Bangalore : ಇತ್ತೀಚಿನ ದಿನಗಳಲ್ಲಿ ವಾಹನ ಸವಾರರು ಮೊಬೈಲ್ ಜೊತೆ ವೀಡಿಯೋ ಮಾಡಿಕೊಂಡು ಅಪ್ಲೋಡ್ ಮಾಡ್ತಾ ಸಂಭ್ರಮಿಸೊದನ್ನು ಕಾಣ್ತೇವೆ. ಇದರಲ್ಲಿ ಪ್ರಾಣಾಪಾಯ ಇದ್ರೂ ರೀಲ್ಸ್ ನ ಹುಚ್ಚಾಟದಲ್ಲಿ ಏನೇನೋ ಸಾಹಸ ಮಾಡಲು ಹೊರಡ್ತಾರೆ. ಆದ್ರೆ ಇದೀಗ ಸುದ್ದಿಯಲ್ಲಿರುವ ಬಿಗ್ ಬಾಸ್ ಮಾಜಿ ಸ್ಪರ್ಧಿ ಸಮೀರ್ ಆಚಾರ್ಯ ಪತ್ನಿ ಕಾರು ಚಲಿಸುವಾಗ ಮಗು ಕಾರು ಚಲಿಸುವಾಗ ಸನ್ ರೂಫ್ ತೆಗೆದು ಹೊರ ನಿಂತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರಿಗೆ ಇಲಾಖೆಯು ಈ ವಿಡಿಯೋವನ್ನು ಹಂಚಿಕೊಂಡು ಇದು ಶಿಕ್ಷಾರ್ಹ ಅಪರಾಧ ಎಂದು ಎಚ್ಚರಿಕೆ ನೀಡಿದೆ.
ಸನ್ ರೂಫ್ ಕಾರುಗಳಲ್ಲಿ ಈಗ ಸಾಮಾನ್ಯವಾಗಿದ್ದರೂ, ಚಲಿಸುವ ವಾಹನದ ಸನ್ ರೂಫ್ ನಿಂದ ಹೊರಗೆ ನಿಲ್ಲುವುದು ಕಾನೂನುಬಾಹಿರ ಮತ್ತು ಅಪಾಯಕಾರಿ ಎಂದು ಸಂಚಾರ ಪೊಲೀಸರು ಎಚ್ಚರಿಸಿದ್ದಾರೆ. ಮೋಟಾರ್ ವೆಹಿಕಲ್ಸ್ ಕಾಯ್ದೆಯ ಪ್ರಕಾರ, ಇದು ಅಪರಾಧವಾಗಿದ್ದು, ದಂಡ ಮತ್ತು ತನಿಖೆಗೆ ಕಾರಣವಾಗಬಹುದು. ಸನ್ ರೂಫ್ ನ ಮೂಲ ಉದ್ದೇಶ ಸೂರ್ಯನ ಬೆಳಕನ್ನು ಒಳಗೆ ಬಿಡುವುದು, ಆದರೆ ಹೊರಗೆ ನಿಲ್ಲುವುದರಿಂದ ಇತರರಿಗೆ ತೊಂದರೆಯಾಗಬಹುದು ಮತ್ತು ಅಪಘಾತಗಳಿಗೆ ಕಾರಣವಾಗಬಹುದು ಹಾಗಾಗಿ ವಾಹನ ಸವಾರರು ಆದಷ್ಟು ಎಚ್ಚರ ವಹಿಸುವುದು ಉತ್ತಮ ಎಂದು ಹೇಳಲಾಗಿದೆ.
ಹಾಗೆಯೇ, ಸಾರಿಗೆ ಇಲಾಖೆಯಿಂದ ಸಮೀರ್ ಆಚಾರ್ಯ ಪತ್ನಿ ಶ್ರಾವಣಿ ಹಾಗೂ ಮಗು ಕಾರಿನಲ್ಲಿ ಸಂಚರಿಸುವ ವಿಡಿಯೋ ಹಾಕಿ ಕಾರ್‌ನ ವೆಂಟಿಲೇಷನ್ ತೆಗೆದು ಮಕ್ಕಳನ್ನು ಮೇಲೆ ನಿಲ್ಲಿಸಿ, ವಾಹನ ಚಲಾಯಿಸುವುದು ಶಿಕ್ಷಾರ್ಹ ಅಪರಾಧ ಮತ್ತು ಕಾನೂನಿನ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ. ಕೇವಲ ವೀಡಿಯೋ ತೆಗೆಯುವ ಆಸಕ್ತಿಯಿಂದ ಮಕ್ಕಳ ಮೇಲೆ ಆಗುವ ಪರಿಣಾಮಗಳ ಬಗ್ಗೆ ಯೋಚನೆಯೇ ಇರುವುದಿಲ್ಲ.
ಪ್ರಸ್ತುತ ಭಾರತದಲ್ಲಿ ಸನ್ ರೂಫ್ ಹೊಂದಿರುವ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹಿಂದೆ ದುಬಾರಿ ಕಾರುಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ಈ ಸೌಲಭ್ಯ, ಈಗ ಹ್ಯಾಚ್‌ಬ್ಯಾಕ್ ಮತ್ತು ಎಸ್‌ಯುವಿ ಕಾರುಗಳಲ್ಲೂ ಲಭ್ಯವಿದೆ. ಆಧುನಿಕ ಕಾರುಗಳಲ್ಲಿ ಹಲವು ಹೊಸ ಫೀಚರ್‌ಗಳೊಂದಿಗೆ ಸನ್ ರೂಫ್ ಕೂಡ ಒಂದು ಜನಪ್ರಿಯ ಆಯ್ಕೆಯಾಗಿದೆ. ಆದರೆ, ಅನೇಕರು ಸನ್ ರೂಫ್ ನ ನಿಜವಾದ ಉಪಯೋಗವನ್ನು ಅರಿಯದೆ, ಕೇವಲ ಕಾರು ಚಲಿಸುವಾಗ ಹೊರಗೆ ನಿಲ್ಲಲು ಇದನ್ನು ಬಳಸುತ್ತಾರೆ. ಇದು ಅತ್ಯಂತ ಅಪಾಯಕಾರಿ ಅಭ್ಯಾಸ ಎಂದು ಸಂಚಾರ ಪೊಲೀಸರು ಸ್ಪಷ್ಟನೆ ನೀಡಿದ್ದು, ವೀಡಿಯೋ ಚಿತ್ರೀಕರಣಕ್ಕೋಸ್ಕರ ಅಥವ ಮೋಜು ಮಸ್ತಿಗಾಗಿ ಇದನ್ನು ಬಳಸಬೇಡಿ ಎಂದು ಖಡಕ್ ಆಗಿ ಎಚ್ಚರಿಕೆ ನೀಡಿರುತ್ತದೆ.
ಇದನ್ನೂ ಓದಿ :ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ನಿಧನ
……..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/Bd7Ce8dJBm0?si=PVqCd6an2dgXSUwk











