Mysore : ರೇಷ್ಮೆ ಎಂದರೆ ಒಂದು ಪ್ರಾಕೃತಿಕ ತಂತು, ಅದನ್ನು ಮುಖ್ಯವಾಗಿ ರೇಷ್ಮೆ ಹುಳಿವಿನಿಂದ ಪಡೆಯುತ್ತಾರೆ. ಈ ತಂತುವಿನಿಂದ ತಯಾರಿಸಲಾದ ಬಟ್ಟೆಯನ್ನು “ರೇಷ್ಮೆ ಬಟ್ಟೆ” ಎಂದು ಕರೆಯಲಾಗುತ್ತದೆ. ಅದೇ ರೀತಿ ಈಗ ಪ್ರಸಿದ್ಧಿಯಲ್ಲಿರುವ, ರೇಷ್ಮೆ ವಸ್ತುಸಂಗ್ರಹಾಲಯವು ರೇಷ್ಮೆಯ ಇತಿಹಾಸ, ಉತ್ಪಾದನೆ, ಸಂಸ್ಕರಣೆ ಹಾಗೂ ಅದರ ಕಲೆ ಮತ್ತು ತಂತ್ರಜ್ಞಾನವನ್ನು ಪ್ರದರ್ಶಿಸುವ ವಿಶಿಷ್ಟ ಸ್ಥಳವಾಗಿದೆ.
ಇದೀಗ ಮೈಸೂರಿನಲ್ಲಿ ರೇಷ್ಮೆ ದಾರವನ್ನು ಸಂಗ್ರಹಿಸುವ ಬಗ್ಗೆ ಸಂಸ್ಥೆಯೊಂದನ್ನು ತೆರೆಯಲಾಗುತ್ತದೆ ಎಂದು ವರದಿಯಾಗಿದ್ದು, ಇದನ್ನು ವಸ್ತು ಸಂಗ್ರಹಾಲಯವಾಗಿ ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಇದು ಭಾರತದ ಮೊದಲ ರೇಷ್ಮೆ ಮ್ಯೂಸಿಯಂ ಎಂದೂ ಕರೆಯಲ್ಪಡುವುದು. ಅಲ್ಲದೇ, ಇದು ರೇಷ್ಮೆ ಸೀರೆಗಳಿಗೆ ಹೆಸರುವಾಸಿಯಾದ ಮೈಸೂರಿಗೆ ಹೆಮ್ಮೆಯ ವಿಷಯವೂ ಹೌದು.
ರೇಷ್ಮೆ ಹುಳುದ ಪ್ಯೂಪಾ ಹಂತದಿಂದ ಅದನ್ನು ಬಟ್ಟೆಯಾಗಿ ಹೇಗೆ ನೇಯಲಾಗುತ್ತದೆ ಎಂಬುವುದರ ಬಗ್ಗೆ ಇಲ್ಲಿ ತೋರಿಸಲಾಗುತ್ತದೆ ಎಂದು ಕೇಂದ್ರ ರೇಷ್ಮೆ ಮಂಡಳಿಯ ರಾಷ್ಟ್ರೀಯ ರೇಷ್ಮೆ ಹುಳು ಬೀಜ ಸಂಸ್ಥೆ ನಿರ್ದೇಶಕಿ ಡಾ. ಮಂತ್ರಿರಾ ಮೂರ್ತಿ ತಿಳಿಸಿರುತ್ತಾರೆ. ಮೈಸೂರಿನಲ್ಲಿರುವ ಸಿಎಸ್ ಬಿ ಕೇಂದ್ರದಲ್ಲಿ 120 ಎಕರೆ ಪ್ರದೇಶದಲ್ಲಿ ಈ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.
ವಸ್ತು ಸಂಗ್ರಹಾಲಯವನ್ನು ರಚಿಸಲು, ಸಿಎಸ್‌ಬಿ ಅಧಿಕಾರಿಗಳು ಚೀನಾ ಮತ್ತು ಇಟಲಿಯಲ್ಲಿ ಇದೇ ರೀತಿಯ ಕೇಂದ್ರಗಳನ್ನು ಅಧ್ಯಯನ ಮಾಡಿದ್ದಾರೆ. ಇಟಲಿಯಲ್ಲಿನ ಅತ್ಯುತ್ತಮ ಸಂಗ್ರಹಗಳು ಮತ್ತು ಚೀನಾದಲ್ಲಿ 2000 ವರ್ಷಗಳಷ್ಟು ಹಳೆಯ ಸಂಗ್ರಹಗಳನ್ನು ಸಹ ಅಧ್ಯಯನ ಮಾಡಿದ್ದಾರೆ. ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲು ಎಲ್ಲಾ ರೇಷ್ಮೆ ಉತ್ಪಾದಿಸುವ ರಾಜ್ಯಗಳು ಮತ್ತು ರೈತರಿಂದ ಸಾಂಪ್ರದಾಯಿಕ ಮತ್ತು ಪರಂಪರೆ ಸಂಗ್ರಹಗಳನ್ನು ಸಂಗ್ರಹಿಸುವ ಕೆಲಸ ಪ್ರಾರಂಭವಾಗಿದೆ. ಮ್ಯೂಸಿಯಂ ಪ್ರದರ್ಶನವು ನಿಜವಾದ ರೇಷ್ಮೆಯನ್ನು ಹೇಗೆ ಗುರುತಿಸುವುದು ಎಂಬುದನ್ನು ತೋರಿಸುತ್ತದೆ. ಮುಂಬರುವ ಹಣಕಾಸು ವರ್ಷದಿಂದ ಎರಡು ವರ್ಷಗಳಲ್ಲಿ ಅದನ್ನು ಪೂರ್ಣಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಇಲ್ಲಿ ಹಳೆಯ ಸಂಗ್ರಹಗಳನ್ನು ಪ್ರದರ್ಶಿಸಲಾಗುವುದು. ರೇಷ್ಮೆ ಹುಳದ ಪ್ರಾಮುಖ್ಯತೆ ಮತ್ತು ಮೂಲ ಮತ್ತು ನಕಲಿ ರೇಷ್ಮೆಯನ್ನು ಹೇಗೆ ಗುರುತಿಸುವುದು ಎಂಬುದರ ವಿವರಗಳನ್ನು ಸಹ ಇಲ್ಲಿ ವಿವರಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ :Life: ಲೈಫಲ್ಲಿ ಒಂಟಿಯಾಗಿದ್ದೀನಿ ಅಂತ ಅಂದುಕೊಂಡಿದ್ದೀರಾ..? ಹಾಗಾದ್ರೆ ಚಿಂತೆ ಬಿಡಿ..ಈ ಸ್ಟೋರಿ ನಿಮಗಾಗಿ!
………..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/qKJ1lviMpOM?si=IFze6HwN6tuGC2to











