ಬ್ರೇಕಿಂಗ್ ನ್ಯೂಸ್
ಕರ್ನಾಟಕ

ಉಪೇಂದ್ರ ದಂಪತಿ ಫೋನ್​​​ ಹ್ಯಾಕ್ – ಬಿಹಾರ ಮೂಲದ​ ಯುವಕನ ಬಂಧನ

Sandalwood Star ಉಪೇಂದ್ರ ದಂಪತಿ ಫೋನ್​​​ ಹ್ಯಾಕ್ ಮಾಡಿದ್ದ ಆರೋಪಿ ಅರೆಸ್ಟ್ ಆಗಿದ್ದಾನೆ. ಕರ್ನಾಟಕ ಪೊಲೀಸರು ಬಿಹಾರಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲಿ ನಡೆಯುತ್ತಿದ್ದ ಆನ್‌ಲೈನ್‌ ಫ್ರಾಡ್‌ ಜಾಲ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಬಿಹಾರ ಮೂಲದ ಆರೋಪಿ ವಿಕಾಸ್ ಕುಮಾರ್ ಎಂಬಾತನನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಖದೀಮರು ಬಿಹಾರದ ದಶರತಪುರದ ನಿವಾಸಿಗಳು ಎಂದು ತನಿಖೆ ವೇಳೆ ತಿಳಿದುಬಂದಿತ್ತು. ಬಿಹಾರದ ದಶರಥಪುರ ಗ್ರಾಮದ 20-25 ವರ್ಷದ ಯುವಕರು ಈ ದಂಧೆಯಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ. ಗ್ರಾಮದಲ್ಲಿ ಬರೋಬ್ಬರಿ 150 ಯುವಕರು ಸೈಬರ್ ಅಪರಾಧದಲ್ಲಿ ನಿರತರಾಗಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಬಿಹಾರದ ದಶರತಪುರದಲ್ಲಿ ಆರೋಪಿ ವಿಕಾಸ್​​ನನ್ನ ಬಂಧಿಸಿ ಕರೆದುಕೊಂಡು ಬರಲಾಗಿದೆ.

ಸೆಪ್ಟೆಂಬರ್ 15ರಂದು ಉಪೇಂದ್ರ ದಂಪತಿ ಫೋನ್ ಹ್ಯಾಕ್ ಆಗಿತ್ತು. ಸೈಬರ್ ಫ್ರಾಡ್ ಮಾಡಿ ಲಕ್ಷಾಂತರ ರೂಪಾಯಿಯನ್ನು ಖದೀಮರು ದೋಚಿದ್ದರು. ಸದ್ಯ ಆರೋಪಿಯನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸ್ತಿದ್ದಾರೆ.

ಆನ್​​​​ಲೈನ್​​​​ನಲ್ಲಿ ಕೆಲ ವಸ್ತುಗಳನ್ನು ಪ್ರಿಯಾಂಕಾ ಬುಕ್ ಮಾಡಿದ್ದರು. ಇದೇ ವೇಳೆ ಪ್ರಿಯಾಂಕಾ ಅವರ ಮೊಬೈಲ್​​ಗೆ ಸೈಬರ್ ಖದೀಮರು ಕಾಲ್ ಮಾಡಿ ಮೊಬೈಲ್​​ಗೆ ಲಿಂಕ್ ಕಳುಹಿಸಿದ್ದೇವೆ. ಅದನ್ನು ಓಪನ್ ಮಾಡುವಂತೆ ಹೇಳಿದ್ದಾರೆ. ಇದನ್ನು ನಂಬಿದ ಪ್ರಿಯಾಂಕ, ಲಿಂಕ್ ಓಪನ್ ಮಾಡಿದ್ದಾರೆ.

ಲಿಂಕ್ ಓಪನ್ ಮಾಡುತ್ತಿದ್ದಂತೆಯೇ, ವಾಟ್ಸ್​ಆಪ್​ ಹ್ಯಾಕ್ ಆಗಿದೆ. ಪ್ರಿಯಾಂಕಾ ಕಾಂಟಕ್ಟ್‌ನಲ್ಲಿದ್ದರಿಗೆ 55 ಸಾವಿರ ಕಳುಹಿಸಿ ಎಂದು ಮೆಸೇಜ್ ಮಾಡಿದ್ದಾರೆ. ಇತ್ತ ಪ್ರಿಯಾಂಕಾ ಮೆಸೇಜ್ ನೋಡಿ ಕರೆ ಮಾಡಿದವರ ಕಾಲ್ ಕಟ್ ಆಗ್ತಿತ್ತು. ಎಮರ್ಜೆನ್ಸಿ ಇದೆ ಹಣ ಹಾಕಿ ಅಂತ ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಮಾಡಿದ್ದರಿಂದ ​ಕೆಲವರು ತುರ್ತಾಗಿ ಅಗತ್ಯ ಇರಬಹುದು ಎಂದು ಹಣ ಕಳುಹಿಸಿದ್ದರು. ಉಪೇಂದ್ರ ಪುತ್ರ ಕೂಡ ತಾಯಿ ಅಕೌಂಟ್​​ಗೆ ಐವತ್ತು ಸಾವಿರ ಹಣಹಾಕಿದ್ದರು. ಅದೇ ರೀತಿ ಒಂದೂವರೆ ಲಕ್ಷ ಹಣವನ್ನು ಸೈಬರ್ ವಂಚಕರು ಅಕೌಂಟ್​​ಗೆ ಹಾಕಿಸಿಕೊಂಡಿದ್ದರು.

ವಿಚಾರ ಗೊತ್ತಾಗ್ತಿದ್ದಂತೆಯೇ ಗಾಬರಿಯಾಗಿದ್ದ ಉಪೇಂದ್ರ ದಂಪತಿ, ಸದಾಶಿವನಗರ ಠಾಣೆಗೆ ಬಂದು ದೂರು ನೀಡಿದ್ದರು. ಬೆಂಗಳೂರು ಪೊಲೀಸರು ಸೈಬರ್ ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಸದ್ಯ ಓರ್ವನ ಬಂಧನ ಆಗಿದ್ದು ತನಿಖೆ ಪ್ರಗತಿಯಲ್ಲಿದೆ.

ಇದನ್ನೂ ಓದಿ: Crop Insurance : 20 ದಿನದಲ್ಲಿ ರೈತರ ಖಾತೆಗೆ ಜಮೆಯಾಗಲಿದೆ ಬೆಳೆ‌ ವಿಮೆ

=============

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/CtGAO-3-DzU?si=ovV1ndkpZP-76lQQ

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page