Children’s Day : ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪ್ರಕಟಣೆಯ ಪ್ರಕಾರ, ಮಕ್ಕಳ ದಿನಾಚರಣೆಯು ನೆಹರು ಮತ್ತು ಅವರು ಮಕ್ಕಳ ಮೇಲೆ ತೋರುತ್ತಿದ್ದ, ಪ್ರೀತಿ ಮತ್ತು ಆರೈಕೆಯ ಸಂಕೇತವಾಗಿದ್ದು. ಈ ಹಿನ್ನೆಲೆಯಲ್ಲಿ ಪುಟಾಣಿಗಳಿಗೆ ವಸ್ತು ಪ್ರದರ್ಶನ ವೀಕ್ಷಣೆಗೆ ಉಚಿತ ಅವಕಾಶವನ್ನು ನೀಡಲಾಗಿದೆ ಎಂದು ತಿಳಿಸಿರುತ್ತಾರೆ.
ನವೆಂಬರ್ 14ರಂದು ಮಕ್ಕಳ ದಿನಾಚರಣೆಯ ಅಂಗವಾಗಿ ಮೈಸೂರಿನಲ್ಲಿ ವಸ್ತು ಪ್ರದರ್ಶನ ನಡೆಯಲಿದ್ದು, 14 ವರ್ಷದೊಳಗಿನ ಮಕ್ಕಳಿಗೆ ಅದು ಕೂಡ ಉಚಿತವಾಗಿ ಪ್ರವೇಶವನ್ನು ನೀಡಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಈ ವಿಶೇಷ ಅವಕಾಶ ಲಭ್ಯವಿದ್ದು, ಮಕ್ಕಳು ಯಾವುದೇ ಪ್ರವೇಶ ಶುಲ್ಕವಿಲ್ಲದೆ ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳಬಹುದು ಎಂದು ವರದಿಯಾಗಿದೆ.
ಪ್ರತಿ ವರ್ಷ ನಡೆಯುವ ಮೈಸೂರು ವಸ್ತು ಪ್ರದರ್ಶನವು ಕೃಷಿ ಯಂತ್ರೋಪಕರಣ, ಆಹಾರ ಮಳಿಗೆಗಳು, ಮನರಂಜನಾ ಚಟುವಟಿಕೆಯ ಪ್ರದರ್ಶನ ಇತ್ಯಾದಿಗಳ ಮೂಲಕ ಜನರನ್ನ ಆಕರ್ಷಿಸುತ್ತಲೇ ಬಂದಿದೆ. ಈ ವರ್ಷವೂ ಪ್ರದರ್ಶನದಲ್ಲಿ ಹಲವು ಹೊಸ ತಂತ್ರಜ್ಞಾನ ಮಳಿಗೆಗಳು ಹಾಗೂ ಇನ್ನಿತರ ಆಟೋಪಕರಣಗಳು ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೂಡ ನೀಡಲಾಗುತ್ತದೆ. ಮಕ್ಕಳಿಗೆ ಕಲಿಕೆಯ ಜೊತೆ ಮನೋರಂಜನೆಯ ಅನುಭವ ಕೂಡ ಆಗಲಿ, ಎಂದು ಇಲ್ಲಿ ಈ ವಸ್ತು ಪ್ರದರ್ಶನದಿಂದ ಮಕ್ಕಳು ಖುಷಿಯಾಗಿರಲಿ ಎಂದು ನಾಳೆ ದಿನ ಅಂದರೆ ಮಕ್ಕಳ ದಿನಾಚರಣೆಯಂದು ಇಲ್ಲಿ ಉಚಿತ ಪ್ರದರ್ಶನವನ್ನು ಆಯೋಜಿಸಲಾಗಿರುತ್ತದೆ.
ಮಕ್ಕಳ ದಿನದಂದು ಈ ವಿಶೇಷ ಪ್ರವೇಶಾತಿಯ ಘೋಷಣೆಯು ಶಾಲೆಗಳು, ಮಕ್ಕಳ ಗುಂಪುಗಳನ್ನು ತರಲು ಸಿದ್ಧತೆಯನ್ನು ಮಾಡುತ್ತಿದ್ದು ಪೋಷಕರು ಕೂಡ ಕುಟುಂಬ ಸಮೇತವಾಗಿ ಈ ವಸ್ತು ಪ್ರದರ್ಶನಕ್ಕೆ ತೆರಳುವ ಯೋಜನೆಯನ್ನು ಮಾಡುತ್ತಿದ್ದಾರೆ. ಇನ್ನು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮಕ್ಕಳು ಸುರಕ್ಷಿತವಾಗಿ ಪ್ರದರ್ಶನ ವೀಕ್ಷಿಸಲು ಅಗತ್ಯವಾದ ವ್ಯವಸ್ಥೆಗಳನ್ನು ಮಾಡಿರಲಾಗುತ್ತದೆ ಎಂದು ಕೂಡ ವರದಿಯಾಗಿದೆ.
ಇದನ್ನೂ ಓದಿ :Mysore : ಭಾರತದ ಅತೀದೊಡ್ಡ ರೇಷ್ಮೆ ವಸ್ತುಸಂಗ್ರಹಾಲಯ ಇದೀಗ ಮೈಸೂರಿನಲ್ಲಿ…!
…..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/qKJ1lviMpOM?si=IFze6HwN6tuGC2to











