ಬ್ರೇಕಿಂಗ್ ನ್ಯೂಸ್
ಕರಾವಳಿಕರ್ನಾಟಕಬೆಳ್ತಂಗಡಿಮಂಗಳೂರು

Belthangady: ಬಂಗ್ಲೆಗುಡ್ಡೆ ಬುರುಡೆ ರಹಸ್ಯ ಪ್ರಕರಣ..ಅಫಿಡೆವಿಟ್ ನಲ್ಲಿ ಏನೇನಿದೆ..?

Belthangady: ಬಂಗ್ಲೆಗುಡ್ಡೆ ಬುರುಡೆ ರಹಸ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಗೆ ಸರಕಾರದಿಂದ ಅಫಿಡೆವಿಟ್  ಸಲ್ಲಿಕೆ ಮಾಡಲಾಗಿದೆ.

ಅಫಿಡೆವಿಟ್‌ ನಲ್ಲಿ ಏನೇನಿದೆ..?
ಬಂಗ್ಲೆಗುಡ್ಡೆ ಬುರುಡೆ ರಹಸ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ SIT ತನಿಖೆಗೆ ಸಹಕರಿಸಿದರೆ ಬಂಧನವಿಲ್ಲ. ಅರ್ಜಿದಾರರು ಆರೋಪಿಗಳಲ್ಲ ಎಂದು ಸರ್ಕಾರದಿಂದ ಸ್ಪಷ್ಟನೆ ನೀಡಿದೆ.  ನಾವು ಚಿನ್ನಯ್ಯ ನೀಡಿದ ದೂರನ್ನು ಮೀರಿ ತನಿಖೆ ನಡೆಸುತ್ತಿದ್ದೇವೆ ಎಂದು ಸರಕಾರ ಹೇಳಿದೆ.  ಕರ್ನಾಟಕ ಹೈಕೋರ್ಟ್ ನಲ್ಲಿ ತಿಮರೋಡಿ ಟೀಮ್ ನ ರಿಟ್ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್‌ ತಿಮರೋಡಿ ಟೀಮ್ ಸಲ್ಲಿಸಿದ್ದ ರಿಟ್ ಅರ್ಜಿ ವಿರುದ್ಧಸರ್ಕಾರ ಆಕ್ಷೇಪಣೆ ಸಲ್ಲಿಸಿದೆ.

ಸರ್ಕಾರ ಹೈ ಕೋರ್ಟ್ ಗೆ ಸಲ್ಲಿಸಿರೋ ಅಫಿಡವಿಟ್ ನಲ್ಲಿ ಪ್ರಕರಣದ ಮಾಹಿತಿ ನೀಡಲಾಗಿದ್ದು,  SIT ತನಿಖೆಗೆ ಸಹಕರಿಸಿದರೆ ಬುರುಡೆ ಗ್ಯಾಂಗ್ ಗೆ ಯಾವುದೇ ಬಂಧನ ಭೀತಿ ಬೇಡ,ಮೂಲ ದೂರನ್ನು ಮೀರಿ SIT ತನಿಖೆ ನಡೆಯುತ್ತಿದೆ. ನಾವು ಚಿನ್ನಯ್ಯ ನೀಡಿದ ದೂರನ್ನು ಮೀರಿ ತನಿಖೆ ನಡೆಸುತ್ತಿದ್ದೇವೆ ಎಂದು ಸರ್ಕಾರ ತಿಳಿಸಿದೆ.  ಹೈಕೋರ್ಟ್‌ ರಿಟ್‌ ಪ್ರೊಸೀಡಿಂಗ್ಸ್‌ ರೂಲ್ಸ್‌ ನ ನಿಯಮ 21ರ ಅಡಿಯಲ್ಲಿ  ಸರ್ಕಾರ ಆಕ್ಷೇಪಣೆ ಸಲ್ಲಿಸಿದೆ.  ಸರ್ಕಾರ ಸಂವಿಧಾನದ ಆರ್ಟಿಕಲ್‌ 226 ಮತ್ತು 227ರ ಅಡಿಯಲ್ಲಿ ತಿಮರೋಡಿ ಟೀಮ್ ಸಲ್ಲಿಸಿರುವ ಆಕ್ಷೇಪಣೆಗಳನ್ನು ರದ್ದುಪಡಿಸುವಂತೆ ಮನವಿ ಸಲ್ಲಿಸಿದೆ.

ಇದನ್ನೂ ಓದಿ: ಬೀದಿ ನಾಯಿಗಳ ಸಮಸ್ಯೆಗೆ ಶೀಘ್ರ ಕಾರ್ಯ ಆರಂಭ…!

