BBK12: ಬಿಗ್ ಬಾಸ್ ಸೀಸನ್ 12 ರಲ್ಲಿ ಪ್ರತಿಯೊಬ್ಬ ಸ್ಪರ್ದಿಯು ಅತ್ಯುತ್ತಮವಾಗಿ ಆಟ ಆಡುತ್ತಿದ್ದಾರೆ. ಮನೆ ಒಳಗಡೆ ಕ್ಯಾಪ್ಟನ್ ಮಾಳು ಕೂಡ ಈಗೀಗ ಮಾತು ಶುರು ಮಾಡಿದ್ದಾರೆ. ಹೀಗಾಗಿ ಬಿಗ್ ಬಾಸ್ ನೋಡುತ್ತಿರುವಂತಹ ಮಂದಿ ಅದೇನೇ ಆದ್ರೂ ಕೂಡ ಗಿಲ್ಲಿ ನಟನ ಈ ಬಾರಿಯ ಬಿಗ್ ಬಾಸ್ ವಿನ್ನರ್ ಅಂತ ಈಗಾಗಲೇ ಮಾತನಾಡಿಕೊಳ್ಳಲು ಶುರು ಮಾಡ್ತಿದ್ದಾರೆ.
ಗಿಲ್ಲಿ ನಟನ ನಟನೆಗೆ ಜನ ಫಿದಾ!!
ಹೌದು, ಗಿಲ್ಲಿ ನಟ ಬಿಗ್ ಬಾಸ್ ರಿಯಾಲಿಟಿ ಶೋ ಗೆ ಬರುವ ಮುಂಚೆ ಈತ ಒಬ್ಬ ಒಳ್ಳೆಯ ಹಾಸ್ಯ ಕಲಾವಿದ. ರಿಯಾಲಿಟಿ ಶೋಗಳ ಮೂಲಕ ಈತ ಹೆಸರು ಗಳಿಸಿದ್ದಾನೆ. ಹೀಗಾಗಿ ಜನ ಗಿಲ್ಲಿ ನಟನನ್ನು ಕಾಮಿಡಿ ಆಕ್ಟರ್ ಅಂತ ಸ್ವೀಕಾರ ಮಾಡಿದ್ದಾರೆ. ಜೊತೆಗೆ ಬಿಗ್ ಬಾಸ್ ಶೋಗೆ ಈತ ಬರುವ ಮುಂಚೆಯೇ ಈ ಹಿಂದೆಯೇ ಗಾಸಿಪ್ ಕೂಡ ಹರಿದಾಡ್ತಿತ್ತು. ಗಿಲ್ಲಿ ಈ ಸಲ ಬಿಗ್ ಬಾಸ್ ಮನೆಗೆ ಖಂಡಿತವಾಗ್ಲೂ ಹೋಗ್ತಾರೆ ಅಂತ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪೋಸ್ಟ್ ಗಳು ಕೂಡ ಹರಿದಾಡುತ್ತಿದ್ದವು. ಅದೇ ರೀತಿ ಈ ಬಾರಿ ಬಿಗ್ ಬಾಸ್ ಸೀಸನ್ 12ಕ್ಕೆ ಗಿಲ್ಲಿ ನಟನನ್ನು ಆಯ್ಕೆ ಮಾಡಿ ಮನೆ ಒಳಗಡೆ ಕಳುಹಿಸಲಾಗಿದೆ.
ಗಿಲ್ಲಿಗೆ ಸೀರಿಯಸ್ ನೆಸ್ ಇಲ್ವಾ..? ಅದೂನು ತಮಾಷೆನಾ..?
ಇನ್ನು, ಬಿಗ್ ಬಾಸ್ ಮನೆಯ ಒಳಗಡೆ ಇರುವಂತಹ ಸ್ಪರ್ಧಿಗಳು ಇತ್ತೀಚೆಗೆ ಗಿಲ್ಲಿ ನಟನನ್ನು ಅಷ್ಟಾಗಿ ಇಷ್ಟಪಡುತ್ತಿಲ್ಲ. ಗಿಲ್ಲಿ ಓವರ್ ಆಗಿ ಕಾಮಿಡಿ ಮಾಡುತ್ತಾನೆ ಅಂತ ಮನೆ ಮಂದಿ ಎಲ್ಲರೂ ಕೂಡ ಮಾತನಾಡಿಕೊಳ್ಳುತ್ತಿದ್ದಾರೆ. ಮನಸ್ಸಿಗೆ ನೋವು ಆಗುವ ತರಹ ಕಾಮಿಡಿ ಮಾಡಿಕೊಂಡು ಮನೆಯವರ ಕೆಂಗಣ್ಣಿಗೆ ಕಾರಣವಾಗುತ್ತಿದ್ದಾರೆ. ಬಿಗ್ ಬಾಸ್ ನೋಡುವಂತಹ ಪ್ರೇಕ್ಷಕರು ಕೂಡ ಇದೇ ರೀತಿಯಾದಂತಹ ಮಾತುಗಳನ್ನು ಹೇಳುತ್ತಿದ್ದಾರೆ. ಈ ಸಲದ ಬಿಗ್ ಬಾಸ್ ವಿನ್ನರ್ ಗಿಲ್ಲಿ ಅಂತ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.
