ಬ್ರೇಕಿಂಗ್ ನ್ಯೂಸ್
ಕಡಬಕರಾವಳಿಕರ್ನಾಟಕಧಾರ್ಮಿಕ

Kukke Subrahmanya: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪಸಂಸ್ಕಾರ ಮಾಡಿಸಿದ ನಯನತಾರಾ ದಂಪತಿ!

Kukke Subramanya: ಕಾಲಿವುಡ್‌ ಸೂಪರ್‌ ಸ್ಟಾರ್‌ ಖ್ಯಾತಿಯ ನಯನತಾರಾ ಹಾಗೂ ಪತಿ ವಿಘ್ನೇಶ್ ಶಿವನ್ ದಕ್ಷಿಣ ಕನ್ನಡದ ಖ್ಯಾತ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಗಂಡನ ಜೊತೆ ನಿಂತು ಪೂಜೆ ನೆರವೇರಿಸಿದ ನಟಿ ನಯನತಾರಾ..!

ಕಾಲಿವುಡ್‌ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಯನತಾರಾ ಹಾಗೂ ಪತಿ ವಿಘ್ನೇಶ್ ಶಿವನ್ ದೇವರ ದರ್ಶನ ಪಡೆದುಕೊಂಡು ನಂತರ ಸರ್ಪಸಂಸ್ಕಾರ ಪೂಜೆ ನೆರವೇರಿಸಿದರು.  ದಕ್ಷಿಣ ಭಾರತದ ಜನಪ್ರಿಯ ನಟಿ, ಕಾಲಿವುಡ್‌ ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಯನತಾರಾ ಬುಧವಾರ ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿ, ದೇವರ ದರ್ಶನ ಪಡೆದು ಪುನೀತರಾಗಿದ್ದಾರೆ. ಇಬ್ಬರು ದಂಪತಿಗಳು,  ಸರ್ಪಸಂಸ್ಕಾರ ಪೂಜೆಯಲ್ಲಿ ಭಾಗವಹಿಸಿ, ಕುಕ್ಕೆ ಸುಬ್ರಹ್ಮಣ್ಯ ದೇವರ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ದೇವಾಲಯದ ಅರ್ಚಕರು,  ದೇವಸ್ಥಾನ ಸಿಬ್ಬಂದಿ ದೇವರ  ಸೇವೆಗಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಿ ಸಹಕರಿಸಿದ್ದಾರೆ.

ಇದನ್ನೂ ಓದಿ: ನವೆಂಬರ್‌ 15 ರಿಂದ 19ರವರೆಗೆ ಧರ್ಮಸ್ಥಳ ಲಕ್ಷದೀಪೋತ್ಸವ!

ನಯನತಾರಾ ದಂಪತಿ ನೋಡಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಫ್ಯಾನ್ಸ್..!

ನಯನತಾರಾ ಅವರು ಮಲಯಾಳಂ ಚಿತ್ರರಂಗದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿ ತಮಿಳು, ತೆಲುಗು, ಹಾಗೂ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ತನ್ನ ಛಾಪು ಮೂಡಿಸಿದ ನಟಿ. ಇವರು ಆಯ್ಕೆ ಮಾಡುವ ಪಾತ್ರಗಳೇ ಬಹಳ ವಿಭಿನ್ನವಾಗಿರುತ್ತದೆ.  ಕೇವಲ ನಟನೆ ಮಾತ್ರವಲ್ಲದೆ,  ಸಾಮಾಜಿಕ ಸೇವಾ ಚಟುವಟಿಕೆಗಳಿಂದಲೂ ನಯನತಾರಾಅಭಿಮಾನಿಗಳ ಹೃದಯದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಇನ್ನು ಇವರ ಪತಿ  ವಿಘ್ನೇಶ್ ಶಿವನ್ ದಕ್ಷಿಣ ಭಾರತೀಯ ಚಿತ್ರರಂಗದ ಯಶಸ್ವಿ ನಿರ್ದೇಶಕ, ಹಲವು ಸೂಪರ್  ಹಿಟ್ ಚಿತ್ರಗಳನ್ನು ಡೈರೆಕ್ಟ್‌ ಮಾಡಿದ್ದಾರೆ.

ದೇವರ ದರ್ಶನ ಪಡೆದ ನಂತರ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ  ನಯನತಾರಾ ದಂಪತಿಗೆ  ಸ್ಮರಣಿಕೆ ನೀಡಿ, ಸನ್ಮಾನಿಸಿದ್ದಾರೆ. ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು, ನಯನತಾರಾ ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಬಂದು, ಈ ವೇಳೆ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಇನ್ನು

ಡಿ. 26 ಪ್ರಾತಃಕಾಲ ಕುಕ್ಕೆ  ಚಂಪಾಷಷ್ಠಿ ಮಹಾರಥೋತ್ಸವ..!

ಕುಕ್ಕೆಯಲ್ಲಿ ಚಂಪಾಷಷ್ಠಿ ಇದೇ ನವೆಂಬರ್ 16 ರಿಂದ ಉತ್ಸವಗಳು ಆರಂಭವಾಗಲಿದ್ದು, ನವೆಂಬರ್ 26: ಪ್ರಾತಃಕಾಲ ಚಂಪಾಷಷ್ಠಿ ಮಹಾರಥೋತ್ಸವ ನಡೆಯಲಿದೆ. ಉತ್ಸವಗಳ ವೇಳಾಪಟ್ಟಿಬಗ್ಗೆ ನೋಡೋದಾದ್ರೆ,  ನವೆಂಬರ್ 16 ರಂದು ಕೊಪ್ಪರಿಗೆ ಏರುವುದು, ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ, ನವೆಂಬರ್ 17 ರಂದು ರಾತ್ರಿ ಶೇಷವಾಹನ ಬಂಡಿ ಉತ್ಸವ, ನವೆಂಬರ್ 18 ರಂದು ರಾತ್ರಿ ಶೇಷವಾಹನ ಬಂಡಿ ಉತ್ಸವ, ನವೆಂಬರ್ 19 ರಂದು ಲಕ್ಷ ದೀಪೋತ್ಸವ, ನವೆಂಬರ್ 20 ರಂದು ರಾತ್ರಿ ಶೇಷವಾಹನೋತ್ಸವ,ನವೆಂಬರ್ 21 ರಂದುರಾತ್ರಿ ಅಶ್ವವಾಹನೋತ್ಸವ, ನವೆಂಬರ್ 22ರಂದು  ರಾತ್ರಿ ಮಯೂರ ವಾಹನೋತ್ಸವ, ನವೆಂಬರ್ 23 ರಂದು ರಾತ್ರಿ ಶೇಷವಾಹನೋತ್ಸವ,  ನವೆಂಬರ್ 24 ರಂದು ಹೂವಿನ ತೇರಿನ ಉತ್ಸವ, ನವೆಂಬರ್ 25 ರಂದು ರಾತ್ರಿ ಪಂಚಮಿ ರಥೋತ್ಸವ, ತೈಲಾಭ್ಯಂಜನ, ನವೆಂಬರ್ 26 ರಂದು ಪ್ರಾತಃಕಾಲ ಚಂಪಾಷಷ್ಠಿ ಮಹಾರಥೋತ್ಸವ, ನವೆಂಬರ್ 27 ರಂದು ದೇವರ ನೌಕಾವಿಹಾರ, ಡಿಸೆಂಬರ್ 2 ರಂದು ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ, ದೈವಗಳ ನಡಾವಳಿ ನಡೆಯಲಿದೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 171

You cannot copy content of this page