ಬ್ರೇಕಿಂಗ್ ನ್ಯೂಸ್
ಪುತ್ತೂರು

Crop Insurance : 20 ದಿನದಲ್ಲಿ ರೈತರ ಖಾತೆಗೆ ಜಮೆಯಾಗಲಿದೆ ಬೆಳೆ‌ ವಿಮೆ

Crop Insurance : ಬೆಳೆ ವಿಮೆಯು ರೈತರು ಬೆಳೆದ ಬೆಳೆಗಳಿಗೆ ಪ್ರಾಕೃತಿಕ ಆಪತ್ತು, ಕೀಟ, ರೋಗ, ಅಥವಾ ಹವಾಮಾನ ವೈಪರೀತ್ಯದಿಂದ ಉಂಟಾಗುವ ನಷ್ಟದಿಂದ ರೈತರಿಗೆ ರಕ್ಷಣೆಯನ್ನು ನೀಡುವ ಸಲುವಾಗಿ ಬಂದಿರುವ ಯೋಜನೆಯಾಗಿದೆ. ಇದು ಸರ್ಕಾರದ ಸಹಾಯಧನದೊಂದಿಗೆ ರೈತರ ಹಿತಕ್ಕಾಗಿ ರೂಪಿಸಲಾದ ವಿಮೆ ಯೋಜನೆ ಆಗಿದೆ.‌ ಇದನ್ನು 2016ರಿಂದ ಜಾರಿಗೆ ತರಲಾಗಿದೆ.

ಆದರೆ, ಕಳೆದ ವರ್ಷ ನವೆಂಬರ್ 4 ರಂದು ಬೆಳೆ ವಿಮೆ ರೈತರ ಖಾತೆಗೆ ಜಮೆಗೊಂಡಿತ್ತು. ಈ ಬಾರಿ ನ.11ರವರೆಗೂ ಪರಿಹಾರ ಮೊತ್ತ ರೈತರ ಖಾತೆಗೆ ಜಮೆಯಾಗದ ಹಿನ್ನೆಲೆಯಲ್ಲಿ ಮಂಗಳವಾರ ಶಾಸಕ ಅಶೋಕ್ ರೈ ಅವರು ವಿಮಾ ಕಂಪನಿ ಅಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿ,‌ ಶಾಸಕರು ವಿಮಾ ಮೊತ್ತ ತಡವಾಗಿರುವ ಬಗ್ಗೆ ವಿವರಣೆ ಪಡೆದುಕೊಂಡಿರುತ್ತಾರೆ. ಕಳೆದ ಬಾರಿ ನವೆಂಬರ್ ಮೊದಲವಾರದಲ್ಲಿ ಜಮೆಯಾಗಿದ್ದು, ಈ ಬಾರಿ ತಡವಾಗಿದ್ದರಿಂದ ರೈತರಿಗೆ ಆತಂಕ ಉಂಟಾಗಿತ್ತು. ಕೃಷಿಯ ಬಗ್ಗೆ ಚಿಂತಾಕ್ರಾಂತರಾಗಿದ್ದರು. ನೂರಾರು ಮಂದಿ ರೈತರು ಶಾಸಕರಲ್ಲಿ ಈ ವಿಚಾರದ ಬಗ್ಗೆ ದೂರು ಸಲ್ಲಿಸಿದ್ದರು. ರೈತರ ಪರವಾಗಿ ಮಂಗಳವಾರ ಬೆಳಗ್ಗೆ ಅಧಿಕಾರಿಗಳ ಜೊತೆ ಮಾತನಾಡಿದಾಗ 20 ದಿನದೊಳಗೆ ಫಲಾನುಭವಿ ರೈತರ ಖಾತೆಗೆ ಬೆಳೆ ವಿಮೆ ಜಮೆಯಾಗಲಿದೆ ಎಂದು ಶಾಸಕರು ತಿಳಿಸಿರುವುದಾಗಿ ವರದಿಯಾಗಿರುತ್ತದೆ.

2024 – 25 ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ರೈತರ ಖಾತೆಗೆ ಜಮೆಯಾಗಿಲ್ಲವೆಂದು ಯಾರೂ ಆತಂಕ ಪಡಬೇಕಾಗಿಲ್ಲ. ವಿಮಾ ಕಂಪೆನಿಯ ಜೊತೆ ನಾನೇ ಖುದ್ದಾಗಿ ಮಾತನಾಡಿದ್ದೇನೆ. ಯಾವುದೋ ಕಾರಣಕ್ಕೆ ತಡವಾಗಿರಬಹುದು. ವಿಮಾ ಮೊತ್ತ ಎಲ್ಲ ರೈತರ ಖಾತೆಗೆ ಬಂದೇ ಬರುತ್ತದೆ ಎಂದು ಶಾಸಕ ಅಶೋಕ್ ರೈ ರೈತರಿಗೆ ಭರವಸೆ ನೀಡಿದರು.

ಇದನ್ನೂ ಓದಿ :Delhi Blast: ಬಂಧಿತ ವೈದ್ಯೆಗೆ ‘ಜೈಶ್ ಇ ಮಹಮದ್’ ಉಗ್ರ ಸಂಘಟನೆಯ ಜೊತೆ ಸಂಪರ್ಕ

………

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/CtGAO-3-DzU?si=ovV1ndkpZP-76lQQ

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 12

You cannot copy content of this page