಡಿಮೆ ಮಾಡುತ್ತದೆ. ಜೊತೆಗೆ ನಿಮ್ಮ ತುಟಿಯನ್ನು ಸುಂದರವಾಗಿ ಇರಿಸುತ್ತದೆ. ತೆಂಗಿನ ಎಣ್ಣೆಯಲ್ಲಿರುವ ಬ್ಯಾಕ್ಟೀರಿಯ ವಿರೋಧಿ ಗುಣಗಳು ನಿಮ್ಮ ತುಟಿಗಳ ಸೂಕ್ಷ್ಮಾಣುಗಳನ್ನು ಮುಕ್ತವಾಗಿಡಲು ಸಹಕಾರಿಯಾಗುತ್ತದೆ. ಪ್ರತಿದಿನ ರಾತ್ರಿ ತೆಂಗಿನ ಎಣ್ಣೆಯನ್ನು ನಿಮ್ಮ ತುಟಿಗಳಿಗೆ ಹಚ್ಚಿ ಮಸಾಜ್ ಮಾಡಿ, ಇದರಿಂದ ನಿಮ್ಮ ತುಟಿ ಬ್ಯೂಟಿಫುಲ್ ಆಗಿರುತ್ತದೆ. ಹೀಗೆ ಚಳಿಗಾಲದ ಟೈಮ್ನಲ್ಲಿ ನಿಮ್ಮ ದೇಹದ ಒಂದು ಭಾಗವಾದ ತುಟಿಯನ್ನು ರಕ್ಷಣೆ ಮಾಡಿಕೊಳ್ಳಲು ಮರೆಯದಿರಿ!

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page