ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಶೈಕ್ಷಣಿಕ

Childrens Day: ಇಂದಿನ ಮಕ್ಕಳು ದಾರಿ ತಪ್ಪಲು ಪ್ರಮುಖ ಕಾರಣಗಳೇನು..?

Childrens Day: ನವೆಂಬರ್ 14 ಬಂತೆಂದರೆ ಮಕ್ಕಳಿಗೆಲ್ಲ ಸಂಭ್ರಮದ ದಿನ. ಈ ದಿನ ಶಾಲಾ ಕಾಲೇಜುಗಳಲ್ಲಿ ಮಕ್ಕಳ ದಿನಾಚರಣೆ ಆಚರಣೆ ಮಾಡುತ್ತಾರೆ. ಹಾಗಾದರೆ ಇಂದಿನ ಮಕ್ಕಳ ಕಲಿಯಬೇಕಾದ ಕೆಲವು ಕೆಲವು ಸೂಕ್ಷ್ಮ ವಿಚಾರಗಳೇನು ನೋಡೋಣ..

ನಾಡಿನಾದ್ಯಂತ ಈ ದಿನ ಮಕ್ಕಳ ದಿನಾಚರಣೆಯ ಸಂಭ್ರಮ ಮನೆ ಮಾಡಿದೆ. ಎಲ್ಲ ತಂದೆ ತಾಯಿ, ಶಾಲಾ ಮಕ್ಕಳಿಗೆ ಶುಭಾಶಯ ತಿಳಿಸಿ, ಈ ದಿನದ ಮಹತ್ವವನ್ನು ಸಹ ತಿಳಿಸುತ್ತಾರೆ. ಶಿಕ್ಷಕರು ಮಕ್ಕಳಿಗೆ ಈ ದಿನದ ಮಾಹಿತಿ ಹೇಳಿ ಅವರಿಗೆ ಸಿಹಿ ತಿನಿಸುಗಳನ್ನು ಸಹ ಕೊಡುವುದು ಸಾಮಾನ್ಯ. ಮಕ್ಕಳಿಗೂ ಸಹ ಈ ದಿನದ ಬಗ್ಗೆ ಮಾತನಾಡಲು ಶಾಲೆಗಳಲ್ಲಿ ಅವಕಾಶ ನೀಡಲಾಗುತ್ತದೆ.  ಈ ದಿನ ದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮವೇ ಮಕ್ಕಳಿಗಾಗಿ ಏರ್ಪಟ್ಟಿರುತ್ತದೆ.

Restaurant : ರೆಸ್ಟೋರೆಂಟ್ ಗಳಲ್ಲಿ ಈ ರೀತಿಯ ಜನರಿಂದ ಸರ್ವರ್ ಗಳಿಗೆ ಗೌರವ…!

ಈ ದಿನಮಕ್ಕಳ ದಿನವು ಸಂತೋಷದಿಂದ ತುಂಬಿದ್ದರೂ, ಅದರ ಆಳವಾದ ಸಂದೇಶವೆಂದರೆ, ಕೂಡ ಹೊಂದಿದೆ.  ಪಂಡಿತ್ ನೆಹರೂ ಹೇಳುವ ಹಾಗೆ, ಇಂದಿನ ಮಕ್ಕಳು ನಾಳಿನ ಪ್ರಜೆ. ನಾವು  ಮಕ್ಕಳನ್ನು ಹೇಗೆ ಬೆಳೆಸುತ್ತೇವೆಯೋ ಅದು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಆದ್ದರಿಂದ, ಇದು ಪ್ರತಿ ಮಗುವಿನ ಕನಸುಗಳು ಮತ್ತು ಘನತೆಯನ್ನು ರಕ್ಷಿಸುವ ದಿನವಾಗಿದೆ.

ಮಕ್ಕಳ ಬಳಿ ಮುಕ್ತವಾಗಿ ಸಂವಹನ ನಡೆಸಿ..!
ಇಂದಿನ ಮಕ್ಕಳ ಜೊತೆ ತಂದೆ ತಾಯಿ ಮುಕ್ತವಾಗಿ ಸಂವಹನ ನಡೆಸುವುದರಿಂದ ಮಕ್ಕಳು ಕೆಟ್ಟ ಹಾದಿ ತುಳಿಯುವುದನ್ನು ತಪ್ಪಿಸಬಹುದು. ಇದರಿಂದ ಮಕ್ಕಳು ಕೂಡ ಓಪನ್‌ ಅಪ್‌ ಆಗಿ ಮಾತನಾಡುತ್ತಾರೆ, ಅದೇನಿದ್ದರೂ ಹೇಳಿಕೊಳ್ಳುತ್ತಾರೆ.  ಫ್ರೆಂಡ್ಲಿ ಸ್ವಭಾವದಿಂದ ನಿಮ್ಮ ಮಕ್ಕಳನ್ನು ಬೆಳೆಸಿದರೆ ಮಕ್ಕಳು ಕೂಡ ನಿಮ್ಮ ಹಾದಿಗೆ ಬರುತ್ತವೆ.

ಮೊಬೈಲ್‌ ನಿಂದ ದೂರವಿರಿಸಿ!
ಇಂದು ಪುಟ್ಟ ಮಕ್ಕಳ ಕೈಯಲ್ಲಿ ಮೊಬೈಲ್‌ ಇರುತ್ತದೆ.  ತಂದೆ ತಾಯಿ ಮೊಬೈಲ್‌ ಕೊಡಿಸಿ ಮಕ್ಕಳನ್ನು ಕಳೆದುಕೊಳ್ಳುತ್ತಿರೋದು ಕಾಮನ್‌ ಆಗಿದೆ. ಒಂದು ಲೆಕ್ಕದಲ್ಲಿ ಮೊಬೈಲ್‌ ನಿಂದ ಮಕ್ಕಳು ಮಾಹಿತಿಗಳನ್ನು ಪಡೆದುಕೊಳ್ಳಬಹುದಾದೂ ಇದರಿಂದ ಮಕ್ಕಳು ವೀಡಿಯೋಗಳನ್ನು ನೋಡುತ್ತಾ ಕೆಲವೊಮ್ಮೆ ದಾರಿ ತಪ್ಪುವಂತಹ ಸಾಧ್ಯತೆ ಇದೆ. ಇಂದು ಟೆಕ್ನಾಲಜಿಗಳಿಂದ ದೇಶದಲ್ಲಿ ಹಲವಾರು ಕ್ರೈಂ ಗಳು ನಡೆಯುತ್ತಿವೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 172

You cannot copy content of this page