ಬ್ರೇಕಿಂಗ್ ನ್ಯೂಸ್
ಕರಾವಳಿಪುತ್ತೂರು

Kadaba: ದ್ವೇಷ ಭಾಷಣ ಆರೋಪ – FIR ರದ್ದು ಗೊಳಿಸಿದ ಹೈಕೋರ್ಟ್

Kadaba: ನವೀನ್ ನೆರಿಯ ಅವರಿಂದ ಕೋಮು ಸಾಮರಸ್ಯಕ್ಕೆ ಧಕ್ಕೆ ಆಗಿದೆ. ಅವರು ದ್ವೇಷ ಭಾಷಣ ಮಾಡಿದ್ದಾರೆ ಎಂಬ ಆರೋಪದ ಮೇಲೆ ದಾಖಲಾದ ಎಫ್‌ಐಆರ್‌ನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ ಆದೇಶ ನೀಡಿದೆ.

ರಾತ್ರೋರಾತ್ರಿ ಸಂಘ ಪ್ರಮುಖರ ಮನೆಗೆ ಪೊಲೀಸರ ಭೇಟಿ
ಕೆಲ ತಿಂಗಳುಗಳ ಹಿಂದೆಯಷ್ಟೇ ಪೊಲೀಸರು ತಡರಾತ್ರಿ ಸಂಘಟನೆಗಳ ಪ್ರಮುಖರ ಮನೆಗಳಿಗೆ ತೆರಳಿ ಅವರ ಜತೆ ಫೋಟೋ ತೆಗೆದಿದ್ದರು. ಈ ವಿಚಾರವನ್ನು ಖಂಡಿಸಿ ಕಡಬ ಠಾಣೆಯ ಎದುರು ಜೂ.4ರಂದು ಸಂಜೆ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆ ವೇಳೆ ವಿಶ್ವ ಹಿಂದೂ ಪರಿಷದ್‌ ಮುಖಂಡ ನವೀನ್ ನೆರಿಯ ಅವರು ಭಾಷಣ ಮಾಡಿದ್ದರು.

ಪೊಲೀಸ್‌ ಠಾಣೆಯ ಎದುರು ದ್ವೇಷ ಭಾಷಣ ಮಾಡಿ ಕೋಮು ಸಾಮರಸ್ಯಕ್ಕೆ ಧಕ್ಕೆ ಮಾಡಿದ್ದಾರೆ ಎಂದು ನವೀನ್ ನೆರಿಯ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನು ಪ್ರಶ್ನಿಸಿ ನವೀನ್ ನೆರಿಯ ಅವರು ವಕೀಲ ಅರುಣ್ ಶ್ಯಾಮ್ ಅವರ ಮೂಲಕ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಬಗ್ಗೆ ವಿಚಾರಣೆ ನಡೆದು, ದಾಖಲಾಗಿದ್ದ ಎಫ್ ಐ ಆರ್ ನ್ನು ರದ್ದುಗೊಳಿಸಿ ಹೈಕೋರ್ಟ್‌ ಆದೇಶ ನೀಡಿದೆ.

ಇದನ್ನೂ ಓದಿ: Bengaluru: ರಾಘು ಶಿವಮೊಗ್ಗ ‌ನಿರ್ದೇಶನದ ದಿ‌ ಟಾಸ್ಕ್ ಟ್ರೈಲರ್ ಬಿಡುಗಡೆ ಮಾಡಿದ‌ ಶ್ರೀಮುರಳಿ

=================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

 

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 36

You cannot copy content of this page