ಅರ್ಜಿದಾರರು ವಾಸ್ತವಾಂಶಗಳನ್ನು ಮರೆಮಾಚುತ್ತಿದ್ದಾರೆ ಮತ್ತು ಕಾನೂನುಬದ್ಧ ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ ಎಂದು ವಾದ ನಡೆಯಿತು.  ಬಿಎನ್‌ ಎಸ್‌ ಎಸ್‌ ಸೆ. 35(3) ಅಡಿಯಲ್ಲಿ ವಿಚಾರಣೆಗೆ ನೋಟಿಸ್‌ ನೀಡಲಾಗಿದ್ದು,  ಅರ್ಜಿದಾರರನ್ನ ತಕ್ಷಣಕ್ಕೆ ಬಂಧಿಸುವ ಅಗತ್ಯ ಇಲ್ಲ ಎಂದು ಸರ್ಕಾರದಿಂದ ಸ್ಪಷ್ಟನೆ ಸಿಕ್ಕಿದೆ.  SIT ತನಿಖೆಗೆ ಸಹಕರಿಸಿದರೆ ಅರ್ಜಿದಾರರು ಬಂಧನ ಭೀತಿ ಎದುರಿಸಬೇಕಿಲ್ಲ, ಅಸಹಕಾರ ತೋರಿದರೆ ಮಾತ್ರ ಬಂಧನ ಭೀತಿ ಎದುರಿಸಬೇಕಾಗುತ್ತದೆ. ಒಂದು ವೇಳೆ ಬಂಧನ ಭೀತಿ ಎದುರಾದರೆ ನಿರೀಕ್ಷಣಾ ಜಾಮೀನು ಪಡೆಯಲು ಅವಕಾಶ ಇದೆ ಎಂದು ಸರಕಾರ ಸ್ಪಷ್ಟನೆ ನೀಡಿದೆ.  ಸರ್ಕಾರದಿಂದ ರಚನೆಯಾದ SIT ಚಿನ್ನಯ್ಯ ನೀಡಿದ ಮೂಲ ದೂರಿಗೆ ಮಾತ್ರ ಸೀಮಿತವಾಗಿಲ್ಲ. ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತು ಹಾಕಿರುವ ಪ್ರಕರಣಗಳ ತನಿಖೆಯನ್ನೂ ಒಳಗೊಂಡಿದೆ. ಇತ್ತೀಚೆಗೆ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಪತ್ತೆಯಾದ ಮೂಳೆ ಮತ್ತು ತಲೆಬುರುಡೆಗಳು SIT ತನಿಖಾ ವ್ಯಾಪ್ತಿಯನ್ನು ವಿಸ್ತರಿಸಿವೆ. DGP ಪ್ರಣಬ್‌ ಮೊಹಂತಿ ನೇತೃತ್ವದ SITತನಿಖೆ ಪಾರದರ್ಶಕವಾಗಿದೆ. ನೇತ್ರಾವತಿ ಸ್ನಾನಘಟ್ಟದಲ್ಲಿ ಮ್ಯಾಜಿಸ್ಟ್ರೇಟ್‌ ಮತ್ತು ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಿದ ಸ್ಥಳ ಪರಿಶೋಧನೆ ಪಾರದರ್ಶಕವಾಗಿದೆ.

DNA ಮತ್ತು ಮಣ್ಣು ಪರೀಕ್ಷೆಯ ವರದಿ ನಿರೀಕ್ಷಿಸಲಾಗುತ್ತಿದೆ!!

ಈ ಸಂದರ್ಭದಲ್ಲಿ ವೀಡಿಯೋ ಮಾಡಲಾಗಿದೆ, ದೂರುದಾರರ ವಕೀಲರೂ ಹಾಜರಿದ್ದರು ಎಂಬ ಅಂಶವನ್ನೂ ಸರ್ಕಾರ ಉಲ್ಲೇಖಿಸಿದೆ. ಆದರೆ, ನಂತರದ ಬೆಳವಣಿಗೆಗಳಲ್ಲಿ ಚಿನ್ನಯ್ಯ ತಪ್ಪೊಪ್ಪಿಕೊಂಡಿದ್ದಾನೆ.ಅರ್ಜಿದಾರರ ಅಣತಿಯಂತೆ ಹೇಳಿಕೆ ನೀಡಿದ್ದಾಗಿ 183 ಅಡಿಯಲ್ಲಿ ಮ್ಯಾಜಿಸ್ಟ್ರೇಟ್‌ ಎದುರು ಹೇಳಿಕೆ ದಾಖಲಿಸಿದ್ದಾನೆ. ಆಗ ತಂದೊಪ್ಪಿಸಿದ ತಲೆ ಬುರುಡೆಯನ್ನೂ ಬೇರೊಬ್ಬರು ತನಗೆ ನೀಡಿದ್ದಾಗಿ ತಿಳಿಸಿದ್ದಾನೆ. DNA ಮತ್ತು ಮಣ್ಣು ಪರೀಕ್ಷೆಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ,  ಚಿನ್ನಯ್ಯನನ್ನು ಆಗಸ್ಟ್‌ 23ರಂದು ಬಂಧಿಸಲಾಗಿತ್ತು. ಆಕ್ಷೇಪಣೆಯಲ್ಲಿ ಅರ್ಜಿದಾರರು ಆರೋಪಿಗಳಲ್ಲ ಎಂದು ಸರ್ಕಾರದಿಂದ ಸ್ಪಷ್ಟನೆ ನೀಡಲಾಗಿದೆ.  ಎಫ್‌ಐರ್‌ನಲ್ಲಿ ಎಲ್ಲಿಯೂ ಆರೋಪಿಗಳು ಎಂದು ಹೇಳಿಲ್ಲ, ತನಿಖೆಗೆ ಸಹಕರಿಸುವಂತೆ ಮಾತ್ರ ಕೇಳಲಾಗಿದೆ. ತನಿಖೆಗಾಗಿ ಸಾಕಷ್ಟು ಸಾರ್ವಜನಿಕ ಸಂಪನ್ಮೂಲವನ್ನು ಖರ್ಚು ಮಾಡಲಾಗಿದೆ. ತನಿಖೆ ತಾರ್ಕಿಕ ಅಂತ್ಯ ಕಾಣಲು ಅವಕಾಶ ಮಾಡಿಕೊಡಬೇಕೆಂದು ಸರ್ಕಾರ ಘನ ನ್ಯಾಯಾಲಯವನ್ನು ಕೋರಿದೆ ಎಂದು ಅಫಿದವಿತ್ ಸಲ್ಲಿಸಲಾಗಿದೆ.

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 172

You cannot copy content of this page