Delhi Blast: ನವದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟವು ಇಡೀ ರಾಷ್ಟ್ರವನ್ನೇ ತಲ್ಲಣಗೊಳಿಸಿದ್ದು, ದೆಹಲಿಯ ಕೆಂಪು ಕೋಟೆ ಬಳಿಯ ಲಾಲ್ ಖಿಲಾ ಮೆಟ್ರೋ ನಿಲ್ದಾಣದ ಗೇಟ್ ನಂಬರ್ 1 ರಲ್ಲಿ ಕಾರು ಸ್ಪೋಟಿಸಿ 12 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಮೃತರ ಕುಟುಂಬಕ್ಕೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ತಲಾ 10 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಇದನ್ನೂ ಓದಿ: ಫರಿದಾಬಾದ್ ಕೇಸ್; ಮೌಲ್ವಿ ದಂಪತಿ ಬಂಧನ..!
ದೆಹಲಿಯಲ್ಲಿ ಮನೆಯಿಂದ ಆಚೆ ಬರೋಕೆ ಜನರಿಗೆ ಭಯ!
ಆಸ್ಪತ್ರೆಗಳಿಗೆ ತೆರಳಿ ಗಾಯಾಳುಗಳ ಆರೋಗ್ಯವನ್ನು ಸಿಎಂ ವಿಚಾರಿಸಿದ ಸಿಎಂ, ಸ್ಫೋಟದಲ್ಲಿ ಶಾಶ್ವತವಾಗಿ ಅಂಗವಿಕಲರಾದವರಿಗೆ 5 ಲಕ್ಷ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ದೆಹಲಿಯಲ್ಲಿ ಸಂಭವಿಸಿದ ಈ ಘಟನೆ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ. ಇಡೀ ದೆಹಲಿಯಲ್ಲಿ ಸೂತಕದ ಛಾಯೆ ಆವರಿಸಿದೆ. ಜನರು ಮನೆಯಿಂದ ಆಚೆ ಓಡಾಡಲು ಭಯಭೀತರಾಗಿದ್ದಾರೆ. ಇನ್ನು ಈ ದುರ್ಘಟನೆಗೆ ದೆಹಲಿ ಸಿಎಂ ರೇಖಾ ಗುಪ್ತಾ ತನ್ನ ಎಕ್ಸ್ ಖಾತೆಯಲ್ಲಿ ಈ ಕಷ್ಟದ ಸಮಯದಲ್ಲಿ, ದೆಹಲಿ ಸರ್ಕಾರವು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲಾ ಕುಟುಂಬಗಳಿಗೆ ಸಂತಾಪ ಸೂಚಿಸುತ್ತದೆ ಎಂದು ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ತಪಾಸಣೆ ಪ್ರಕ್ರಿಯೆ ಪೂರ್ಣಗೊಳಿಸಬೇಕು : ವಿಮಾನ ಪ್ರಯಾಣಿಕರಲ್ಲಿ ಮನವಿ..!
ಇಡೀ ದೇಶಾದ್ಯಂತ ಬಾಂಬ್ ಸ್ಪೋಟಿಸಲು ಪ್ಲ್ಯಾನ್ ಮಾಡಿದ್ರಾ..?
ಈ ಸ್ಫೋಟದ ಹಿನ್ನಲೆ ಬಗ್ಗೆ ನೋಡೋದಾದ್ರೆ, ಭಯೋತ್ಪಾದನೆ ಶಂಕೆ ಕೂಡ ವ್ಯಕ್ತವಾಗಿದ್ದು, ದೆಹಲಿ ಮಾದರಿಯಲ್ಲಿ ಇಡೀ ದೇಶಾದ್ಯಂತ ಸ್ಫೋಟ ನಡೆಸಲು ಪ್ಲಾನ್ ನಡೆಸಲಾಗಿದ್ಯಾ? ಎಂಬ ಅನುಮಾನ ಮೂಡಿದೆ. ಕಳೆದ 30 ದಿನಗಳಲ್ಲಿ ಪಂಜಾಬ್, ಆಂಧ್ರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಜಮ್ಮು-ಕಾಶ್ಮೀರ, ಹರ್ಯಾಣದಲ್ಲಿ ಉಗ್ರರ ಬಂಧನವಾಗಿದೆ. ಇನ್ನು ಬಾಂಬ್ ಸ್ಪೋಟದ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಸಿಎಂ ಅಲರ್ಟ್ ಘೋಷಿಸಿದ್ದು, ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಅದರಲ್ಲೂ ಗಡಿ ಭಾಗಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಇಂತಹ ದುರ್ಘಟನೆ ಮುಂದೆ ನಡೆಯಬಾರದು ಎಂದು ಜನ ಭಯಗೊಂಡಿದ್ದಾರೆ.
ಇದನ್ನೂ ಓದಿ: ಬಾಂಬ್ ಸ್ಪೋಟ ಹಿನ್ನೆಲೆ ಮುಖ್ಯಮಂತ್ರಿಗೆ ಸಿ. ಟಿ.ರವಿ ಚಾಲೆಂಜ್..!!
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ: https://www.youtube.com/@tulutimess











