ಬ್ರೇಕಿಂಗ್ ನ್ಯೂಸ್
ವಾಣಿಜ್ಯ

Protest : ಮುಧೋಳದಲ್ಲಿ ರೈತರ ಟ್ರ್ಯಾಕ್ಟರ್ ಗಳಿಗೆ ಬೆಂಕಿ : ಟ್ರಾಲಿ ಕೆಡವಿ ಆಕ್ರೋಶ

Protest : ಮುಧೋಳ ತಾಲೂಕಿನ ಸೈದಾಪುರ ಬಳಿಯ ಕಾರ್ಖಾನೆಯ ಬಳಿ 100 ಕ್ಕೂ ಅಧಿಕ ಟ್ರಾಲಿಗಳಿಗೆ ಬೆಂಕಿ, ಅಲ್ಲದೇ ಟ್ರ್ಯಾಕ್ಟರ್ ಟ್ರಾಲಿ ಕೆಡವಿ ಆಕ್ರೋಶ ವ್ಯಕ್ತಪಡಿಸಿದ್ದು, ಕಬ್ಬಿನ ಆಕ್ರೋಶ ಇನ್ನೂ ಕಡಿಮೆ ಆಗಿಲ್ಲ. ಪ್ರತೀ ಟನ್ ಕಬ್ಬಿಗೆ 3,500 ನೀಡುವಂತೆ ಆಗ್ರಹಿಸಲಾಗಿದೆ.

ಕಾರ್ಖಾನೆ ಬಳಿ ಸಾಲಾಗಿ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾತುಕತೆಗಾಗಿ ವೇದಿಕೆಗೆ ಬಾರದ ಕಾರ್ಖಾನೆ ಮಾಲೀಕರ ವಿರುದ್ಧ ರೈತರು ತಾಳ್ಮೆ ಕಳೆದುಕೊಂಡರು. ಈ ವೇಳೆ ಕಬ್ಬು ತುಂಬಿದ ಟ್ರಾಲಿಗಳಿಗೆ ಬೆಂಕಿ ಹಚ್ಚಿ ಸುಟ್ಟು, ಪ್ಯಾಕ್ಟರಿಗೆ ಮುತ್ತಿಗೆ ಹಾಕಲು ಹೊರಟಿದ್ದರು. ಟ್ರಾಕ್ಟರ್ ಗಾಲಿಯ ತೆಗೆದು ಒಂದು ಟ್ರಾಲಿ ಪಲ್ಟಿ ಮಾಡಿದ್ರು, ಇನ್ನೊಂದು ಟ್ರಾಲಿ ಪಲ್ಟಿಯಾಗದ ಹಿನ್ನೆಲೆ ನಿಂತಲ್ಲೇ ಬೆಂಕಿ ಹಚ್ಚಿದ್ರು.

ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸ ಮಾಡುತ್ತಿದ್ದು, ಆಗಸದೆತ್ತರ ಚಿಮ್ಮುತ್ತಿರುವ ಬೆಂಕಿಯ ಜ್ವಾಲೆಗಳು ಕಮ್ಮಿಯಾಗುತ್ತಲೇ ಇಲ್ಲ. ರೈತರ ಸಿಟ್ಟಿನಂತೆ ಬೆಂಕಿಯೂ ಅಷ್ಟೇ ರೌದ್ರವಾಗಿ ಹೊತ್ತಿ ಉರಿಯುವುದು ಮಾಧ್ಯಮಗಳಲ್ಲಿ ಇದೀಗ ವರದಿಯಾಗುತ್ತಿದೆ. ಈ ಸಂದರ್ಭ ಮಾಧ್ಯಮದಲ್ಲಿ ಮಾತನಾಡಿದ, ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ ರೈತರು ಈ ಕೆಲಸ ಖಂಡಿತ ಮಾಡ್ತಾ ಇಲ್ಲ. ಅವರು ಅವರದ್ದೇ ಕಾರ್ಖಾನೆಗೆ ಬೆಂಕಿ ಹಚ್ಚಲು ಸಾಧ್ಯವಿಲ್ಲ. ಹಾಗಾಗಿ‌ ಇದು ಯಾರೋ ಬೇಕು ಅಂತಲೇ ಮಾಡ್ತಾ ಇದ್ದಾರೆ. ಕಿಡಿಗೇಡಿಗಳು ಈ ರೀತಿ ಮಾಡಿರೋದು. ಇಡೀ ಉತ್ತರಕರ್ನಾಟಕದಲ್ಲಿ 73 ಕಾರ್ಖಾನೆಗಳಲ್ಲಿ ಕೇವಲ 4 ಕಾರ್ಖಾನೆಗಳ ಜೊತೆ ಸಂಘರ್ಷ‌ ಮಾಡಿ ಈ ಪರಿಸ್ಥಿತಿ ತಂದಿಟ್ಟಿದ್ದಾರೆ. ಇದರಿಂದ ಇಡೀ ರಾಜ್ಯದ ಹೆಸರು ಕೆಡುತ್ತದೆ ಎಂದು ಹೇಳಿದರು.

ಇದನ್ನೂ ಓದಿ :Mysore : ಭಾರತದ ಅತೀದೊಡ್ಡ ರೇಷ್ಮೆ ವಸ್ತುಸಂಗ್ರಹಾಲಯ ಇದೀಗ ಮೈಸೂರಿನಲ್ಲಿ…!

……………

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/qKJ1lviMpOM?si=IFze6HwN6tuGC2to

ಈ ಸುದ್ದಿಯನ್ನು ಶೇರ್ ಮಾಡಿ

Related Posts

You cannot copy content of this page