ಗಿಲ್ಲಿ ಮನೆಯ ಒಳಗಡೆ ಕಾವ್ಯ ಅವರನ್ನು ಸೇಫ್ ಮಾಡುತ್ತಾ ಬರುತ್ತಿದ್ದಾರೆ ಅಂತ ಕೂಡ ಜನ ಮಾತನಾಡಿಕೊಳ್ಳುತ್ತಾರೆ. ಇನ್ನು ರಕ್ಷಿತಾ ಶೆಟ್ಟಿಯ ಪರವಾಗಿ ಗಿಲ್ಲಿ ಹಲವಾರು ಬಾರಿ ಮಾತನಾಡಿದ್ದಾರೆ. ರಕ್ಷಿತಾ ಗೆ ಯಾರಾದರೂ ಏನಾದರೂ ಹೇಳಿದ್ರೆ ಗಿಲ್ಲಿ ರಕ್ಷಿತಾ ಪರವಾಗಿ ನಿಲ್ಲುತ್ತಾರೆ. ಹೀಗಾಗಿ ಗ್ರಾಮೀಣ ಭಾಗದ ರಕ್ಷಿತಾ ಶೆಟ್ಟಿ ಜೊತೆ ಗಿಲ್ಲಿ ಅಭಿಮಾನಿಗಳು ಪೋಸ್ಟ್ ಗಳನ್ನು ಹಂಚಿಕೊಂಡಿರುತ್ತಾರೆ.
ಗಿಲ್ಲಿ ಹಲವಾರು ಬಾರಿ ನಾಟಕೀಯವಾಗಿ ಮನೆಯಲ್ಲಿ ಪ್ರತಿ ಬಾರಿಯೂ ಕೂಡ ಕಾಮಿಡಿ ತಮಾಷೆಗಳನ್ನು ಮಾಡುತ್ತಾರೆ. ಗಿಲ್ಲಿ ಯಾವತ್ತೂ ಕೂಡ ಹೆಚ್ಚಾಗಿ ಮನೆಯಲ್ಲಿ ಕೂಗಾಡಿದ್ದು ಯಾರೂ ಕೂಡ ನೋಡಲೇ ಇಲ್ಲ, ಯಾರಾದರೂ ಮಾತನಾಡುತ್ತಿದ್ದರೆ ಅಲ್ಲಿಗೆ ಹೋಗಿ ಗಿಲ್ಲಿ ತಮಾಷೆ ಮಾಡಿ ಕಾಲು ಎಳೆಯುತ್ತಾರೆ. ಇದರಿಂದ ಮನೆ ಮಂದಿ ಕಿರಿಕಿರಿ ಅನುಭವಿಸಿದ್ದೂ ಉಂಟು.
ಬಿಗ್ ಬಾಸ್ ಸೀಸನ್ 12 ರಲ್ಲಿ ಗಿಲ್ಲಿ ಕಾಮಿಡಿ ಇಲ್ಲವಾದಲ್ಲಿ ಮನೆಯಲ್ಲಿ ಫುಲ್ ಸೈಲೆಂಟ್ ಇರುತ್ತದೆ. ಗಿಲ್ಲಿಯಿಂದ ಮನೆಯವರೆಲ್ಲರೂ ಕೂಡ ನಗುತ್ತಾ ಕೆಲವೊಮ್ಮೆ ರಿಲಾಕ್ಸ್ ಆಗುತ್ತಾರೆ. ಗಿಲ್ಲಿ ತಮಾಷೆಯ ಮಾತುಗಳನ್ನಾಡಿ, ಮನೆಯ ಒಳಗಡೆ ನಗುತರಿಸುತ್ತಾರೆ. ತನ್ನ ಭಾಷೆ ಹಾಗೂ ಇಂಗ್ಲೀಷ್ ಸರಿಯಾಗಿ ಮಾತನಾಡಲು ಬರದೇ ಚಡಪಡಿಸುವ ಗಿಲ್ಲಿ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ. ಈ ಸಲದ ಬಿಗ್ ಬಾಸ್ ವಿನ್ನರ್ ಗಿಲ್ಲಿ ಆಗಬಹುದಾ..? ತಿಳಿಸಿ..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











