Puttur: ತನ್ನ ಅಂತಾರಾಷ್ಟ್ರೀಯ ಮಟ್ಟದ ಸಾಧನೆ, ಶಿಸ್ತು, ಪ್ರಗತಿಯಿಂದ ಎಲ್ಲರ ಮನಗೆದ್ದಿರುವ ಅಕ್ಷಯ ಕಾಲೇಜು, ಪುತ್ತೂರು ಹಾಗೂ ಸುತ್ತಮುತ್ತಲಿನ ತಾಲೂಕುಗಳಲ್ಲಿಯೇ ಪ್ರಪ್ರಥಮ ಬಾರಿಗೆ ಏವಿಯೇಷನ್ ಅಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ಕೋರ್ಸನ್ನು ಪರಿಚಯಿಸಿ, ಅಂತರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅವಕಾಶವನ್ನೊದಗಿಸಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕನಸನ್ನು ನನಸಾಗಿಸಿದೆ.
2021ರಲ್ಲಿ ಬಿ.ಕಾಂ ವಿದ್ ಏವಿಯೇಷನ್ ಪ್ರಾರಂಭಗೊಂಡು, ತನ್ನ ತೇರ್ಗಡೆ ಹೊಂದಿರುವ ಏವಿಯೇಷನ್ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಉದ್ಯೋಗ ಗಳಿಸಿಕೊಳ್ಳುವ ಮೂಲಕ ಸಂಸ್ಥೆಯ ಸಾಧನೆಗೆ ಸಾಕ್ಷಿಯಾಗಿದ್ದಾರೆ.
ಉದ್ಯೋಗ ಗಿಟ್ಟಿಸಿಕೊಂಡ ವಿದ್ಯಾರ್ಥಿಗಳು
- ಮುಸ್ತಾಫ-ಮಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ – ಏರ್ ಇಂಡಿಯಾ ಸ್ಯಾಟ್ಸ್
- ಜಗತ್ – ರಿಲೇ, ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್
- ಸಾಕ್ಷಿ – ಡುಫ್ರಿ, ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್
- ಕೃತಿ – ಡುಫ್ರಿ ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್
- ಹಂಸಿನಿ – ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್
- ಕ್ಷೇಮ-ರಾಯಲ್ ವಾಲ್ಟ್ರಾನ್ಸ್ ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್
- ಶ್ರಾವ್ಯ – ರಾಯಲ್ ವಾಲ್ಟ್ರಾನ್ಸ್ ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್
- ಸವಿ ದೇಚಮ್ಮ – ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್
- ಟೀನಾ – ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್
- ಅಂಜಲಿ – ಇಂಡಿಗೋ ಏರ್ಲೈನ್ಸ್, ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್
- ಮೇಘಶ್ರೀ – ಇಂಡಿಗೋ ಏರ್ಲೈನ್ಸ್ – ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್
- ವಿಸ್ಮಿತ – ಫಾಕ್ಸ್ಕಾನ್ ಕಂಪನಿ ಬೆಂಗಳೂರು
- ರಿತೀಕ್ಷಾ – ಫಾಕ್ಸ್ಕಾನ್ ಕಂಪನಿ ಬೆಂಗಳೂರು
- ವರ್ಷಿಣಿ – ಫಾಕ್ಸ್ಕಾನ್ ಕಂಪನಿ ಬೆಂಗಳೂರು
- ಜೀವನ್ – ಮೆನ್ಜೀಸ್ ಏವಿಯೇಷನ್ - ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್
ಇಂದು ಅಕ್ಷಯ ಕಾಲೇಜು
ಕೆರಿಯರ್ ಡೆಸ್ಟಿನಿ ಮೂಲಕ ನುರಿತ ಬೋಧಕ ವೃಂದದೊಡನೆ ಕೇವಲ ಬಿ.ಕಾಂ ಪದವಿಯೊಂದಿಗೆ ಮಾತ್ರವಲ್ಲದೆ , ಬಿಸಿಎ, ಫ್ಯಾಷನ್ ಡಿಸೈನ್, ಇಂಟೀರಿಯರ್ ಡಿಸೈನ್ ಹಾಗೂ ವಿಶೇಷವಾಗಿ ಬಿ. ಎ ವಿದ್ ಏವಿಯೇಷನ್ ಅಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ಮೂಲಕವೂ ವಿದ್ಯಾರ್ಥಿಗಳಿಗೆ ಮತ್ತಷ್ಟು ಅವಕಾಶ ಕಲ್ಪಿಸುತ್ತಿದೆ.
ಶೈಕ್ಷಣಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ವಿಶೇಷ ವಿದ್ಯಾರ್ಥಿವೇತನವೂ ದೊರೆಯುತ್ತಿದೆ.
ಹಾಗೆಯೇ, ಅಕ್ಷಯ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ (ರಿ.)ನ ಅಕ್ಷಯ ಕೆರಿಯರ್ ಅಕಾಡೆಮಿ ಹಾಗೂ ಕೆರಿಯರ್ ಡೆಸ್ಟಿನಿ, ಮಂಗಳೂರು ಜಂಟಿಯಾಗಿ ಯಾವುದೇ ಸಂಸ್ಥೆಯಲ್ಲಿ ಪದವಿ ಅಥವಾ ಪಿಯುಸಿ ಪೂರೈಸಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪುತ್ತೂರಿನ ದರ್ಬೆಯಲ್ಲಿ ಒಂದು ವರ್ಷದ ಏವಿಯೇಷನ್ ಅಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ಕೋರ್ಸನ್ನು ಕೂಡ ಪ್ರಾರಂಭಿಸಿದೆ. ಈ ವಿಭಾಗದಲ್ಲಿಯೂ ಹೆಚ್ಚಿನ ವಿದ್ಯಾರ್ಥಿಗಳಿಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಮುಂದಿನ 2026-27ನೇ ಶೈಕ್ಷಣಿಕ ಸಾಲಿನಿಂದ ಬಿಬಿಎ ಲಾಜಿಸ್ಟಿಕ್, ಬಿಬಿಎ ವಿತ್ ಏವಿಯೇಷನ್ ಅಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ಪದವಿಯನ್ನು ಪ್ರಾರಂಭಿಸಲು ಚಿಂತಿಸಿದ್ದು, ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶ ಒದಗಿ ಬರಲಿದೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.
ಇದನ್ನೂ ಓದಿ: Singer Palak Mucchal: ಬರೋಬ್ಬರಿ 3,800 ಮಕ್ಕಳಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿದ ಖ್ಯಾತ ಗಾಯಕಿ!
=============
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











