ಬ್ರೇಕಿಂಗ್ ನ್ಯೂಸ್
ಕರ್ನಾಟಕ

WKM : ಇಂದು ವಿಶ್ವ ದಯಾಳು ದಿನ : ಎಲ್ಲರೊಂದಿಗೂ ಜೀವಿಸಿ…!

WKM : ಈ ದಿನ ಅಂದರೆ ನವೆಂಬರ್ 13 ನ್ನು ವಿಶ್ವ ದಯಾಳು ದಿನವನ್ನಾಗಿ ಆಚರಿಸಲಾಗುತ್ತದೆ ಎಲ್ಲರೂ ನಗುಮೊಗದಿಂದ ಪರಸ್ಪರ ಅವಲಂಬನೆಯಿಂದ ಮಾನವೀಯತೆಯ ದೃಷ್ಟಿಯಿಂದ ಒಟ್ಟಾಗಿ ಜೀವಿಸುವುದು ಮುಖ್ಯ. ಮಾನವೀಯತೆ, ಸಹಾನುಭೂತಿ ಮತ್ತು ದಯೆಯ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತರಿಸುವುದು ಇದರ ಮೂಲ ಉದ್ದೇಶವಾಗಿದೆ. ಸಣ್ಣ ಸಣ್ಣ ದಯೆಯು ಸಹ ದೊಡ್ಡ ಬದಲಾವಣೆಯನ್ನು ತರಬಲ್ಲವು ಎಂಬ ಸಂದೇಶ ನೀಡುತ್ತದೆ. ವಿಶ್ವ ದಯಾಳು ದಿನವನ್ನು ಮೊದಲು 1998ರಲ್ಲಿ World Kindness Movement (WKM) ಸಂಸ್ಥೆಯು ಪ್ರಾರಂಭಿಸಿತು. ಈ ಸಂಸ್ಥೆ ವಿವಿಧ ದೇಶಗಳ ದಯಾ ಚಳವಳಿಗಳನ್ನು ಒಗ್ಗೂಡಿಸಿ ಮಾನವೀಯತೆಗಾಗಿ ಕೆಲಸ ಮಾಡುತ್ತದೆ.

ಈ ದಿನದ ವಿಶೇಷತೆ ಏನೆಂದರೆ ಯಾರಿಗಾದರೂ ಸಹಾಯ ಮಾಡುವ ಉದ್ದೇಶ ಉದಾರಣೆಗೆ, ಹಿರಿಯರಿರಬಹುದು ಅವರಿಗೆ ಸಹಾಯ ಮಾಡುವುದಾಗಲಿ, ಅಥವಾ ಮಕ್ಕಳಿಗೆ ಯಾವುದಾದರೂ ವಿಷಯಕ್ಕೆ ಸಂಬಂಧಿಸಿದಂತೆ ಸಮಾಧಾನ ಮಾಡುವುದಾಗಲಿ, ಪ್ರಾಣಿಗಳ ಜೊತೆ ದಯೆಯಿಂದ ವರ್ತಿಸುವುದಾಗಲಿ, ಪರಿಸರವನ್ನು ಪ್ರೀತಿಸುವುದಾಗಲಿ… ಇವೆಲ್ಲವೂ ದಯೆಗೆ ನಾವು ನೀಡುವ ಅರ್ಥವಾಗಿರುತ್ತದೆ. ಜೊತೆಗೆ ಒಬ್ಬರಿಗೆ ಧನ್ಯವಾದ ಹೇಳುವುದು ಕೂಡಾ ಮುಖ್ಯ. ನಾವು ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಕೃತಜ್ಞರಾಗಿರಬೇಕು ಯಾರು ಸಹಾಯ ಮಾಡಲಿ ಅಥವಾ ಮಾಡದೇ ಇರಲಿ ಆದರೆ, ಎಲ್ಲರನ್ನೂ ಕೂಡ ಪ್ರಶಂಸಿಸುವುದು ಮುಖ್ಯ.

ದಯೆಯಿಂದ ಇರುವುದು ಅಥವಾ ಬೇರೆಯವರನ್ನ ಕ್ಷಮಿಸುವುದರಿಂದ ಬೇರೆಯವರಿಗೂ ಸಮಾಧಾನದ ಜೊತೆಗೆ ನಮ್ಮ ಮನಸ್ಸು ಕೂಡ ಉಲ್ಲಾಸದಿಂದ ಇರುತ್ತದೆ. ಏನೋ ಒಂದು ಖುಷಿಯ ವಾತಾವರಣ, ಸಮಾಧಾನದ ತೃಪ್ತಿಯು ಮನಸಲ್ಲಿ ಇರುತ್ತದೆ. ಅಂತೆಯೇ, ದಯೆ ಎನ್ನುವ ಪದದ‌ ಅರ್ಥವನ್ನು ಈಗಿನ ಕಾಲದ ಮಕ್ಕಳಿಗೆ ಅರಿವು ಮಾಡುವ ಉದ್ದೇಶದಿಂದ ಶಾಲಾ,‌ ಕಾಲೇಜುಗಳಲ್ಲಿ ಈ ದಿನದ ಬಗ್ಗೆ ಮಾಹಿತಿ ನೀಡುವುದು ಉತ್ತಮ. ಪುಸ್ತಕದಲ್ಲಿ ಇರುವ ಅಕ್ಷರಗಳಿಗಿಂತ‌ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಹಾಗೂ ಸಮಾಜದಿಂದ ನಾವು ಕಲಿಯುವಂತದ್ದು‌ ಬಹಳಷ್ಟಿವೆ.

ಇದನ್ನೂ ಓದಿ :Kukke Subrahmanya: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪಸಂಸ್ಕಾರ ಮಾಡಿಸಿದ ನಯನತಾರಾ ದಂಪತಿ!

……..

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/qKJ1lviMpOM?si=IFze6HwN6tuGC2to

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 152

You cannot copy content of this page