Health : ಹವಾಮಾನ ಬದಲಾಗ್ತಾ ಇವೆ. ಬೆಳಗ್ಗೆ ಇರುವಂತೆ ಮಧ್ಯಾಹ್ನ ಇರೋದಿಲ್ಲ. ಈಗಿನ ಹವಾಮಾನ ಹೇಗೆ ಅನ್ನೋದನ್ನ ಅಂದಾಜು ಮಾಡೋದಿಕ್ಕೂ ಕಷ್ಟ. ಹಾಗಿರುವಾಗ, ಬದಲಾಗುತ್ತಿರುವ ಹವಾಮಾನದಿಂದಾಗಿ ಋತುಮಾನದ ರೋಗಗಳ ಅಪಾಯವು ದಿನೇ ದಿನೇ ಹೆಚ್ಚುತ್ತಿದೆ. ಹೀಗಾಗಿ, ಹೆಚ್ಚಿನವರಲ್ಲಿ ಜ್ವರ, ಶೀತದಂತಹ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಜ್ವರ ಬಂದಾಗ ಸಹಜವಾಗಿ ಏನು ತಿನ್ನೋದಕ್ಕೆ ಹಾಗೂ ಕುಡಿಯೋದಕ್ಕೂ ಮನಸ್ಸಾಗೋದಿಲ್ಲ. ಆದರೆ, ಹೆಚ್ಚಿನವರು ಕಾಫಿ ಹಾಗೂ ಟೀ ಸೇವನೆ ಮಾಡಿ ಸ್ವಲ್ಪ ರಿಲ್ಯಾಕ್ಸ್ ಆಗ್ಬೇಕು ಅಂತ ತಿಳ್ಕೊತ್ತಾರೆ. ಆದರೆ, ತಜ್ಞರು ಜ್ವರವಿದ್ದಾಗ ಕಾಫಿಯಲ್ಲಿರುವ ಕೆಫೀನ್ ಅಂಶ ಹೆಚ್ಚಾಗಿ ಇರುವ ಕಾರಣ ಕಾಫಿ ಸೇವನೆ ತ್ಯಜಿಸುವುದು ಉತ್ತಮ ಎಂದು ಸಲಹೆ ನೀಡ್ತಾರೆ.
ಹೌದು….! ಜ್ವರ ಬಂದಾಗ ದೇಹವು ಸಹಜವಾಗಿ ಆಯಾಸಗೊಳ್ಳುತ್ತದೆ. ಈ ಸಮಯದಲ್ಲಿ ದೇಹಕ್ಕೆ ವಿಶ್ರಾಂತಿ ಅಗತ್ಯವಾಗಿ ಬೇಕು. ಈ ಸಮಯದಲ್ಲಿ ನೀವೇನಾದ್ರೂ ಕಾಫಿ ಸೇವನೆ ಮಾಡಿದ್ರೆ ಇದರಲ್ಲಿರುವ ಕೆಫೀನ್ ಅಂಶವು ದೇಹವನ್ನು ಎಚ್ಚರವಾಗಿರುವಂತೆ ಮಾಡುತ್ತದೆ. ಆದರೆ ಕಾಫಿ, ಟೀ ಸೇರಿದಂತೆ ಪಾನೀಯಗಳ ಸೇವನೆಯೂ ನಿಮ್ಮ ದೇಹಕ್ಕೆ ವಿರುದ್ಧವಾಗಿ ಪ್ರತಿಕ್ರಿಯಿಸಬಹುದು. ಇನ್ನು ಈ ಕಾಫಿ ಕುಡಿಯೋದ್ರಿಂದ ನಿಮಗೆ ನಿದ್ರೆ ಮಾಡಲು ಕಷ್ಟವಾಗುತ್ತದೆ. ಸರಿಯಾಗಿ ವಿಶ್ರಾಂತಿ ಪಡೆಯೋದಿಕ್ಕೆ ಆಗೋದಿಲ್ಲ. ಇದು ದೇಹದಲ್ಲಿ ನಿರ್ಜಲೀಕರಣಕ್ಕೂ ಕಾರಣವಾಗುತ್ತದೆ. ಆದರೆ ಆರೋಗ್ಯ ಹದಗೆಟ್ಟಾಗ ನೀರಿನಾಂಶವನ್ನು ಕಾಯ್ದುಕೊಳ್ಳುವುದು ಮುಖ್ಯ. ಆದರೆ ಈ ಕಾಫಿ ಸೇವನೆ ಹೆಚ್ಚು ಮೂತ್ರ ವಿಸರ್ಜನೆ ಮಾಡುವಂತೆ ಮಾಡಬಹುದು. ಈ ಕಾರಣದಿಂದ ಈ ಸಮಯದಲ್ಲಿ ಕಾಫಿ ಸೇವನೆ ಒಳ್ಳೆಯದಲ್ಲ ಎನ್ನುತ್ತಾರೆ ತಜ್ಞರು.
ಈ ಕಾರಣ ಜ್ವರ ಬಂದಾಗ ಒಳ್ಳೆಯ ತರಕಾರಿ, ಪೌಷ್ಟಿಕ ಆಹಾರಗಳನ್ನೇ ಸೇವನೆ ಮಾಡಿ. ಜೀರ್ಣಕ್ರಿಯೆಗೆ ಸರಿ ಹೊಂದುವ ಆಹಾರಗಳನ್ನೇ ಸೇವಿಸೋದು ಉತ್ತಮ. ಈ ಕೇಫೀನ್ ಅಂಶ ಹೊಂದಿರುವ ಯಾವುದೇ ಪಾನೀಯಗಳನ್ನು ತಪ್ಪಿಯೂ ತೆಗೆದುಕೊಳ್ಳಬೇಡಿ. ಆಗಾಗ, ಬಿಸಿ ನೀರು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ.
ಇದನ್ನೂ ಓದಿ :Bengaluru: ಬಾಂಬ್ ಸ್ಪೋಟ ಹಿನ್ನೆಲೆ ಮುಖ್ಯಮಂತ್ರಿಗೆ ಸಿ. ಟಿ.ರವಿ ಚಾಲೆಂಜ್..!!
………..
ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/9fR6e9tLRSs?si=oeFOEtg8uLTHFOOH











