Delhi : ದೆಹಲಿ ಬಾಂಬ್ ಸ್ಪೋಟದ ಕಾರ್ ನಲ್ಲಿ ಸ್ಪೋಟಗೊಂಡ ಡಾ. ಉಮರ್ ಎಂಬಾತ ಸತ್ತಿರುವುದು ದೃಢವಾಗಿದೆ. ಆತನ ಡಿಎನ್ಎ ಹಾಗೂ ತಾಯಿಯ ಡಿಎನ್ಎ ಒಂದೇ ರೀತಿ ಇರುವುದರಿಂದ ಆತ ಮೃತಪಟ್ಟಿರುವುದು ಖಚಿತವಾಗಿದ್ದು, ಸಾಯುವ ಮುನ್ನ ಡಾ. ಉಮರ್ ಮಸೀದಿಗೆ ತೆರಳಿದ್ದ ಎನ್ನುವ ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿವೆ.
ಮಸೀದಿಗೆ ತೆರಳಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆ ;
ಈತ ಕೆಂಪುಕೋಟೆಗೂ ಬರುವ ಮುನ್ನ ದೆಹಲಿಯನ್ನೇ ಸುತ್ತಿದ್ದ. ಅಲ್ಲದೇ ಸ್ಪೋಟಕ್ಕೂ ಮುನ್ನ ಮಸೀದಿಯಲ್ಲಿ ನಮಾಜ್ ಮಾಡಿದ್ದ ಈ ಉಗ್ರ ನ.10 ಮಧ್ಯಾಹ್ನ 3.19 ಕ್ಕೆ ಸುನೇರಿ ಮಸೀದಿಗೆ ತೆರಳಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಅದೇ ಮಸೀದಿಯಲ್ಲಿ ಆತ 3 ಗಂಟೆಗಳ ಕಾಲ ಸಮಯ ಕಳೆದಿದ್ದ ಎಂದು ವರದಿಯಾಗಿವೆ. ಜೊತೆಗೆ ಶಾಹೀನ್ ಎಂಬಾಕೆಯ ಮೊಬೈಲ್ ನಲ್ಲಿ ಕೆಲವು ಕೋಡ್ ವರ್ಡ್ ಗಳು ಪತ್ತೆಯಾಗಿದ್ದು. ಏನೇ ಸಂದೇಶಗಳಿದ್ದರೂ ಈ ಕೋಡ್ ವರ್ಡ್ ಮುಖಾಂತರ ಸಂದೇಶ ರವಾನೆಯಾಗುತ್ತಿದ್ದವು. ಈ ನಿಗೂಢ ಸಂದೇಶದ ಸಂಪೂರ್ಣ ಮಾಹಿತಿಯನ್ನು ಈಗ ಕಲೆ ಹಾಕುವ ಉದ್ದೇಶದಿಂದ ಎನ್ ಐಎ ಪೋಲಿಸರ ತಂಡ ಕಾರ್ಯ ನಿರ್ವಹಿಸುತ್ತಿದೆ. ಈ ಹಿನ್ನಲೆ ಈ ಭಯೋತ್ಪಾದನಾ ಕೃತ್ಯಕ್ಕೆ ಭಾರತಕ್ಕೆ ತನಿಖೆಯನ್ನು ಮುಂದುವರೆಸಲು ಹಾಗೂ ಸಹಾಯ ಮಾಡಲು ಅಮೇರಿಕ ಸಿದ್ಧವಿದೆ ಎಂದು ತಿಳಿಸಿರುತ್ತದೆ.
ಜೊತೆಗಿದ್ದ ಕೆಂಪು ಕಾರು ಧಿಡೀರನೆ ನಾಪತ್ತೆ ;
ಇತ್ತೀಚೆಗೆ ನಡೆದ ಬಿಳಿ ಕಾರು ಸ್ಪೋಟದಲ್ಲಿ ಅಲ್ಲೇ ಜೊತೆಗಿದ್ದ ಕೆಂಪು ಕಾರು ಧಿಡೀರನೆ ನಾಪತ್ತೆಯಾಗಿತ್ತು. ಶಂಕಿತ ಉಗ್ರರು ಎರಡು ಕಾರನ್ನು ಬಳಕೆ ಮಾಡಿದ್ದೆನ್ನಲಾಗಿದೆ. ಅಲ್ಲದೇ, ಕಾಣೆಯಾದ ಅದೇ ಕೆಂಪು ಕಾರು ಹರಿಯಾಣದಲ್ಲಿ ಪತ್ತೆಯಾಗುತ್ತದೆ. ಸಮಾಜ ಸೇವೆ ಮಾಡಬೇಕಿದ್ದ ವೈದ್ಯರ ಈ ಒಂದು ಸಮೂಹವನ್ನು ಭಯೋತ್ಪಾದನಾ ತಂಡವು ಸ್ಪೋಟಕ ತಯಾರಿಕೆ ಹಾಗೂ ಅದರ ಬಳಕೆಗೆ ಅಣಿಗೊಳಿಸುತ್ತಿರುವುದು ವಿಪರ್ಯಾಸವೆಂದರೆ ತಪ್ಪಾಗಲಾರದು.
ಇದನ್ನೂ ಓದಿ : Menstrual Leave: ಮಹಿಳಾ ನೌಕರರಿಗೆ ತಿಂಗಳಿಗೆ 1 ದಿನ ಋತುಚಕ್ರದ ರಜೆ, ಕಂಡೀಷನ್ಸ್ ಏನು..?
……….
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/qKJ1lviMpOM?si=KgR8jnMCafiSAL7b











