ಬ್ರೇಕಿಂಗ್ ನ್ಯೂಸ್
ದೇಶ

Delhi Blast: ಬಂಧಿತ ವೈದ್ಯೆಗೆ ‘ಜೈಶ್ ಇ ಮಹಮದ್’ ಉಗ್ರ ಸಂಘಟನೆಯ ಜೊತೆ ಸಂಪರ್ಕ

ದೆಹಲಿ ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಅಸಲಿ ಸತ್ಯಗಳು ಬಯಲಾಗ್ತಿದೆ. ತೀವ್ರವಾಗಿ ತನಿಖೆ ಕೈಗೊಂಡಿರುವ ಪೊಲೀಸರ ತಂಡ ಹಲವರನ್ನು ಬಂಧಿಸಿದೆ. ಈ ಪೈಕಿ ಮಹಿಳಾ ವೈದ್ಯೆಯ ಬಂಧನ ಆಗಿದ್ದು, ಈಕೆಯ ಪ್ರಾಥಮಿಕ ವಿಚಾರಣೆಯಲ್ಲಿ ಹಲವು ಅಂಶಗಳು ಬಯಲಾಗಿದೆ.

ದೆಹಲಿಯಲ್ಲಿ 12 ಮಂದಿಯ ಸಾವಿಗೆ ಕಾರಣವಾದ ಬಾಂಬ್ ಸ್ಫೋಟದಲ್ಲಿ ಬಂಧನಕ್ಕೀಡಾಗಿರುವ ಲಕ್ನೋ ಮೂಲದ ಮಹಿಳಾ ವೈದ್ಯೆಗೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ (ಜೆಇಎಂ) ಜೊತೆ ನಂಟು ಹೊಂದಿದ್ದಳು ಎಂಬುವುದು ದೃಢವಾಗಿದೆ. ಈಕೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಮಹಿಳಾ ವಿಭಾಗವನ್ನು ಸ್ಥಾಪಿಸುವ ಮತ್ತು ನೇಮಕಾತಿ ಮಾಡುವ ಜವಾಬ್ದಾರಿ ನೀಡಲಾಗಿತ್ತು ಎಂಬ ಸ್ಫೋಟಕ ವಿಷಯ ಬಯಲಾಗಿದೆ.

ಈ ಬಗ್ಗೆ NDTV ವರದಿ ಮಾಡಿದ್ದು, ದೆಹಲಿ ಬಳಿಯ ಫರಿದಾಬಾದ್‌ನಲ್ಲಿ ನಡೆದ ಬೃಹತ್ ಸ್ಫೋಟಕಗಳ ಸಾಗಣೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಲಕ್ನೋ ಮೂಲದ ಮಹಿಳಾ ವೈದ್ಯೆ ಶಾಹೀನ್ ಶಾಹಿದ್ ಪಾಕಿಸ್ತಾನಿ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ ಜೊತೆಗೆ ನೇರ ಸಂಪರ್ಕ ಹೊಂದಿದ್ದು ದೃಢವಾಗಿದೆ.

ಪಾಕಿಸ್ತಾನದಲ್ಲಿ ಜೆಇಎಂ ಸಂಸ್ಥಾಪಕ ಮಸೂದ್ ಅಜರ್‌ನ ಸಹೋದರಿ ಸಾದಿಯಾ ಅಜರ್ ನೇತೃತ್ವದ ಜೆಇಎಂನ ಮಹಿಳಾ ವಿಭಾಗವಾದ ಜಮಾತ್ ಉಲ್-ಮೊಮಿನಾತ್‌ನ ಕಮಾಂಡ್ ಅನ್ನು ಡಾ. ಶಾಹೀನ್ ಶಾಹಿದ್ ಅವರಿಗೆ ವಹಿಸಲಾಗಿತ್ತು. ವೈದ್ಯೆ ಶಹೀನ್ ಶಾಹಿದ್ ಲಕ್ನೋದ ಲಾಲ್ ಬಾಗ್ ನಿವಾಸಿ.

ಫರಿದಾಬಾದ್‌ನಲ್ಲಿ ಜೆಇಎಂನ ಭಯೋತ್ಪಾದನಾ ಮಾಡ್ಯೂಲ್ ಅನ್ನು ಪತ್ತೆಹಚ್ಚಲಾಗಿತ್ತು. ಬಳಿಕ ಆಕೆಯ ಕಾರಿನಿಂದ ಅಸಾಲ್ಟ್ ರೈಫಲ್ ಅನ್ನು ವಶಪಡಿಸಿಕೊಂಡ ನಂತರ ಬಂಧಿಸಲಾಗಿದೆ. ಅಸಾಲ್ಟ್ ರೈಫಲ್, ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಲು ಬಳಸಿದ ಕಾರು ಶಾಹೀನ್ ಶಾಹಿದ್‌ಗೆ ಸೇರಿದೆ ಎಂದು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ.

ಇದನ್ನೂ ಓದಿ: Sivasri Skandaprasad: ಪತ್ನಿ ಶಿವಶ್ರೀಯನ್ನು ಎತ್ತಿಕೊಂಡು ಮುದ್ದಾಡಿದ ಸಂಸದ ತೇಜಸ್ವಿ ಸೂರ್ಯ!

=====================

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess 

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 19

You cannot copy content of this page