E – Card : ಇ-ಖಾತೆ ವ್ಯವಸ್ಥೆ ಎಂದರೆ, ಭೂಮಿಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲು, ನವೀಕರಿಸಲು ಹಾಗೂ ಆನ್‌ಲೈನ್‌ನಲ್ಲಿ ಪಾವತಿ ಮಾಡಲು ಸಹಾಯಮಾಡುವ ಇಲೆಕ್ಟ್ರಾನಿಕ್ ದಾಖಲೆಗಳಿಗೆ ಇರುವ ಒಂದು ವ್ಯವಸ್ಥೆ. ಇದನ್ನು ಮುಖ್ಯವಾಗಿ ಕರ್ನಾಟಕ ಸರ್ಕಾರವು ಭೂಮಿಯ ಮಾಲೀಕತ್ವ ಮತ್ತು ಆಸ್ತಿ ತೆರಿಗೆ ಪಾವತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಪರಿಚಯಿಸಿದೆ.
ಕಂದಾಯ ವಿಭಾಗದ ಅಧಿಕಾರಿಗಳ ಪ್ರಕಾರ, ಭ್ರಷ್ಟಾಚಾರವನ್ನು ಕಡಿಮೆ ಮಾಡುವಲ್ಲಿ ಮತ್ತು ಏಜೆಂಟರು, ಮಧ್ಯವರ್ತಿಗಳಿಂದ ಶೋಷಣೆಯನ್ನು ತಡೆಯುವಲ್ಲಿ ಹೊಸ ಇ- ಖಾತಾ ವ್ಯವಸ್ಥೆಯನ್ನು ಮಾಡಲಾಗಿದ್ದು, ಇದು ಅಧಿಕಾರಿ-ಮಧ್ಯವರ್ತಿಗಳ ಒಪ್ಪಂದವನ್ನು ತಡೆಯುವಲ್ಲಿ ಸಹಕಾರಿಯಾಗಿದೆ. ಬೆಂಗಳೂರಿನಲ್ಲಿ ಆಸ್ತಿದಾರರು ಇ – ಖಾತಾ ಪಡೆದುಕೊಳ್ಳುವುದಕ್ಕೆ ಸಮಸ್ಯೆ ಆಗುತ್ತಿರುವ ಹಿನ್ನೆಲೆಯಲ್ಲಿ ಆಸ್ತಿದಾರರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಗ್ರೇಟರ್ ಬೆಂಗಳೂರು ಆಡಳಿತವು ಹೊಸ ವ್ಯವಸ್ಥೆಯನ್ನು ಜಾರಿ ಮಾಡಿದೆ. ಅದುವೇ, ಹೊಸ ಇ – ಖಾತಾ ವ್ಯವಸ್ಥೆಯನ್ನು ಮಾಡಲಾಗಿದ್ದು, ಫೇಸ್‌ಲೆಸ್, ಕಾಂಟ್ಯಾಕ್ಟ್ – ಲೆಸ್ ಮತ್ತು ಆನ್‌ಲೈನ್ ಇ-ಖಾತಾ ಪರಿಚಯಿಸಲಾಗಿದೆ.
ಈ ಹೊಸ ವ್ಯವಸ್ಥೆಯಿಂದಾಗಿ ಅಂತಿಮ ಇ-ಖಾತಾ ಅಥವಾ ಹೊಸ ಖಾತಾವನ್ನು ಅನುಮೋದಿಸಲು ಎಆರ್‌ಒ ಅಥವಾ ಕೇಸ್ ವರ್ಕರ್ ಆಸ್ತಿ ದಾಖಲೆಗಳನ್ನು ಮಾತ್ರ ನೋಡಬೇಕಾಗುತ್ತದೆ. ದಾಖಲೆಗಳು ಆನ್‌ಲೈನ್‌ನಲ್ಲಿ ಲಭ್ಯವಿರುವಿದ್ದು, ನಾಗರಿಕರು ಅವರನ್ನು ಭೇಟಿ ಮಾಡುವ ಅಗತ್ಯವಿಲ್ಲ. ಐಟಿ ವ್ಯವಸ್ಥೆಯು ಸಾರ್ವಜನಿಕರ ಅರ್ಜಿಗಳನ್ನು ಅರ್ಜಿ ಸಲ್ಲಿಸಿದ ಉಪವಿಭಾಗದ ಹೊರಗಿನ ಅಧಿಕಾರಿಗಳಿಗೆ ಹಂಚಿಕೆ ಮಾಡುತ್ತದೆ. ಇದರಿಂದಾಗಿ ಸಾರ್ವಜನಿಕರ ಅರ್ಜಿಗಳನ್ನು ಎಲ್ಲಾ ಅಧಿಕಾರಿಗಳಿಗೆ ಸಮಾನವಾಗಿ ವಿತರಿಸಲಾಗುತ್ತದೆ. ಅಲ್ಲದೇ ನಗರ ಪಾಲಿಕೆದೊಳಗಿನ ಎಲ್ಲರಿಗೂ ಕೆಲಸದ ಹೊರೆ ಸಮಾನವಾಗಿ ಹಂಚಿಕೆಯಾಗುತ್ತದೆ. ಮಧ್ಯವರ್ತಿಗಳು ತಮ್ಮ ಇ-ಖಾತಾವನ್ನು ಪಡೆಯುವ ಭರವಸೆಗಳೊಂದಿಗೆ ಆಸ್ತಿದಾರರಿಂದ ಹಣವನ್ನು ಸಂಗ್ರಹಿಸುತ್ತಿದ್ದರು, ಅದು ಈಗ ಈ ವ್ಯವಸ್ಥೆಯಲ್ಲಿ ನಿಂತುಹೋಗಲಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :Delhi Blast: ಬಂಧಿತ ವೈದ್ಯೆಗೆ ‘ಜೈಶ್ ಇ ಮಹಮದ್’ ಉಗ್ರ ಸಂಘಟನೆಯ ಜೊತೆ ಸಂಪರ್ಕ
…………
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/CtGAO-3-DzU?si=ovV1ndkpZP-76lQQ











