karkala:ಕಾರ್ಕಳದಲ್ಲಿ ನಡೆಯುತ್ತಿರುವ ಅಕ್ರಮ ಗೋಕಳ್ಳತನವನ್ನು ಶಾಸಕ ಸುನಿಲ್ ಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.
ಶಿರ್ಲಾಲಿನಲ್ಲಿ ಬಡ ಹೈನುಗಾರ್ತಿ ಮಹಿಳೆಗೆ ಮಾರಕಾಯುಧ ತೋರಿಸಿ ಗೋ ಕಳ್ಳತನ ಮಾಡಲಾಗಿದೆ.ನಲ್ಲೂರಿನಲ್ಲಿ ಅಕ್ರಮ ಕಸಾಯಿಖಾನೆ ಇರುವುದು ಪತ್ತೆಯಾಗಿದೆ.ತೆಳ್ಳಾರಿನಲ್ಲಿ ಕಾಡುಪ್ರಾಣಿ ಮಾಂಸ ಸಿಕ್ಕಿದೆ. ಇವೆಲ್ಲವೂ ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕರಾಳ ಮುಖದ ನಿಜ ಸ್ವರೂಪ.ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೋಹತ್ಯೆಯಂತಹ ಎಲ್ಲಾ ಘಟನೆಗಳನ್ನು ತೀವ್ರವಾಗಿ ಖಂಡಿಸಿರುವ ಸುನಿಲ್ ಕುಮಾರ್, ತಾಲೂಕಲ್ಲಿ ನಡೆದ ಮೂರು ಪ್ರಕರಣ ಸಹಿತ,ಹಲವು ಪ್ರಕರಣಗಳ ಆರೋಪಿಗಳು ಎಲ್ಲರೂ ಕೂಡ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡಿದವರಾಗಿದ್ದಾರೆ. ಕಾಂಗ್ರೆಸ್ ಅಕ್ರಮ ಗೋಹತ್ಯೆ ದಂಧೆಯಲ್ಲಿ ಹಣ ಮಾಡಿ ಚುನಾವಣೆಯ ಖರ್ಚಿಗೆ ಬಳಸುತ್ತದೆ. ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಆಕ್ರಮ ಗೋಹತ್ಯೆ ಮಾಡುವ ಆರೋಪಿಗಳಿಂದ ಕಾಂಗ್ರೆಸ್ ಚುನಾವಣಾ ಖಾತೆಗೆ ದೊಡ್ಡ ಪ್ರಮಾಣದಲ್ಲಿ ಹಣ ಹರಿದು ಬರುತ್ತಿದೆ. ಎಂಬ ಅನುಮಾನ ಮೂಡೋದಿಕ್ಕೆ ಶುರುವಾಗಿದೆ..ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ತಮ್ಮದೇ ಸರಕಾರ ಎಂಬ ಕಾರಣಕ್ಕೆ ಕಿಡಿಗೇಡಿಗಳು ಭಯವಿಲ್ಲದೆ ಪ್ರತಿನಿತ್ಯ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಈ ಕಾರಣದಿಂದ ಮನೆ ಮನೆಗೆ ನುಗ್ಗಿ ಗೋ ಕಳ್ಳತನ, ಗೋಹತ್ಯೆ ಹಾಗೂ ಪ್ರಾಣಿ ವಧೆ ಯಾವುದೇ ಮುಲಾಜಿಲ್ಲದೆ ನಡೆಯುತ್ತಿದೆ ಎಂದು ಸುನಿಲ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.ಹಟ್ಟಿಯಲ್ಲಿರುವ ದನಗಳು ಮಾತ್ರವಲ್ಲದೆ ಕಾಡುಪ್ರಾಣಿಗಳನ್ನು ಹಂತಕರು ಬಿಡುತ್ತಿಲ್ಲ.ಇಂತವರನ್ನು ಕಾಂಗ್ರೆಸ್ ಸರಕಾರವೇ ರಕ್ಷಣೆ ಮಾಡುತ್ತಿದೆ ಎಂಬ ಅನುಮಾನವನ್ನು ಸುನಿಲ್ ಕುಮಾರ್ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಕಾಂಗ್ರೆಸ್ ಮುಖಂಡರ ಬೆಂಬಲ
ಸ್ಥಳೀಯ ಕಾಂಗ್ರೆಸ್ ಮುಖಂಡರ ಬೆಂಬಲವಿಲ್ಲದೇ ಈ ಕೃತ್ಯ ನಡೆಯಲು ಸಾಧ್ಯವಿಲ್ಲ,ಸರಕಾರ ಮತ್ತು ಜಿಲ್ಲಾಡಳಿತ ಇಂತಹ ಕೃತ್ಯದಲ್ಲಿ ತೊಡಗಿಸಿಕೊಂಡಿರುವವರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಬೇಕು.ಅಪರಾಧಿಗಳ ವಿರುದ್ದ ತಕ್ಷಣ ಕ್ರಮ ಕೈಗೊಳ್ಳದಿದ್ದರೆ.ದೊಡ್ಡ ಪ್ರಮಾಣದ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಶಾಸಕ ಸುನಿಲ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:Crop Insurance : 20 ದಿನದಲ್ಲಿ ರೈತರ ಖಾತೆಗೆ ಜಮೆಯಾಗಲಿದೆ ಬೆಳೆ ವಿಮೆ..
………………………………………………………………………………………………………
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಚಾನಲ್ ಕ್ಲಿಕ್ ಮಾಡಿ:https://www.youtube.com/@tulutimess











