ಬ್ರೇಕಿಂಗ್ ನ್ಯೂಸ್
ಕರ್ನಾಟಕ

Meghana Raj Sarja: ಕಾಲಿವುಡ್‌ ಗೆ ಕಂಬ್ಯಾಕ್ ಆದ ನಟಿ ಮೇಘನಾ ರಾಜ್‌..!

Meghana Raj Sarja: ಕನ್ನಡ ಚಿತ್ರರಂಗದ ಖ್ಯಾತ ನಟಿ, ಮೇಘನಾರಾಜ್‌ ಸೂಪರ್‌ ಸ್ಟಾರ್‌ ರಜನಿಕಾಂತ್‌ ನಟನೆಯ  ಜೈಲರ್ -2 ಸಿನಿಮಾ ಮೂಲಕ ಕಾಲಿವುಡ್‌ ಗೆ ಎಂಟ್ರಿಯಾಗಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಬಂಗ್ಲೆಗುಡ್ಡೆ ಬುರುಡೆ ರಹಸ್ಯ ಪ್ರಕರಣ..ಅಫಿಡೆವಿಟ್ ನಲ್ಲಿ ಏನೇನಿದೆ..?

ಬಹುಭಾಷಾ ನಟಿಗೆ ಅವಕಾಶಗಳು ಹೆಚ್ಚು!

ಕಾಲಿವುಡ್ ಚಿತ್ರರಂಗದಲ್ಲಿ ಮಿಂಚಲು ಸಜ್ಜಾಗಿರುವ ಮೇಘನಾ ರಾಜ್‌,  ಬಹುಭಾಷಾ ನಟಿ ಈಗ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗುವತ್ತ ಚಿತ್ತ ನೆಟ್ಟಿದ್ದಾರೆ. ಕಾಲಿವುಡ್‌ ಸೂಪರ್ ಸ್ಟಾ‌ರ್ ನಟನ ಸಿನಿಮಾದಲ್ಲಿ ಕನ್ನಡದ ಮೇಘನಾ ರಾಜ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಮಾಹಿತಿ ಇದೆ. 2012ರಲ್ಲಿ ಮೇಘನಾ ರಾಜ್ ತಮಿರಿಸ ನಂದ ನಂದಿತ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಕಾಲಿವುಡ್‌ ಗೆ ಮತ್ತೆ ಕಂಬ್ಯಾಕ್‌ ಆಗುತ್ತಿದ್ದಾರೆ. ನಟಿ ಮೇಘನಾ ರಾಜ್ ಅಭಿನಯದ ಇರುವುದೆಲ್ಲವ ಬಿಟ್ಟು ಚಿತ್ರದ ಅಭಿನಯಕ್ಕೆ ರಾಜ್ಯ ಸರ್ಕಾರ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ಅದೇ ರೀತಿನೇ ತತ್ಸಮ ತದ್ಭವ ಚಿತ್ರದಲ್ಲಿ ಎರಡು ರೋಲ್ ಮಾಡಿದ್ದಾರೆ. ಎರಡೂ ಪಾತ್ರವೂ ಬಹಳ ವಿಶೇಷವಾಗಿದೆ, ಜನರು ಈ ಚಿತ್ರವನ್ನು ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ : ಪ್ರಯಾಣಿಕರನ್ನು ಆಕರ್ಷಿಸುತ್ತಿದೆ ಫ್ಲೈ ಬಸ್…!

ಸಾಲು ಸಾಲು ಸಿನಿಮಾಗಳಲ್ಲಿ ಮೇಘನಾ ರಾಜ್‌ !

ತನ್ನ ವೈಯಕ್ತಿಕ ಜೀವನದಲ್ಲಿ ಬಿಝಿಯಾಗಿದ್ದ ಮೇಘನಾ ರಾಜ್‌ ತನ್ನ ಮಗನ ಜೊತೆಗೆ ಹೆಚ್ಚಾಗಿ ಕಾಲ ಕಳೆಯುತ್ತಾರೆ.  ತನ್ನದೇ ಆದಂತಹ ಯೂಟ್ಯೂಬ್‌ ಚಾನಲ್‌ ಕೂಡ ಹೊಂದಿರುವ ನಟಿ ಈಗ ಮತ್ತೆ ಬಣ್ಣದ ಲೋಕದತ್ತ ಹೆಜ್ಜೆ ಇಡುತ್ತಿರುವುದು ಇವರ ಅಭಿಮಾನಿಗಳಿಗೆ ಸಂತಸ ತಂದಿದೆ. ಇತ್ತೀಚೆಗೆ ಮೇಘನಾ  ತತ್ಸಮ ತದ್ಭವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.  ಇವರ ಅಭಿನಯಕ್ಕೆ ಜನ ಶ್ಲಾಘನೆ ವ್ಯಕ್ತಪಡಿಸಿದ್ದರು. ಬುದ್ಧಿವಂತ 2 ಸಿನಿಮಾದಲ್ಲೂ ಮೇಘನಾ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಮಾಲಿವುಡ್‌ಗೂ ಮರಳಿದ್ದು, ಸುರೇಶ್ ಗೋಪಿ ಅವರ ‘ಒಟ್ಟಕೊಂಬನ್ ಚಿತ್ರದಲ್ಲಿ  ಕಾಣಿಸಿಕೊಳ್ಳಲಿದ್ದಾರೆ.  ಇನ್ನು ಕಳೆದ ಕೆಲ ದಿನಗಳ ಹಿಂದೆಯೇ ಅವರು ‘ಜೈಲರ್ -2’ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಇದೆ. ರಮ್ಯಾ ಕೃಷ್ಣನ್, ಯೋಗಿ ಬಾಬು, ಮಿರ್ನಾ, ಶಿವರಾಜ್‌ಕುಮಾ‌ರ್, ಮೋಹನ್ ಲಾಲ್ ಅವರು ತಮ್ಮ ಪಾತ್ರಕ್ಕೆ ಮರಳಿದ್ದಾರೆ.

ಇದನ್ನೂ ಓದಿ: ಉಪೇಂದ್ರ ದಂಪತಿ ಫೋನ್​​​ ಹ್ಯಾಕ್ – ಬಿಹಾರ ಮೂಲದ​ ಯುವಕನ ಬಂಧನ

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page