ಬ್ರೇಕಿಂಗ್ ನ್ಯೂಸ್
ಕರ್ನಾಟಕ

Dakshina Kannada : ವಾಹನ ಖರೀದಿಯಲ್ಲಿ ಭಾರೀ ಹೆಚ್ಚಳ…!

Dakshina Kannada : ದ್ವಿಚಕ್ರ ಹಾಗೂ ವಾಹನ ಸವಾರರೂ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಇದ್ದಾರೆ. ಎಲ್ಲೆಂದರಲ್ಲಿ ವಾಹನಗಳದ್ದೇ ಹಾವಳಿ. ಹಾಗಿರುವಾಗ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವಾಹನ ಖರೀದಿಯಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ದಸರಾದಿಂದ ಆರಂಭಗೊಂಡ ವಾಹನ ಮಾರಾಟ ದೀಪಾವಳಿಯ ಸಮಯದಲ್ಲಿ ಗರಿಷ್ಠ ಮಟ್ಟವನ್ನು ತಲುಪಿದ್ದು, ಈಗಲೂ ಖರೀದಿ ಮುಂದುವರಿಯುತ್ತಲೇ ಇದೆ ಎಂದು ವರದಿಯಾಗಿರುತ್ತದೆ.

ಹಬ್ಬದ ಸಲುವಾಗಿ ಆಕರ್ಷಕ ಕೊಡುಗೆ ಹಾಗೂ ಜಿಎಸ್ ಟಿಯಲ್ಲಿನ ಭಾತೀ ಪ್ರಮಾಣದ ಕಡಿತವು ಹೊಸ ವರ್ಷದವರೆಗೂ ವಾಹನ ಖರೀದಿ ಮುಂದುವರೆಯುವ ನಿರೀಕ್ಷೆ ಹೊಂದಿದೆ. ಈವರೆಗೆ, ಮಂಗಳೂರು, ಉಡುಪಿ, ಪುತ್ತೂರು ಮತ್ತು ಬಂಟ್ವಾಳ ಪ್ರದೇಶಗಳಲ್ಲಿ ಖರೀದಿಸಿದ ವಾಹನಗಳನ್ನು ನೋಂದಾಯಿಸಲಾಗಿದೆ. ಆದರೆ ಹಲವಾರು ನೋಂದಣಿಗಳು ಇನ್ನೂ ಪ್ರಕ್ರಿಯೆಯಲ್ಲಿವೆ. ಡೀಲರ್‌ಶಿಪ್‌ಗಳ ಮಾಹಿತಿ ಪ್ರಕಾರ, ಈ ಹಣಕಾಸು ವರ್ಷದಲ್ಲಿ ವಾಹನ ಮಾರಾಟ ಶೇ.20 ರಿಂದ 30ರಷ್ಟು ಹೆಚ್ಚಾಗಿದೆ. ಕೆಲವು ಬ್ರ್ಯಾಂಡ್‌ಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.80ರಷ್ಟು ಬೆಳವಣಿಗೆ ದಾಖಲಿಸಿವೆ. ಹೊಸದಾಗಿ ಖರೀದಿಸಿದ ವಾಹನಗಳಲ್ಲಿ ದ್ವಿಚಕ್ರ ವಾಹನಗಳು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುತ್ತಲೇ ಇವೆ.

ಮಂಗಳೂರು ಆರ್‌ಟಿಒ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ ಒಟ್ಟು 38 ಸಾವಿರಕ್ಕಿಂತ ಅಧಿಕ ವಾಹನಗಳು ನೋಂದಣಿಯಾಗಿದ್ದು, ಅಕ್ಟೋಬರ್‌ನಲ್ಲಿ 4 ಸಾವಿರಕ್ಕಿಂತ ಅಧಿಕ ವಾಹನಗಳು ನೋಂದಣಿಯಾಗಿವೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 26 ಸಾವಿರಕ್ಕಿಂತ ಅಧಿಮ ವಾಹನಗಳು ನೋಂದಣಿಯಾಗಿವೆ. ಅದರಲ್ಲಿ 4,506 ಅಕ್ಟೋಬರ್‌ನಲ್ಲಿ ನೊಂದಾಯಿಸಲ್ಪಟ್ಟಿದೆ. ಪುತ್ತೂರು ಆರ್‌ಟಿಒ ವ್ಯಾಪ್ತಿಯಲ್ಲಿ ಇಲ್ಲಿಯವರೆಗೆ 9 ಸಾವಿರ ವಾಹನಗಳು ನೋಂದಣಿಯಾಗಿವೆ. ಅಕ್ಟೋಬರ್‌ನಲ್ಲಿ 1,081 ನೋಂದಣಿಯಾಗಿತ್ತು. ಬಂಟ್ವಾಳ ಆರ್‌ಟಿಒ ಒಟ್ಟು 5,950 ವಾಹನ ನೋಂದಣಿಗಳನ್ನು ಕಂಡಿದ್ದು, ಇದರಲ್ಲಿ ಅಕ್ಟೋಬರ್‌ನಲ್ಲಿ 681 ಸೇರಿವೆ ಎಂದು ವರದಿಯಾಗಿರುತ್ತದೆ. ವಾಹನ ನೋಂದಣಿ ಪ್ರಕ್ರಿಯೆಗಳನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತಿದ್ದು, ಈ ತಿಂಗಳ ಅಂತ್ಯದ ವೇಳೆಗೆ ಅನೇಕ ಬಾಕಿ ನೋಂದಣಿಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ವರದಿಯಾಗಿರುತ್ತದೆ.

ಇದನ್ನೂ ಓದಿ :Bollywood : ಹಿರಿಯ ನಟ ನಿಧನದ ಸುದ್ದಿ ಸುಳ್ಳು : ನಟ ಧರ್ಮೇಂಧ ಆರೋಗ್ಯದಲ್ಲಿ ಚೇತರಿಕೆಯಿದೆ

……….

ವೀಡಿಯೋ ಸುದ್ದಿಗಳಿಗಾಗಿ ನಮ್ಮ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ :https://youtu.be/_3lkVv4R_q4?si=x3mk09U2SLlOUcmv

 

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 153

You cannot copy content of this page